| Post Name | Beat Forest Officer-SR for ST Adivasi |
|---|---|
| Department | Forest and wild life |
| Question Paper Code | 009/2023 |
| Category Code | 092/2022, 093/2022 |
| Date of Test | 28 January 2023 |
| Medium of Question | KANNADA |
| Exam Type | OMR Examination |
| Total Questions | 100 |
1
ಕೇರಳ ರಾಜ್ಯವು ಯಾವಾಗ ಅಸ್ತಿತ್ವಕ್ಕೆ ಬಂದಿತು?
Answer
A. 1956 ನವೆಂಬರ್ 1
2
1857ರಲ್ಲಿ ಮೊದಲ ಸ್ವಾತಂತ್ರ್ಯ ಚಳುವಳಿ ಎಲ್ಲಿ ಪ್ರಾರಂಭವಾಯಿತು?
Answer
D. ಮೀರತ್
3
ಸ್ವದೇಶಾಭಿಮಾನಿ ಸುದ್ದಿಪತ್ರಿಕೆಯ ಸಂಪಾದಕರು ಯಾರು?
Answer
B. ಕೆ. ರಾಮಕೃಷ್ಣ ಪಿಳ್ಳೈ
4
ಭಾರತದ ಮೊದಲ ರಾಕೆಟ್ ಉಡಾವಣಾ ಕೇಂದ್ರ ಯಾವುದು?
Answer
C. ಥುಂಬಾ
5
ಕೇರಳದ ಕ್ರೀಡೆಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
Answer
D. ಗೋದವರ್ಮರಾಜ
6
“ಸ್ವಾತಂತ್ರ್ಯ ನನ್ನ ಜನ್ಮಸಿದ್ದ ಹಕ್ಕು ಮತ್ತು ನಾನು ಅದನ್ನು ಗಳಿಸುತ್ತೇನೆ” ಎಂದವರು ಯಾರು?
Answer
A. ಬಾಲಗಂಗಾಧರ್ ತಿಲಕ್
7
1812ರ ಕುರಿಚ್ಯಾ ದಂಗೆಯ ನಾಯಕ ಯಾರು?
Answer
C. ರಾಮನ್ ನಂಬಿ
8
ಭಾಷಾವಾರು ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ಭಾರತದ ಮೊದಲ ರಾಜ್ಯ ಯಾವುದು?
Answer
B. ಆಂಧ್ರಪ್ರದೇಶ
9
ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಮೊದಲ ಮಲಯಾಳಿ ಮಹಿಳೆ ಯಾರು?
Answer
B. ಪಿ. ಟಿ. ಉಷಾ
10
ಕೇರಳದಲ್ಲಿನ ಪೂರ್ವಾತಿಪೂರ್ವ ಪರ್ವತ ಶ್ರೇಣಿ
Answer
C. ಪಶ್ಚಿಮ ಘಟ್ಟಗಳು
11
ಬ್ರಹ್ಮಸಮಾಜದ ಸಂಸ್ಥಾಪಕರು ಯಾರು?
Answer
A. ರಾಜಾರಾಮ್ ಮೋಹನ್ ರಾಯ್
12
ಭಾರತದ ಸಂವಿಧಾನ ಯಾವ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತು?
Answer
D. 1950
13
ಸಾಧುಜನಪರಿಪಾಲನ ಸಂಘದ ಸಂಸ್ಥಾಪಕರು ಯಾರು?
Answer
C. ಅಯ್ಯಂಕಾಳಿ
14
ಕೆಳಗಿನವುಗಳಲ್ಲಿ ಕಾರ್ಪೊರೇಷನ್ ಆಗಿರದಿರುವುದನ್ನು ಕಂಡುಹಿಡಿಯಿರಿ.
Answer
A. ಪೀರುಮೇಡು
15
ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಒಳಗೆ ಹರಿಯುವ ನದಿ
Answer
D. ಕುಂತಿಪುಳ್ಹ
16
1921 ರಲ್ಲಿ ಒಟ್ಟಪ್ಪಾಲಂನಲ್ಲಿ ನಡೆದ ಮೊದಲ ಕೇರಳ ರಾಜ್ಯ ರಾಜಕೀಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
Answer
B. ಟಿ. ಪ್ರಕಾಶಂ
17
ಭಾರತದ ಮೊದಲ ಪ್ರಧಾನಮಂತ್ರಿ
Answer
C. ಜವಾಹರ್ಲಾಲ್ ನೆಹರೂ
18
ಕೇರಳದಲ್ಲಿ ಕೆ. ಕೇಳಪ್ಪನ್ ಉಪ್ಪಿನ ಸತ್ಯಾಗ್ರಹವನ್ನು ಎಲ್ಲಿ ಮುನ್ನಡೆಸಿದರು ?
Answer
D. ಪಯ್ಯನೂರ್
19
ಭಾರತದಲ್ಲಿ ಪಂಚವಾರ್ಷಿಕ ಯೋಜನೆ ಯಾವಾಗ ಪ್ರಾರಂಭವಾಯಿತು?
Answer
A. 1951
20
ಕೇರಳದಲ್ಲಿ ಏಕೈಕ ಬುಡಕಟ್ಟು (Tribal) ಪಂಚಾಯತ್ ಎಲ್ಲಿದೆ?
Answer
B. ಇಡಮಲಕುಡಿ
21
ಕೇರಳದ ಅತಿದೊಡ್ಡ ವನ್ಯಜೀವಿ ಅಭಯಾರಣ್ಯ
Answer
D. ಪೆರಿಯಾರ್
22
ಕೇರಳ ಸರಕಾರ ಯಾವ ಗ್ರಾಮವನ್ನು ಕರಕುಶಲ ಗ್ರಾಮವನ್ನಾಗಿ ಸ್ವಾಧೀನಪಡಿಸಿಕೊಂಡಿದೆ ?
Answer
C. ಇರಿಂಗಲ್
23
ಭಾರತದಲ್ಲಿ ಗಾಂಧೀಜಿಯವರು ಸಾರ್ವಜನಿಕ ಕಾರ್ಯದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು ?
Answer
B. ಚಂಪಾರನ್ ಸತ್ಯಾಗ್ರಹ
24
ಭಾರತದ ಅತಿದೊಡ್ಡ ವಿವಿಧೋದ್ದೇಶ ನದಿ ಜಲಾನಯನ ಯೋಜನೆ
Answer
A. ಬಾಕ್ರಾನಂಗಲ್
25
"ಒನ್ನೆಕಾಲ್ ಕೋಡಿ ಮಲಯಾಳಿಕಳ್ ' ಎಂಬ ಕೃತಿಯ ಲೇಖಕ ಯಾರು?
Answer
C. ಇ. ಎಂ. ಶಂಕರನ್ ನಂಬೂದರಿಪಾಡ್
26
ಭಾರತದ ರಾಷ್ಟ್ರಧ್ವಜದಲ್ಲಿನ ಅಶೋಕ ಚಕ್ರದ ಬಣ್ಣ ಯಾವುದು?
Answer
A. ನೀಲಿ
27
ಭಾರತದ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು?
Answer
C. 1950 ಜನವರಿ 26
28
“ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ” ಎಂಬ ಮೂಲಭೂತ ಹಕ್ಕನ್ನು ಭಾರತೀಯ ಸಂವಿಧಾನದ ಯಾವ ವಿಭಾಗದಲ್ಲಿ ಸೇರಿಸಿಕೊಳ್ಳಲಾಯಿತು?
Answer
B. 17
29
ಇವುಗಳಲ್ಲಿ ಯಾವುದು ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯಗಳಲ್ಲಿ ಇಲ್ಲ?
Answer
D. ವಿದೇಶ ಪ್ರಯಾಣ
30
ಭಾರತೀಯ ಸಂವಿಧಾನದ ಶಿಲ್ಪಿಯಾರು?
Answer
C. ಅಂಬೇಡ್ಕರ್
31
ಭಾರತದ ಉತ್ತರ ಭಾಗದಲ್ಲಿರುವ ಪರ್ವತ ಶ್ರೇಣಿ
Answer
B. ಹಿಮಾಲಯಗಳು
32
ಅರಬ್ಬೀ ಸಮುದ್ರದಲ್ಲಿದ್ದು ಭಾರತಕ್ಕೆ ಸಂಬಂಧಿಸಿದ ದ್ವೀಪಸಮೂಹ ಯಾವುದು?
Answer
C. ಲಕ್ಷದ್ವೀಪ
33
ಯಾವ ದೇಶ ಭಾರತದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿಲ್ಲ?
Answer
D. ಇಂಡೋನೇಶಿಯಾ
34
ವಿಸ್ತೀರ್ಣದಲ್ಲಿ ಭಾರತವು ಜಗತ್ತಿನಲ್ಲಿಯಾವ ಸ್ಥಾನದಲ್ಲಿದೆ ?
Answer
B. ಏಳನೆಯ ಸ್ಥಾನ
35
ಭಾರತದ ಅತೀ ಎತ್ತರದ ಶಿಖರ
Answer
A. ಗಾಡ್ವಿನ್ ಆಸ್ಟಿನ್
36
ಒಂದು ವೇಳೆ ‘÷’ ಎಂಬುದು ‘+’ ಎಂದು ಸೂಚಿಸಿದರೆ, ‘×’ ಎಂಬುದು ‘÷’ ಎಂದು ಸೂಚಿಸಿದರೆ, ‘+’ ಎಂಬುದು ‘−’ ಎಂದು ಸೂಚಿಸಿದರೆ ಮತ್ತು ‘−’ ಎಂಬುದು ‘×’ ಎಂದು ಸೂಚಿಸಿದರೆ, 28 × 2 ÷ 4 − 5 + 3 ರ ಮೌಲ್ಯ ಎಷ್ಟು?
Answer
C. 31
37
ಕೆಳಗಿನ ಅನುಕ್ರಮದಲ್ಲಿ ಮುಂದಿನ ಸಂಖ್ಯೆ ಯಾವುದು?
2, 5, 12, 27, ____
Answer
B. 58
38
ಕೆಳಗಿನ ಸಂಖ್ಯೆಗಳಲ್ಲಿ ಗುಂಪಿಗೆ ಸೇರದ ಸಂಖ್ಯೆ ಯಾವುದು?
Answer
A. 27
39
ಹೋಲಿಕೆಯನ್ನು ಕಂಡುಹಿಡಿಯಿರಿ.
PMQC : ROSE : : EMJB :
Answer
D. GOLD
40
ತಾಯಿಯ ವಯಸ್ಸು ಮಗನ ವಯಸ್ಸಿನ 4 ಪಟ್ಟು ಇದೆ. 16 ವರ್ಷಗಳ ನಂತರ ತಾಯಿಯ ವಯಸ್ಸು ಮಗನ ವಯಸ್ಸಿನ ಎರಡು ಪಟ್ಟು ಇರುತ್ತದೆ. ಮಗನ ಈಗಿನ ವಯಸ್ಸೆಷ್ಟು?
Answer
A. 8
41
ಯಾವ ದಿನವನ್ನು ವಿಶ್ವ ಭೂ-ದಿನವನ್ನಾಗಿ ಆಚರಿಸಲಾಗುತ್ತದೆ?
Answer
B. ಏಪ್ರಿಲ್ 22
42
ಕೇರಳದಲ್ಲಿಯಾವ ವನ್ಯಜೀವಿ ಅಭಯಾರಣ್ಯವನ್ನು ಕೊನೆಯದಾಗಿ ಸ್ಥಾಪಿಸಲಾಯಿತು ?
Answer
C. ಕರಿಂಬುಳ್ಹ
43
ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ ಎಲ್ಲಿದೆ ?
Answer
A. ಡೆಹ್ರಾಡೂನ್
44
ಕೇರಳದಲ್ಲಿನ ಏಕೈಕ ಕಮ್ಯೂನಿಟಿ ರಿಸರ್ವ್
Answer
B. ಕಡಲುಂಡಿ-ವಲ್ಲಿಕ್ಕುನ್ನು
45
ಕೇರಳದಲ್ಲಿ ಎಷ್ಟು ಎಲಿಫೆಂಟ್ ರಿಸರ್ವ್ಗಳಿವೆ?
Answer
D. 4
46
ಕೆಳಗಿನ ಭಾರತದ ರಾಜ್ಯಗಳಲ್ಲಿ ಯಾವುದು ಪಶ್ಚಿಮ ಘಟ್ಟಗಳಿಗೆ ಸೇರಿಕೊಂಡಿಲ್ಲ?
Answer
B. ಆಂಧ್ರಪ್ರದೇಶ
47
ಕೆಳಗಿನವುಗಳಲ್ಲಿ ಕೇವಲ ಒಂದು ನದಿ ಮಾತ್ರ ಕೇರಳದಲ್ಲಿ ಪೂರ್ವಕ್ಕೆ ಹರಿಯುವ ನದಿಯಲ್ಲ. ಪಶ್ಚಿಮಕ್ಕೆ ಹರಿಯುವ ಈ ನದಿಯ ಹೆಸರೇನು?
Answer
A. ನೆಯ್ಯಾರ್
48
ಈ ಕೆಳಗಿನವುಗಳಲ್ಲಿ 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ 6 ನೆಯ ಶೆಡ್ಯೂಲ್ನಲ್ಲಿ ಸೇರಿಸಿಕೊಳ್ಳಲಾಗಿರುವ ಸಸ್ಯಗಳು ಯಾವುವು?
i. ಬ್ಲೂ ವಂಡಾ
ii. ಪಿಚರ್ ಪ್ಲಾಂಟ್
iii. ಲೇಡೀಸ್ ಸ್ಲಿಪರ್ ಆರ್ಕಿಡ್ಗಳು
Answer
B. ಮೇಲಿನ ಎಲ್ಲವೂ
49
1891 ರಲ್ಲಿ ಕೇರಳದಲ್ಲಿ ತೇಗದ ಸ್ಟಂಪ್ಗಳನ್ನು ನೆಡಲಾದ ತೇಗದ ತೋಪನ್ನು ಬಾರ್ಡಿಲಾನ್ ಪ್ಲಾಟ್ ಎಂಬ ಹೆಸರಿನಲ್ಲಿ ಸಂರಕ್ಷಿಸಲಾಗಿದೆ. ಇದು ಎಲ್ಲಿದೆ?
Answer
C. ಆರ್ಯಂಕಾವು
50
1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪ್ರಕಾರ ಕಾಡುಹಂದಿಯನ್ನು ಯಾವ ಶೆಡ್ಯೂಲ್ನಲ್ಲಿ ಸೇರಿಸಲಾಗಿದೆ?
Answer
C. III
51
ಒಂದು ಸಾಮಾನ್ಯ ಫೈರ್ಲೈನ್ನ ಅಗಲವೆಷ್ಟು?
Answer
B. 5.2 ಮೀಟರ್
52
ಯಾವ ವರ್ಷದಲ್ಲಿ ರಾಷ್ಟ್ರೀಯ ನೀತಿಯು ಪ್ರಾದೇಶಿಕ ಸಮೂಹಗಳ ಭಾಗವಹಿಸುವಿಕೆಯೊಂದಿಗೆ ಅರಣ್ಯ ಸಂರಕ್ಷಣೆ
ಮತ್ತು ಅರಣ್ಯ ನಿರ್ವಹಣೆಯ ಅನುಷ್ಠಾನವನ್ನು ಕಲ್ಪಿಸಿತು ?
Answer
C. 1988
53
ಗಾಬಿಯೊನ್ ಗೋಡೆಗಳ ಮುಖ್ಯ ಉಪಯೋಗವೇನು?
Answer
A. ಮಣ್ಣಿನ ಸಂರಕ್ಷಣೆ ಮತ್ತು ಬಲವರ್ಧನೆ
54
ಮರದಿಂದಲೇ ಬೀಜಗಳು ಮೊಳಕೆಯೊಡೆಯುವ ವಿವಿಪಾರಿಯ ಗುಣಲಕ್ಷಣಗಳು ಸಾಮಾನ್ಯವಾಗಿ ಯಾವ ಕಾಡುಗಳಲ್ಲಿ ಕಂಡುಬರುತ್ತವೆ?
Answer
C. ಕಂಡಲ್ ಕಾಡುಗಳು
55
ಕೇರಳದಲ್ಲಿ ಅರಣ್ಯ ಕಾಯಿದೆಯಡಿ ಪರವಾನಗಿ ಇಲ್ಲದೆ ವ್ಯಕ್ತಿಯೊಬ್ಬರು ಕಾನೂನುಬದ್ಧವಾಗಿ ಕ್ರಮವಾಗಿ
ಹೊಂದಬಹುದಾದ ಶ್ರೀಗಂಧದ ಮರ ಮತ್ತು ಶ್ರೀಗಂಧದ ತೈಲ ಪ್ರಮಾಣ ಎಷ್ಟು ?
Answer
B. 1 ಕಿಲೋಗ್ರಾಂ, 100 ಮಿ. ಲೀ.
56
ಅರಣ್ಯ ಹಕ್ಕುಗಳ ಕಾಯಿದೆ, 2006 ರ ಪ್ರಕಾರ, ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (OTFD) 13-12-2005 ರ ಮೊದಲು 3 ತಲೆಮಾರುಗಳವರೆಗೆ ಅವಕಾಶ ಇರುವ ಅರಣ್ಯ ಪ್ರದೇಶದಲ್ಲಿ ಪ್ರಧಾನವಾಗಿ ವಾಸಿಸಿರಬೇಕೆಂಬ ನಿಬಂಧನೆ ಇದೆ. ಕಾಯಿದೆಯ ಪ್ರಕಾರ, ಒಂದು ತಲೆಮಾರು ಎನ್ನುವುದು ಎಷ್ಟು ವರ್ಷಗಳು ಎಂದು ವ್ಯಾಖ್ಯಾನಿಸಲಾಗಿದೆ?
Answer
C. 25 ವರ್ಷಗಳು
57
ಕೇರಳದ ಬುಡಕಟ್ಟು ಪ್ರಕಾರಗಳಲ್ಲಿ ಒಂದಾದ ಚೋಳನಾಯ್ಕರ್ ಯಾವ ಜಿಲ್ಲೆಯಲ್ಲಿ ನೆಲೆಸಿದ್ದಾರೆ ?
Answer
C. ಮಲಪ್ಪುರಂ
58
ಕೇರಳದಲ್ಲಿನ ಮೊದಲ ಬುಡಕಟ್ಟು ಗ್ರಾಮ ಪಂಚಾಯತ್ ಯಾವುದು?
Answer
C. ಇಡಮಲಕುಡಿ
59
ಯಾವ ಬುಡಕಟ್ಟುಗುಂಪು ಗಧಿಕ ಎಂಬ ಆಚರಣೆಯನ್ನು ನಿರ್ವಹಿಸುತ್ತದೆ ?
Answer
D. ಅಡಿಯೋರ್
60
ಕೆಳಗಿನವುಗಳಲ್ಲಿ ಯಾವುದು ಅರಣ್ಯ ಹಕ್ಕು ಕಾಯಿದೆ, 2006 ರ ಸೆಕ್ಷನ್ 3(2) ರಲ್ಲಿ ಉಲ್ಲೇಖಿಸಲಾದ ಅಭಿವೃದ್ಧಿಯ ಹಕ್ಕುಗಳಲ್ಲಿ ಸೇರಿಲ್ಲ?
Answer
D. ಹುಲ್ಲುಗಾವಲು
61
ಅರಣ್ಯ ಹಕ್ಕು ಕಾಯಿದೆ, 2006 ರ ಅಡಿಯಲ್ಲಿ ಯಾವ ಮಟ್ಟದಲ್ಲಿವೈಯಕ್ತಿಕ ಹಕ್ಕುಗಳು ಮತ್ತು ಸಾಮೂಹಿಕ ಅರಣ್ಯ
ಹಕ್ಕುಗಳನ್ನು ಪ್ರಾಥಮಿಕವಾಗಿ ನಿಯಂತ್ರಿಸಲಾಗುತ್ತದೆ ?
Answer
C. ಗ್ರಾಮಸಭಾ
62
ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅಭಿವೃದ್ಧಿ ಉದ್ದೇಶಗಳಿಗಾಗಿ ವಿಭಾಗೀಯ ಅರಣ್ಯಾಧಿಕಾರಿಗೆ ಮಂಜೂರು ಮಾಡಬಹುದಾದ ಅರಣ್ಯ ಭೂಮಿಯ ವಿಸ್ತೀರ್ಣ ಎಷ್ಟು?
Answer
D. ಒಂದು ಹೆಕ್ಟೇರ್ಗಿಂತ ಕಡಿಮೆ
63
2006ರ ಅರಣ್ಯ ಹಕ್ಕು ಕಾಯಿದೆಯ ಪ್ರಕಾರ, ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಪ್ರತ್ಯೇಕಿಸಿ ತಜ್ಞರ ಸಮಿತಿಯ ಪರಿಶೋಧನೆ ಮತ್ತು ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ವನ್ಯಜೀವಿಗಳ ಸಂರಕ್ಷಣೆಗೆ ಬಾಹ್ಯ ಹಸ್ತಕ್ಷೇಪವಿಲ್ಲದ ರೀತಿಯಲ್ಲಿ ಅಧಿಸೂಚಿಸಲಾದ ಪ್ರದೇಶದ ಹೆಸರೇನು?
Answer
B. ಕ್ರಿಟಿಕಲ್ ವೈಲ್ಡ್ಲೈಫ್ ಹ್ಯಾಬಿಟೆಟ್
64
ಕೇರಳ ವನ್ಯಜೀವಿ ದಾಳಿ ಸಂತ್ರಸ್ತರ ನಷ್ಟ ಪರಿಹಾರ/ಸಹಾಯ ನಿಯಮಗಳು, 1980ರ ಅಡಿಯಲ್ಲಿ ವನ್ಯಜೀವಿ ದಾಳಿಯ ಸಂತ್ರಸ್ತರು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಶೆಡ್ಯೂಲ್ ________ ರ ಅಡಿಯಲ್ಲಿ ಬಂದರೆ ಮಾತ್ರ ಆರ್ಥಿಕ ಸಹಾಯಕ್ಕೆ ಅರ್ಹರಾಗಿರುತ್ತಾರೆ.
Answer
A. I ರಿಂದ IV
65
ಕೆಳಗಿನವುಗಳಲ್ಲಿ ಯಾವುದು ಮಾನವ-ವನ್ಯಜೀವಿ ಸಂಘರ್ಷವನ್ನು ಪ್ರಮಾಣೀಕರಿಸಲು ಕನಿಷ್ಠ ವೆಚ್ಚದಾಯಕ
ಮಾರ್ಗವಾಗಿದೆ?
Answer
D. ಸೋಲಾರ್ ಫೆನ್ಸಿಂಗ್
66
ಮಂಗನ ಜ್ವರ ಎಂದು ಕರೆಯಲಾಗುವ ಝೂನೋಟಿಕ್ ಕಾಯಿಲೆಯ ಇನ್ನೊಂದು ಹೆಸರು
Answer
B. ಕ್ಯಾಸನೂರ್ ಫಾರೆಸ್ಟ್ ಡಿಸೀಸ್
67
ಕಾಡಿನ ಹೊರಗೆ ಹಾವಿನ ಕಡಿತದಿಂದ ಸಾಯುವವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಕೇರಳದಲ್ಲಿ ಪ್ರಸ್ತುತ ನಷ್ಟ
ಪರಿಹಾರದ ಮೊತ್ತ ಎಷ್ಟು?
Answer
B. 2 ಲಕ್ಷ
68
ಅರಣ್ಯ ವಿಭಾಗ ಮಟ್ಟದಲ್ಲಿನ ಅರಣ್ಯ ಸಂರಕ್ಷಣಾ ಸಮಿತಿಗಳ ಸಂಘವನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ ?
Answer
C. ಅರಣ್ಯ ಅಭಿವೃದ್ಧಿ ಸಂಸ್ಥೆ
69
ಈ ಕೆಳಗಿನವುಗಳಲ್ಲಿ ಯಾವುದರಿಂದ ದಾಳಿಗೊಳಗಾದರೆ ವನ್ಯಜೀವಿ ದಾಳಿಗಿರುವ ಹಣಕಾಸಿನ ನೆರವು/ನಷ್ಟಪರಿಹಾರಕ್ಕೆ ಅರ್ಹರಾಗಿರುತ್ತಾರೆ?
Answer
D. A) ಮತ್ತು B) ಎರಡೂ ಅಲ್ಲ
70
ಕಾಣಿಕಾರ್ ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ ತಯಾರಿಸಿದ ಔಷಧಿಯಾದ ಜೀವನಿಯಲ್ಲಿ ಯಾವ ಮೂಲಿಕೆ ಮುಖ್ಯ ಅಂಶವಾಗಿದೆ?
Answer
A. ಆರೋಗ್ಯ ಪಾಚ
71
ಅರಣ್ಯ (ಸಂರಕ್ಷಣೆ) ಕಾಯಿದೆ, 1980ರ ಯಾವ ಸೆಕ್ಷನ್ ಪ್ರಕಾರ, ಅರಣ್ಯೇತರ ಉದ್ದೇಶಗಳಿಗಾಗಿ ಮೀಸಲು ಅರಣ್ಯವನ್ನು ಬಳಸಲು ಯೂಸರ್ ಏಜೆನ್ಸಿ ಅರ್ಜಿಯನ್ನು ಸಲ್ಲಿಸಬೇಕು?
Answer
A. 2
72
ಇಲಿಗಳು, ಬಾವಲಿಗಳು ಮತ್ತು ಕಾಗೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ 5ನೇ ಶೆಡ್ಯೂಲ್ನಲ್ಲಿ ಪಟ್ಟಿ ಮಾಡಲಾಗಿದೆ. 5ನೇ ಪಟ್ಟಿಯಲ್ಲಿ ಸೇರಿಸಲಾದ ಜೀವಿಗಳ ಸಾಮಾನ್ಯ ಹೆಸರೇನು?
Answer
B. ವರ್ ಮಿನ್
73
ಕೇರಳ ಅರಣ್ಯ ಕಾಯಿದೆ, 1961ರ ಅಡಿಯಲ್ಲಿಯಾವ ಸೆಕ್ಷನ್ ಗಳು ಮಿಶ್ರಗೊಳಿಸಲು ಆಗದ ಅಪರಾಧಗಳನ್ನು ಕಲ್ಪಿಸುತ್ತದೆ ?
Answer
C. 62, 65
74
ಅರಣ್ಯಕ್ಕೆ ಬೆಂಕಿ ಹಚ್ಚುವುದು ಮೀಸಲು ಅರಣ್ಯ ಪ್ರವೇಶ ವಿರುದ್ಧದ ಒಂದು ಅಪರಾಧವೆನಿಸಿದೆ. ಕೇರಳ ಅರಣ್ಯ ಕಾಯಿದೆ, 1961ರ ಯಾವ ಸೆಕ್ಷನ್ನಲ್ಲಿ ಇದಕ್ಕೆ ಶಿಕ್ಷೆಯನ್ನು ಉಲ್ಲೇಖಿಸಲಾಗಿದೆ?
Answer
C. 27
75
ಕೇರಳ ಅರಣ್ಯ ಕಾಯಿದೆ, 1961ರ ಸೆಕ್ಷನ್ 2ರ ಪ್ರಕಾರ, ಇದು ಕಾಡಿನಲ್ಲಿ ಕಂಡುಬಂದಾಗ ಅಥವಾ ಇದನ್ನು ಕಾಡಿನಿಂದ ತಂದಾಗ ಮಾತ್ರ ಅರಣ್ಯ ಉತ್ಪನ್ನವಾಗುತ್ತದೆ
Answer
D. ಜೇನುತುಪ್ಪ
76
ಅರಣ್ಯ ಕಾಯಿದೆ 1961ರ ಯಾವ ಸೆಕ್ಷನ್ ಸರಕಾರಿ ಸ್ವಾಮ್ಯದ ಮರವನ್ನು ಸಾಗಿಸಲು ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲು ಅಧಿಕಾರ ಹೊಂದಿರುವ ಅಧಿಕಾರಿಗೆ ಅಧಿಕಾರವನ್ನು ನೀಡುತ್ತದೆ?
Answer
C. 61A
77
ಕೇರಳ ಅರಣ್ಯೇತರ ಪ್ರದೇಶದಲ್ಲಿ ಮರಕೃಷಿಯನ್ನು ಉತ್ತೇಜಿಸುವ ಕಾಯ್ದೆ 2005ರ ಅಡಿಯಲ್ಲಿ ಕೇರಳದ ಎಷ್ಟು ಗ್ರಾಮಗಳನ್ನು ಅಧಿಸೂಚಿಸಲಾಗಿದೆ?
Answer
A. 50
78
ಈ ಕೆಳಗಿನವುಗಳಲ್ಲಿ ಯಾವ ಮರವನ್ನು ಪ್ರಸ್ತುತ ಕೇರಳ ರಾಜ್ಯದೊಳಗೆ ಕತ್ತರಿಸಲು ಮತ್ತು ಸಾಗಿಸಲು ವಿನಾಯಿತಿಯನ್ನು ನೀಡಲಾಗಿದೆ?
Answer
D. ರಕ್ತಚಂದನ
79
ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಸೆಕ್ಷನ್ 9ರ ಅಡಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವ ಪ್ರವೃತ್ತಿಯು ಬೇಟೆಯ ವ್ಯಾಖ್ಯಾನದೊಳಗೆ ಬರುವುದಿಲ್ಲ?
Answer
D. ಮೇಲಿನ ಯಾವುದೂ ಅಲ್ಲ
80
ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ ಪ್ರಕಾರ ಈ ಕೆಳಗಿನ ಯಾವ ಪ್ರಾಣಿಗಳನ್ನು ಬೇಟೆಯಾಡಿದರೆ
3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 25,000 ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದು?
Answer
B. ಕಾಡು ಹಂದಿ
81
ನೀಲಂಬೂರ್ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಜೀವಿತದ ಎಷ್ಟನೇ ವರ್ಷದಲ್ಲಿ ತೇಗದ ತೋಪುಗಳಂತಹ ಮರಗಳನ್ನು ಅಂತಿಮವಾಗಿ ಕಡಿಯಲಾಗುತ್ತದೆ?
Answer
C. 60
82
ಪಲ್ವುಡ್ ತೋಟಗಳನ್ನು ಸ್ಥಾಪಿಸುವಾಗ ಒಂದು ಹೆಕ್ಟೇರಿಗೆ ನೆಡಲಾಗುವ ಸಸಿಗಳ ಸಂಖ್ಯೆ
Answer
B. 1600
83
ಪೀಚಿಯನ್ನು ಕೇಂದ್ರವಾಗಿಯುಳ್ಳ ಯಾವ ಸಂಸ್ಥೆಯು ಅರಣ್ಯ ಸಂಶೋಧನ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಗಳನ್ನು ನೀಡಿದೆ?
Answer
A. KFRI
84
ಈ ಕೆಳಗಿನವುಗಳಲ್ಲಿಯಾವುದು ವಿದೇಶಿ ಸಸ್ಯವಲ್ಲ?
Answer
D. ತಾನ್ನಿ
85
ಅಂತಿಮ ತೆಳುಗೊಳಿಸುವಿಕೆಯ ಅನಂತರ ಗುಣಮಟ್ಟ-1 ರ ಒಂದು ಹೆಕ್ಟೇರ್ ನಿವೇಶನದಲ್ಲಿ ಎಷ್ಟು ತೇಗದ ಮರಗಳು
ಇರುತ್ತವೆ?
Answer
A. 125
86
ಅರಣ್ಯ ತೋಪುಗಳನ್ನು ಕಾನೂನುಬದ್ಧವಾಗಿ ನೆಡಬಹುದಾದ ಸ್ಥಳ
Answer
D. ಇವು ಯಾವುದೂ ಅಲ್ಲ
87
ಪ್ರಸ್ತುತ ವನ್ಯಜೀವಿ ಸಂಘರ್ಷದಲ್ಲಿ ಗಾಯಗೊಂಡವರಿಗೆ ಸರಕಾರಿ ಆದೇಶ ಸಂಖ್ಯೆ ________ ರ ಪ್ರಕಾರ ಚಿಕಿತ್ಸಾ ನೆರವು ನೀಡುವುದು.
Answer
A. 17/2018
88
ನರ್ಸರಿ ಬೆಡ್ ಅಳತೆಯು
Answer
A. 4 ಅಡಿ × 40 ಅಡಿ × 1 ಅಡಿ
89
ರೂಟ್ ಟೈನರ್ ಸಸಿ ನೆಡಲು ಅಗತ್ಯವಿರುವ ಪಿಟ್ ಗಾತ್ರ
Answer
C. 30 × 30 × 30 ಸೆಂ. ಮೀ.
90
ರಫ್ತು ಗುಣಮಟ್ಟದ ಮರದ ಮಧ್ಯಭಾಗದ ಕನಿಷ್ಠಸುತ್ತಳತೆ ಎಷ್ಟಿರಬೇಕು ?
Answer
D. 180
91
ಕೆಳಗಿನವುಗಳಲ್ಲಿ ಕೇರಳದ ಪಕ್ಷಿಧಾಮ ಯಾವುದು?
Answer
B. ಮಂಗಲವನಂ
92
ಇದು ಕೇರಳದ ರಾಜ್ಯ ಪಕ್ಷಿಯಾಗಿದೆ
Answer
B. ಗ್ರೇಟ್ ಇಂಡಿಯನ್ ಹಾರ್ನ್ಬಿಲ್
93
ಕೆಳಗಿನವುಗಳಲ್ಲಿಯಾವುದು ರಾಷ್ಟ್ರೀಯ ಉದ್ಯಾನವಲ್ಲ ?
Answer
B. ಶೆಂಡುರ್ನಿ
94
ಒಂಟಿ ಕೊಂಬಿನ ಘೇಂಡಾಮೃಗವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
Answer
A. ಅಸ್ಸಾಂ
95
ಭಾರತದ ಮೊದಲ ಯೋಜಿತ ಪರಿಸರ ಪ್ರವಾಸೋದ್ಯಮ
Answer
A. ತೇನ್ಮಲ
96
ಭಾರತದಲ್ಲಿ ಯಾವ ರಾಜ್ಯದ ರಾಷ್ಟ್ರೀಯ ಉದ್ಯಾನವನದ ನೈಸರ್ಗಿಕ ಆವಾಸ ಸ್ಥಾನದಲ್ಲಿ ಸಿಂಹಗಳು
ಕಂಡುಬರುತ್ತವೆ ?
Answer
C. ಗುಜರಾತ್
97
ಕೇರಳದ ರಾಜ್ಯ ಮೀನು ಯಾವುದು?
Answer
B. ಗ್ರೀನ್ ಕ್ರೋಮೈಡ್ (ಕರಿ ಮೀನು)
98
ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರೇನು ?
Answer
A. ಓಫಿಯೋಫಾಗಸ್ ಹನ್ನಾ
99
ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶವು ಭಾರತದಲ್ಲಿನ ಹುಲಿ ಮೀಸಲುಗಳ ಕಾಲಾನುಕ್ರಮದ ಪಟ್ಟಿಯಲ್ಲಿಯಾವ
ಸ್ಥಾನದಲ್ಲಿದೆ ?
Answer
C. 10
100
ಹಾವುಗಳನ್ನು ರಕ್ಷಿಸಲು ಕೇರಳ ಅರಣ್ಯ ಇಲಾಖೆಯು ಯಾವ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದೆ ?
Answer
A. ಸರ್ಪ
Discussion
Ask a doubt or share a tip.
No comments yet — start the discussion.