| Post Name | Clerk - Various 503/2023 |
|---|---|
| Question Paper Code | 122/2024 |
| Category Code | 503/2023 |
| Date of Test | 7 September 2024 |
| Medium of Question | KANNADA |
| Exam Type | OMR Examination |
| Total Questions | 100 |
1
ಕೆಳಗಿನವರಲ್ಲಿ ಯಾರು ಕೇರಳ ರಾಷ್ಟೀಯ ಚಳವಳಿಯ ಭಾಗವಾಗಿರಲಿಲ್ಲ?
Answer
B. ಟಿ. ಸುನಂದಮ್ಮ
2
"ವಂದೇ ಮಾತರಂ' ಯಾವ ವರ್ಗಕ್ಕೆ ಸೇರಿದೆ ?
Answer
A. ಉರ್ದು ವಾರ್ತಾಶತ್ರಿಕೆ
3
“ಮನುಷ್ಯನಿಗೆ ಕೆಲವು ಮೂಲಭೂತ ಹಕ್ಕುಗಳಿವೆ, ಅದನ್ನು ಯಾವುದೇ ಸರಕಾರಕ್ಕೂ ಉಲ್ಲಂಘಿಸಲು ಹಕ್ಕಿಲ್ಲ? ಇವು ಯಾರ ಮಾತುಗಳು ?
Answer
A. ಜಾನ್‌ಲಾಕ್
4
ಸನ್ ಯಾತ್-ಸೇನ್ ಅವರ ತತ್ವಗಳು ಯಾವುವು ? i. ರಾಷ್ಟ್ರೀಯತೆ ii. ಪ್ರಜಾಪ್ರಭುತ್ವ iii. ಸಮಾಜವಾದ iv. ಸ್ವಾತಂತ್ರ್ಯ
Answer
C. i, ii ಮತ್ತು iii
5
ಈಗ UN ನಲ್ಲಿ ಎಷ್ಟು ಸದಸ್ಯರಿದ್ದಾರೆ ?
Answer
D. 193
6
ಯಾವ ಒಪ್ಪಂದವು ಮೊದಲ ಕಪ್ಪು ಯುದ್ಧವನ್ನು ಕೊನೆಗೊಳಿಸಿತು ?
Answer
A. ನಾನ್ಕಿಂಗ್ ಒಪ್ಪಂದ
7
__________ ಅನ್ನು ಹೋರ್ಸ್ ಲಾಟಿಟ್ಯೂಡ್ ಎಂದೂ ಕರೆಯಲಾಗುತ್ತದೆ.
Answer
A. ಉಪೋಷ್ಣವಲಯದ ಅಧಿಕ ಒತ್ತಡದ ಪ್ರದೇಶ
8
ಭೂಮಿಯು ಸೂರ್ಯನ ಸುತ್ತ ತಿರುಗುವ ಸಮಯದಲ್ಲಿ ಸಂಭವಿಸುವ ‘ಪೆರಿಹೀಲಿಯನ್’ ಎಂದರೆ ಏನು ?
Answer
A. ಸೂರ್ಯ ಮತ್ತು ಭೂಮಿ ಅಕ್ಕಪಕ್ಕದಲ್ಲಿರುತ್ತವೆ
9
ನಮ್ಮ ವಾತಾವರಣದ ಪದರಗಳಲ್ಲಿರುವ ನೀರು
Answer
D. ಆರ್ದ್ರತೆ
10
ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಅಧ್ಯಯನಕರಣಕ್ಕೆ ಭಾರತದ ಕೊಡುಗೆ ಗಮನಾರ್ಹವಾಗಿದೆ. ಭಾರತದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಕೇಂದ್ರದ ಪ್ರಧಾನ ಕಛೇರಿ ಎಲ್ಲಿದೆ ?
Answer
C. ಹೈದರಾಬಾದ್
11
ಒಳನಾಡಿನ ಜಲಮಾರ್ಗಗಳು ದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ರಾಷ್ಟ್ರೀಯ ಜಲಮಾರ್ಗ 4 ಇವುಗಳಲ್ಲಿ ಯಾವ ಸ್ಥಳವನ್ನು ಸಂಪರ್ಕಿಸುತ್ತದೆ ?
Answer
B. ಕಾಕಿನಾಡ – ಪುದುಚೇರಿ
12
__________ ಎಂಬುದು ಕಕ್ಷೆಯ ಸಮತಲದಿಂದ ಭೂಮಿಯ ಅಕ್ಷಾಂಶದ ಕೋನೀಯ ಅಳತೆಯಾಗಿದೆ.
Answer
D. 66½°
13
ಕೆಳಗಿನವುಗಳಲ್ಲಿ ಯಾವುದು ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (NSSO) ನಡೆಸಿದ ಸಮೀಕ್ಷೆಯ ಭಾಗವಾಗಿಲ್ಲ ?
Answer
C. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
14
ಉದಾರೀಕರಣದ ನೀತಿಯ ಅಡಿಯಲ್ಲಿ ಸರಕಾರವು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು
Answer
B. ಕೈಗಾರಿಕೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿನ ಸುಧಾರಣೆಗಳು
15
ಭಾರತದಲ್ಲಿ ಹಸಿರು ಕ್ರಾಂತಿಯು ಯಾವ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಪ್ರಾರಂಭವಾಯಿತು ?
Answer
C. ಮೂರನೇ ಪಂಚವಾರ್ಷಿಕ ಯೋಜನೆ
16
ಕೆಳಗಿನ ಪಂಕ್ತಿಗಳಲ್ಲಿ ಭಾರತದಲ್ಲಿ ಅತ್ಯಧಿಕ ಗೋಧಿಯನ್ನು ಉತ್ಪಾದಿಸುವ ರಾಜ್ಯಗಳ ಪಟ್ಟಿಯಲ್ಲಿ ಯಾವುದು ಸರಿಯಾಗಿದೆ ?
Answer
C. ಮಧ್ಯಪ್ರದೇಶ, ಪಂಜಾಬ್, ಬಿಹಾರ
17
ಕೆಳಗಿನವುಗಳಲ್ಲಿ ಯಾವುದು NITI ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ?
Answer
A. ಗ್ರಾಮ ಮಟ್ಟದಲ್ಲಿ ರೂಪಿಸಲಾಗಿರುವ ಯೋಜನೆಗಳು
18
ಆಸ್ತಿಗಳ ಮೂಲಕ ಭಾರತವು ಎರಡನೇ ಅತಿದೊಡ್ಡ ಬ್ಯಾಂಕ್ ಅನ್ನಿಸಿಕೊಳ್ಳಲು ಭಾರತೀಯ ಸಾರ್ವಜನಿಕ ವಲಯದ ಯಾವ ಬ್ಯಾಂಕ್ ಇತ್ತೀಚೆಗೆ ಇನ್ನೊಂದರೊಂದಿಗೆ ವಿಲೀನಗೊಂಡಿತು ?
Answer
D. ಬ್ಯಾಂಕ್ ಆಫ್ ಬರೋಡಾ
19
ಭಾರತ ಸರಕಾರದ “ಮೇಕ್ ಇನ್ ಇಂಡಿಯಾ” ಉಪಕ್ರಮವು ಈ ಗುರಿಯನ್ನು ಹೊಂದಿದೆ.
Answer
A. ಭಾರತೀಯ ಉತ್ಪಾದನಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಪ್ರೋತ್ಸಾಹಿಸುವುದು
20
ಕೆಳಗಿನವುಗಳಲ್ಲಿ ಯಾವುದು ಒಂದು ರಾಷ್ಟ್ರದ ಸೀಮೆಯ ಭಾಗವಾಗಿಲ್ಲ ?
Answer
C. ಆ ದೇಶದ ಕರಾವಳಿಯಿಂದ 12 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಕಡಲವಲಯ
21
ರಾಷ್ಟ್ರದ ಮೂಲಭೂತ ಅಂಶದಲ್ಲಿ ಯಾವುದನ್ನು ಸೇರಿಸಲಾಗುವುದಿಲ್ಲ?
Answer
B. ಪ್ರಜಾಪ್ರಭುತ್ವ
22
ಕೆಳಗಿನ ಯಾವ ಹಕ್ಕುಗಳು ರಾಜಕೀಯ ಹಕ್ಕುಗಳ ವರ್ಗದಲ್ಲಿ ಬರುತ್ತವೆ ? i. ಅಧಿಕೃತ ಸ್ಥಾನಗಳನ್ನು ಹೊಂದುವ ಹಕ್ಕು. ii. ಸರಕಾರವನ್ನು ಟೀಕಿಸುವ ಹಕ್ಕು. iii. ಭಾರತದಾದ್ಯಂತ ಪ್ರಯಾಣಿಸುವ ಹಕ್ಕು. iv. ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು.
Answer
D. i, ii, iv ಮಾತ್ರ
23
ಅಧಿಕಾರಶಾಹಿಯು ಸರಕಾರದ ಯಾವ ಇಲಾಖೆಗೆ ಸೇರಿದೆ ?
Answer
B. ಆಡಳಿತ ಇಲಾಖೆ
24
ರಾಜ್ಯ ಸಭೆಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ ? i. ರಾಜ್ಯಸಭಾ ಅಧ್ಯಕ್ಷರ ಹುದ್ದೆಯನ್ನು ಉಪರಾಷ್ಟ್ರಪತಿಯವರು ನಿರ್ವಹಿಸುತ್ತಾರೆ. ii. ರಾಜ್ಯಸಭೆ ಶಾಶ್ವತ ಶಾಸನಸಭೆಯಲ್ಲ. iii. ರಾಜ್ಯಸಭಾ ಸದಸ್ಯರನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. iv. ರಾಜ್ಯಸಭೆಯು ಜನರ ಪ್ರತಿನಿಧಿ ಸದನವಾಗಿದೆ.
Answer
C. ii, iii, iv ಮಾತ್ರ
25
ಶ್ರೀ ವಿ. ಮುರಳೀಧರನ್ ಎಂ. ಪಿ. ಯವರು ಕೇಂದ್ರ ಸರಕಾರದಲ್ಲಿಯಾವ ವರ್ಗದ ಸಚಿವ ಸ್ಥಾನವನ್ನು ಹೊಂದಿದ್ದರು ?
Answer
B. ರಾಜ್ಯ ಸಚಿವ
26
ಈ ಕೆಳಗಿನ ಯಾವ ಹೇಳಿಕೆಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ ? i. ನ್ಯಾಯಮೂರ್ತಿ ಹರಿಲಾಲ್ ಜೆ. ಕನಿಯಾ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ii. ಎ. ಜಿ. ದೇಸಾಯಿಯವರು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. iii. ಇದು ಭಾರತದ ಅತ್ಯುನ್ನತ ಮೇಲ್ಮನವಿ ನ್ಯಾಯಾಲಯವಾಗಿದೆ. iv. ಜಿಲ್ಲಾ ನ್ಯಾಯಾಲಯಗಳು ಮತ್ತು ಕೆಳ ನ್ಯಾಯಾಲಯಗಳನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ.
Answer
C. i, iii
27
ಭಾರತದಲ್ಲಿ ಇ-ಸಂಜೀವನಿ ಯೋಜನೆಯನ್ನು ಮೊದಲ ಬಾರಿಗೆ ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ?
Answer
Question Cancelled
28
ಈ ಕೆಳಗಿನ ಯಾವ ಯೋಜನೆಯು ಪರಿಶಿಷ್ಟ ಪಂಗಡದ ತಾಯಂದಿರು ಮತ್ತು ಮಕ್ಕಳಲ್ಲಿರುವ ಅಪೌಷ್ಟಿಕತೆಯನ್ನು ನಿವಾರಿಸಲು ಮಾಸಿಕ ಹಣಕಾಸಿನ ನೆರವು ನೀಡುತ್ತದೆ ?
Answer
D. ಜನನಿ ಜನ್ಮ ರಕ್ಷಾ
29
ಪರಿಸರ ರಕ್ಷಣೆಯ ಯಾವ ಕ್ಷೇತ್ರದಲ್ಲಿ ಕಲ್ಲೆನ್ ಪೊಕ್ಕುಡನ್‌ರದ್ದು ಮಹತ್ವದ ಉಪಸ್ಥಿತಿ ಆಗಿತ್ತು ?
Answer
B. ಮ್ಯಾಂಗ್ರೋವ್‌ಗಳ ರಕ್ಷಣೆ
30
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಸ್ತುತ ಅಧ್ಯಕ್ಷರು ಯಾರು ?
Answer
D. ಶ್ರೀ ಪಿಣರಾಯಿ ವಿಜಯನ್
31
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಸಂಗತಿಗಳು ಯಾವುವು ? i. 18 ವರ್ಷ ತುಂಬಿದ ಪುರುಷರು ಮತ್ತು ಮಹಿಳೆಯರು ಉದ್ಯೋಗ ಖಾತರಿ ಯೋಜನೆಯಲ್ಲಿ ಭಾಗವಹಿಸಬಹುದು. ii. ಇದು ಗ್ರಾಮೀಣ ಪ್ರದೇಶಗಳಲ್ಲಿ ನುರಿತ ಕಾರ್ಮಿಕರನ್ನು ಗುರಿಯಾಗಿಸುತ್ತದೆ. iii. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಿಲ್ಲದಿದ್ದರೆ ಮೂಲ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುವುದಿಲ್ಲ. iv. ಒಂದು ಆರ್ಥಿಕ ವರ್ಷದಲ್ಲಿ 100 ಕೆಲಸದ ದಿನಗಳನ್ನು ಖಾತರಿಪಡಿಸಲಾಗುತ್ತದೆ.
Answer
Question Cancelled
32
“ತಳನೀರ್ ಒಕ್ಕುಂ ನವ ಕೇರಳ ಯೋಜನೆ” ಕುರಿತಾದರೆ
Answer
B. ರಾಜ್ಯದ ಎಲ್ಲಾ ಜಲಮೂಲಗಳನ್ನು ಮಾಲಿನ್ಯ ಮುಕ್ತಗೊಳಿಸುವುದು
33
“ಒನ್ನಾಯಿ ಮುನ್ನೇರಾಂ” ಎಂಬ ವಾಕ್ಯವು ಅದರ ಲಾಂಛನದೊಂದಿಗೆ ಕಂಡುಬಂದಿದ್ದು ಯಾವುದರ ಉಪಕ್ರಮವಾಗಿದೆ ?
Answer
A. ಕುಟುಂಬಶ್ರೀ
34
ಮದುಳಿನಲ್ಲಿ ನ್ಯೂರೋಟ್ರಾನ್ಸ್‌ಮಿಟರ್ ‘ಡೋಪಾಮಿನ್’ ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ ನಡುಕ, ಅನಿಯಮಿತ ಸ್ನಾಯು ಚಲನೆಗಳು ಮತ್ತು ದೇಹದ ಸಮತೋಲನದ ನಷ್ಟ ಕಂಡುಬರುತ್ತದೆ. ಇವು ಯಾವ ರೋಗದ ಲಕ್ಷಣಗಳಾಗಿವೆ ?
Answer
B. ಪಾರ್ಕಿನ್ಸನ್
35
ಕೆಳಗಿನವುಗಳಲ್ಲಿ ಯಾವುದು ಔದ್ಯೋಗಿಕ ರೋಗವಲ್ಲ ?
Answer
B. ಸೋರಿಯಾಸಿಸ್
36
‘ಫಾಗೋಸೈಟೋಸಿಸ್’ ಎನ್ನುವುದು ಮಾನವ ದೇಹವನ್ನು ಪ್ರವೇಶಿಸುವ ರೋಗಕಾರಕಗಳನ್ನು ಆವರಿಸುವ ಮತ್ತು ನಾಶಪಡಿಸುವ ಕ್ರಿಯೆಯಾಗಿದೆ. ಯಾವ ಬಿಳಿ ರಕ್ತ ಕಣಗಳು ಈ ಕಾರ್ಯವನ್ನು ನಿರ್ವಹಿಸುತ್ತವೆ ?
Answer
C. ಮೊನೋಸೈಟ್, ನ್ಯೂಟ್ರೋಫಿಲ್
37
ಯಾವ ಪುಸ್ತಕದಲ್ಲಿ ಅಮೇರಿಕನ್ ಸಂಶೋಧಕ ರಾಚೆಲ್ ಕಾರ್ಸನ್‌ರವರು ಡಿ.ಡಿ.ಟಿ.ಯಂತಹ ಕೀಟನಾಶಕಗಳಿಂದ ಸೃಷ್ಟಿಯಾಗಿರುವ ಪರಿಸರ ಆರೋಗ್ಯ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ?
Answer
D. ಸೈಲೆಂಟ್ ಸ್ಪ್ರಿಂಗ್
38
ಮ್ಯಾಕ್ರೋ ಖನಿಜಗಳು ಯಾವುವು ?
Answer
A. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕ್ಲೋರೈಡ್, ಸೋಡಿಯಂ
39
ಜನ್ಮದಾತರು ಕಳೆದುಹೋಗಿದ್ದಲ್ಲಿ, ಜನ್ಮದಾತರಲ್ಲಿ ಒಬ್ಬರು ತೀರಿಕೊಂಡಿದ್ದರೆ ಅಥವಾ ಬದುಕಿರುವ ಜನ್ಮದಾತ (ರು/ಳು) ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಅಸಮರ್ಥರಾಗಿದ್ದರೆ, ಅಂತಹ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಯೋಜನೆ
Answer
C. ಸ್ನೇಹಪೂರ್ವಂ
40
ಹುಲ್ಲುಗಾವಲುಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಮಹಾರಾಷ್ಟ್ರದಲ್ಲಿರುವ ಸಂರಕ್ಷಣಾ ಮೀಸಲು
Answer
B. ಅಷ್ಟೋಡಿ
41
ಆಯುಷ್ ಸಚಿವಾಲಯದ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್ (CCRAS) ಅಡಿಯಲ್ಲಿ ಯಾವ ಘಟಕವನ್ನು 3ನೇ ಜೂನ್ 2024 ರಂದು WHO ಸಾಂಪ್ರದಾಯಿಕ ಔಷಧ ಸಂಶೋಧನೆಗಾಗಿ ಸಹಯೋಗ ಕೇಂದ್ರವಾಗಿ ಗೊತ್ತುಪಡಿಸಿದೆ ?
Answer
C. NIIMH – ಹೈದರಾಬಾದ್
42
__________ ಎಂಬುದು ಬೆಳಕಿನ ಕಿರಣಗಳು ಪ್ರಿಸಂ ಮೂಲಕ ಹಾದುಹೋಗುವಾಗ 7 ಬಣ್ಣಗಳಾಗಿ ಬದಲಾಗುವ ವಿದ್ಯಮಾನವಾಗಿದೆ.
Answer
C. ಚದುರುವಿಕೆ
43
ನ್ಯೂಟನ್‌ನ ಚಲನೆಯ ನಿಯಮಗಳಲ್ಲಿ ಯಾವುದನ್ನು ಜಡತ್ವದ ನಿಯಮ (ಲಾ ಆಫ್ ಇನರ್ಷಿಯಾ) ಎಂದೂ ಕರೆಯಲಾಗುತ್ತದೆ ?
Answer
A. ನ್ಯೂಟನ್‌ನ ಮೊದಲ ಚಲನೆಯ ನಿಯಮ
44
ಹೈಡ್ರಾಲಿಕ್ ಲಿಫ್ಟ್‌ನ ಕೆಲಸದ ತತ್ವ ಏನು ?
Answer
C. ಪಾಸ್ಕಲ್‌ನ ನಿಯಮ
45
ಯಾವ ಎಕ್ಸ್‌ಪ್ರೆಸ್ ರೈಲನ್ನು ‘ಟ್ರೈನ್-18’ ಎಂದು ಕರೆಯಲಾಗುತ್ತದೆ ?
Answer
B. ವಂದೇ ಭಾರತ್ ಎಕ್ಸ್‌ಪ್ರೆಸ್
46
ಚಂದ್ರಯಾನ-3ರ ಲ್ಯಾಂಡರ್ ಹೆಸರೇನು ?
Answer
A. ವಿಕ್ರಮ್
47
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಅತ್ಯಧಿಕ ಪರಮಾಣು ಸಂಖ್ಯೆಯನ್ನು ಹೊಂದಿರುವ ಅಂಶದ ಹೆಸರೇನು ?
Answer
A. ಒಗನೆಸ್ಸನ್
48
ಯಾವ ನಿರ್ದಿಷ್ಟ ಅನುಪಾತದಲ್ಲಿ ಯಾವ ಪ್ರಬಲ ಆಮ್ಲಗಳನ್ನು ಸೇರಿಸುವ ಮೂಲಕ ಆಕ್ವಾರೇಜಿಯಾವನ್ನು ಪಡೆಯಲಾಗುತ್ತದೆ ?
Answer
B. 1 HNO₃ : 3 HCl
49
ವಿಜ್ಞಾನಿಗಳು ಮತ್ತು ಅವರು ವರ್ಗೀಕರಿಸಿದ ಅಂಶಗಳ ಸಂಬಂಧವನ್ನು ಕೆಳಗೆ ನೀಡಲಾಗಿದೆ, ಹೆಚ್ಚು ಸಮರ್ಪಕವಾದುದನ್ನು ಆರಿಸಿ. 1. ಹೆನ್ರಿ ಮೊಸ್ಲಿ a. ಪರಮಾಣು ದ್ರವ್ಯರಾಶಿ 2. ಮೆಂಡಲೀವ್ b. ಟ್ರೈಡ್ಸ್ 3. ನ್ಯೂಲ್ಯಾಂಡ್ಸ್ c. ಪರಮಾಣು ಸಂಖ್ಯೆ 4. ಡೊಬೆರೀನರ್ d. ಆಕ್ಟೇವ್ಸ್ ಕಾನೂನು
Answer
D. 1-c, 2-a, 3-d, 4-b
50
ಅತ್ಯಂತ ಗಟ್ಟಿಯಾದ ಲೋಹ ಯಾವುದು ?
Answer
C. ಕ್ರೋಮಿಯಂ
51
ಈ ಕೆಳಗಿನ ಯಾವ ಗ್ರಾಫ್‌ಗಳು ಬಾಯ್ಲ್ಸ್ ತತ್ವವನ್ನು ಪಾಲಿಸುವುದಿಲ್ಲ ?
Answer
D. P ವಿರುದ್ಧ V: ಮೂಲಬಿಂದುವಿನಿಂದ ಏರುವ ಸರಳರೇಖೆ
52
ಈ ಕೆಳಗಿನವುಗಳಲ್ಲಿ ಯಾವುದು ಎಸ್. ಕೆ. ಪೊಟ್ಟೆಕ್ಕಾಡ್ ಅವರ ಬರಹಗಳನ್ನು ಮಾತ್ರ ಒಳಗೊಂಡಿದೆ ?
Answer
A. ವಿಷಕನ್ಯಕಾ, ಚಂದ್ರಕಾಂತಂ, ಬಾಲಿದ್ವೀಪ, ಎಂಟೆ ವಳಿಯಂಬಲಂಗಳ್
53
“ಬರುವ ಶೃಂಗವೂ ಅಲಂಕಾರದುರು” ನಾಟಕವನ್ನು ಬರೆದವರು ಯಾರು ?
Answer
C. ವೈಲೋಪಿಳ್ಳಿ ಶ್ರೀಧರ ಮೆನನ್
54
ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನ ಗೆಲ್ಲಲು ಎಲಿಯ ತನಕ ಎಸೆದರು ?
Answer
B. 87.58 ಮೀಟರ್
55
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ರವರ ಮರಣೋತ್ತರವಾಗಿ ಪ್ರಕಟವಾದ ಕಾದಂಬರಿ
Answer
B. ಅಂಟಿಲ್ ಆಗಸ್ಟ್
56
ಅಂತಾರಾಷ್ಟ್ರೀಯ ವಿಶಿಷ್ಟ ಚಲನಚಿತ್ರ ವಿಭಾಗದಲ್ಲಿ 2024ರ ಆಸ್ಕರ್ ಪ್ರಶಸ್ತಿಯನ್ನು ಯಾವ ಚಿತ್ರ ಗೆದ್ದಿದೆ ?
Answer
C. ದಿ ಝೋನ್ ಆಫ್ ಇಂಟರೆಸ್ಟ್
57
“ನನ್ ಮಕ್ಕಳ್ ಕೇಟಡ್ ಕಂಡಡ್ ಚೋಲ್ಸ್ ನಾಳೆನು ಕಳೆಯಟ್ಟೆ ತಿನ್ ಮಕ್ಕಳ್ ಕಂಡಡ್ ಕೂತಿರಾನ್ ಕೊಳ್ಳೇನು ಕಳೆಯಟ್ಟೆ” ಈ ಸಾಲುಗಳನ್ನು ರಚಿಸಿದ ಕವಿ
Answer
A. ಅಯ್ಯಪ್ಪ ಪಣಿಕ್ಕರ್
58
ಲೇಖಕರು ಮತ್ತು ಬರಹಗಳನ್ನು ಅನುಕ್ರಮವಾಗಿ ಸೇರಿಸಿ. 1. ರಾಮಪುರತ್ತು ವಾರಿಯರ್ a. ಕುಮಾರಸಂಭವಮ್ 2. ಕುಂಚನ್ ನಂಬಿಯಾರ್ b. ಪರದೇವತಾಸ್ತುತಿ 3. ಸುಭಾಷ್ ಚಂದ್ರನ್ c. ಕುಚೇಲವೃತ್ತಮ್ 4. ಕಾಳಿದಾಸನ್ d. ಭೂಮಿಯಾತ್ರಾ
Answer
A. 1-c, 2-d, 3-b, 4-a
59
ನೆಟ್‌ವರ್ಕ್ ಹಬ್‌ಗೆ ಸಂಬಂಧಿಸಿದಂತೆ ಯಾವ ಹೇಳಿಕೆ(ಗಳು) ಸರಿಯಾಗಿದೆ/ವೆ ? i. ಖಾಸಗಿ ನೆಟ್‌ವರ್ಕ್‌ನಲ್ಲಿ ವಿವಿಧ ಕಂಪ್ಯೂಟರ್‌ಗಳನ್ನು ಸಂಪರ್ಕಿಸಲು ಬಳಸಲಾಗುತ್ತದೆ. ii. ಡೇಟಾ ಪ್ಯಾಕೆಟ್‌ಗಳನ್ನು ಸ್ವೀಕರಿಸುವವರಿಗೆ ಮಾತ್ರ ಕಳುಹಿಸಲಾಗುತ್ತದೆ. iii. ಹಬ್ ಒಂದು ಇನ್‌ಪುಟ್ ಪೋರ್ಟ್ ಮತ್ತು ಒಂದು ಔಟ್‌ಪುಟ್ ಪೋರ್ಟ್ ಅನ್ನು ಹೊಂದಿದೆ.
Answer
C. i ಮಾತ್ರ
60
ಸ್ಪ್ರೆಡ್‌ಶೀಟ್ ಸಾಫ್ಟ್‌ವೇರ್‌ನಲ್ಲಿ ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡಲು ಸುಲಭವಾದ ಮಾರ್ಗ ಯಾವುದು ?
Answer
B. ಕಾರ್ಯಗಳು
61
ಕೆಳಗಿನ ಯಾವ ಸಾಧನಗಳು ವೈರ್ಲೆಸ್ ರೂಟರ್‌ನ ವ್ಯಾಪ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ?
Answer
A. ವೈರ್ಲೆಸ್ ರಿಪೀಟರ್
62
ಪಾಯಿಂಟಿಂಗ್ ಇನ್‌ಪುಟ್ ಸಾಧನವೊಂದರ ಒಂದು ಉದಾಹರಣೆ ಯಾವುದು ?
Answer
B. ಮೌಸ್
63
ಭಾರತದಲ್ಲಿ ಹೆಚ್ಚು ಬಳಕೆಯಾಗುವ ವೆಬ್ ಬ್ರೌಸರ್ ಯಾವುದು ?
Answer
B. ಗೂಗಲ್ ಕ್ರೋಮ್
64
POCSO ಕಾಯಿದೆಯ ಯಾವ ವಿಭಾಗವು ಮಗುವನ್ನು ಅಶ್ಲೀಲ ಉದ್ದೇಶಗಳಿಗಾಗಿ ಬಳಸಿದ್ದಕ್ಕೆ ಶಿಕ್ಷೆಯ ಕುರಿತು ವ್ಯವಹರಿಸುತ್ತದೆ ?
Answer
D. ವಿಭಾಗ 14
65
ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ದ ಪ್ರಾಥಮಿಕ ಕಾರ್ಯವೇನು ?
Answer
C. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಜಾರಿಗೊಳಿಸುವುದು
66
DV ಕಾಯಿದೆಯ ಯಾವ ವಿಭಾಗವು ಕೌಟುಂಬಿಕ ಹಿಂಸೆಯನ್ನು ವ್ಯಾಖ್ಯಾನಿಸುತ್ತದೆ ?
Answer
B. ವಿಭಾಗ 3
67
ಯಾವ ಕಾಯಿದೆಯ ಪ್ರಕಾರ NHRC ಯನ್ನು ಸ್ಥಾಪಿಸಲಾಯಿತು ?
Answer
A. ಮಾನವ ಹಕ್ಕುಗಳ ರಕ್ಷಣಾ ಕಾಯಿದೆ, 1993
68
ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಅಥವಾ ನಿಗದಿತ ಸಮಯದ ಮಿತಿಯೊಳಗೆ ಮಾಹಿತಿಯನ್ನು ಒದಗಿಸದಿರುವುದಕ್ಕಾಗಿ ಮಾಹಿತಿ ಆಯೋಗವು ಆತನಿಗೆ ವಿಧಿಸಬಹುದಾದ ಗರಿಷ್ಠ ದಂಡ ಎಷ್ಟು ?
Answer
B. ₹ 25,000
69
RTI ಕಾಯಿದೆಯಡಿಯಲ್ಲಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಗರಿಷ್ಠ ಅಧಿಕಾರಾವಧಿ ಎಷ್ಟು ?
Answer
Question Cancelled
70
ದೂರದರ್ಶನದ ತನಿಖೆಯ ಸಮಯದಲ್ಲಿ RTI ಆಯೋಗವು ಯಾವ ಅಧಿಕಾರವನ್ನು ಹೊಂದಿರುತ್ತದೆ ?
Answer
D. ಮೇಲಿನ ಎಲ್ಲವೂ
71
3 ಪೆನ್ನುಗಳು ಮತ್ತು 4 ಪೆನ್ಸಿಲ್‌ಗಳಿಗೆ 66 ರೂಪಾಯಿಗಳು, 6 ಪೆನ್ನುಗಳು ಮತ್ತು 3 ಪೆನ್ಸಿಲ್‌ಗಳಿಗೆ 72 ರೂಪಾಯಿಗಳು. ಹಾಗಾದರೆ ಒಂದು ಪೆನ್ನಿನ ವೆಚ್ಚ ಎಷ್ಟು ?
Answer
C. 12
72
ರೈಲಿನಲ್ಲಿ 360 ಕಿ. ಮೀ. ದೂರವನ್ನು ಕ್ರಮಿಸಲು 4 ಗಂಟೆ 30 ನಿಮಿಷಗಳು ಬೇಕಾದವು. ಹಾಗಾದರೆ ರೈಲಿನ ಸರಾಸರಿ ವೇಗ ಎಷ್ಟು ?
Answer
C. 80 ಕಿ.ಮೀ./ಗಂ.
73
ಕೆಳಗಿನ ಭಿನ್ನರಾಶಿಗಳಲ್ಲಿ ಯಾವುದು ದೊಡ್ಡದಾಗಿದೆ ? 2/5, 7/10, 3/4, 2/1
Answer
D. 2/1
74
ಮನೆಗೆ ಪೈಂಟಿಂಗ್ ಮಾಡುವಾಗ 24 ಲೀಟರ್ ಪೈಂಟಿಗೆ 3 ಲೀಟರ್ ಟರ್ಪಂಟೈನ್ ಸೇರಿಸಲಾಗಿತ್ತು. 32 ಲೀಟರ್ ಪೈಂಟಿಗೆ ಎಷ್ಟು ಲೀಟರ್ ಟರ್ಪಂಟೈನ್ ಅನ್ನು ಸೇರಿಸಬೇಕಾಗುತ್ತದೆ ?
Answer
B. 4 ಲೀಟರ್
75
ನಾಲ್ಕು ವರ್ಷಗಳ ಹಿಂದೆ, ರಹೀಮ್‌ನ ವಯಸ್ಸು ರಾಮುವಿನ ವಯಸ್ಸಿಗಿಂತ ಮೂರು ಪಟ್ಟು ಇತ್ತು. ಎರಡು ವರ್ಷಗಳ ನಂತರ ಅವರು ದುಪ್ಪಟ್ಟಾಗುವರು. ಹಾಗಾದರೆ ರಾಮುವಿನ ಈಗಿನ ವಯಸ್ಸು ಎಷ್ಟು ?
Answer
C. 10
76
ಸೂಕ್ತ ಸಂಬಂಧವನ್ನು ಹುಡುಕಿ ಮತ್ತು ಭರ್ತಿ ಮಾಡಿ. MARK : PDUN : : SCOR :
Answer
B. VFRU
77
ಅಪವರ್ತಕವಾದುದನ್ನು ಹುಡುಕಿ. 2, 3, 4, 5
Answer
C. 4
78
ಎರಡು ಸಂಖ್ಯೆಗಳಲ್ಲಿ ಮೊದಲನೆಯದು ಎರಡನೆಯದಕ್ಕಿಂತ 5 ಪಟ್ಟು ಇದೆ. ಆ ಸಂಖ್ಯೆಗಳ ಮೊತ್ತವು 96 ಆಗಿದ್ದರೆ, ಚಿಕ್ಕ ಸಂಖ್ಯೆ ಯಾವುದು ?
Answer
A. 16
79
ಒಬ್ಬ ವ್ಯಕ್ತಿ ತನ್ನ ಮನೆಯಿಂದ 300 ಮೀಟರ್ ದಕ್ಷಿಣಕ್ಕೆ ನಡೆಯುತ್ತಾನೆ. ಅನಂತರ ಅವನು ಎಡಕ್ಕೆ ತಿರುಗಿ 100 ಮೀ. ನಡೆಯುತ್ತಾನೆ, ಅನಂತರ ಬಲಕ್ಕೆ ತಿರುಗಿ 200 ಮೀ. ನಡೆಯುತ್ತಾನೆ, ಅನಂತರ ಮತ್ತೆ ಬಲಕ್ಕೆ ತಿರುಗಿ 100 ಮೀ. ನಡೆಯುತ್ತಾನೆ, ಅವನು ಮನೆಯಿಂದ ಯಾವ ದಿಕ್ಕಿನಲ್ಲಿ ಎಷ್ಟು ದೂರದಲ್ಲಿದ್ದಾನೆ ?
Answer
D. 500 ಮೀಟರ್ ದಕ್ಷಿಣ
80
ಗಡಿಯಾರದ ಸಮಯ 5.10 ಆಗಿದ್ದರೆ, ಪ್ರತಿಬಿಂಬದಲ್ಲಿ ಸಮಯ ಎಷ್ಟು ?
Answer
A. 6.50
81
He came early, ______ Use the correct question tag.
Answer
C. didn’t he ?
82
If I prepared well, I ______ the project. Choose the right verb.
Answer
D. would complete
83
One of my friends ______ with me yesterday. Choose the right option.
Answer
A. was
84
I am sure that somebody was spying __________ us. Choose the correct preposition.
Answer
B. on
85
They said, “We arrived late”. Change the speech.
Answer
C. They said that they had arrived late.
86
Which is the synonym for the word, ‘resemblance’ ?
Answer
A. similarity
87
Identify the meaning of the idiom, “a piece of cake”.
Answer
D. very easy task
88
A group of monkeys is called
Answer
D. troop
89
The fear of the dark is known as
Answer
A. nyctophobia
90
Write the one word substitute for the art related to decorative and beautiful handwriting.
Answer
B. calligraphy
91
ಕೆಳಗೆ ಕೊಟ್ಟಿರುವವುಗಳಲ್ಲಿ ಯಾವುದು ಪಂಚ ದ್ರಾವಿಡ ಭಾಷೆಗೆ ಒಳಪಡುವುದಿಲ್ಲ ?
Answer
B. ಹಿಂದಿ
92
ಭಾಸ್ವರ – ಈ ಪದದ ಅರ್ಥ
Answer
D. ಸೂರ್ಯ
93
ಮರದಲ್ಲಿ : ಸಪ್ತಮಿ ವಿಭಕ್ತಿ, ಮರವನ್ನು : __________
Answer
B. ದ್ವಿತೀಯ ವಿಭಕ್ತಿ
94
ಪ್ರತ್ಯುತ್ತರ – ಇದರ ಪದವಿಂಗಡಣೆ
Answer
A. ಪ್ರತಿ + ಉತ್ತರ
95
Reservation– ಇದರ ಕನ್ನಡ ಬಳಕೆಯ ರೂಪ
Answer
B. ಮೀಸಲಾತಿ
96
ಕೆಳಗೆ ಕೊಟ್ಟಿರುವವುಗಳಲ್ಲಿ ಗುಂಪಿಗೆ ಸೇರದಿರುವುದು ಯಾವುದು ?
Answer
D. ನೇಸರ
97
Where there is will, there is the way – ಇದರ ಕನ್ನಡ ಅನುವಾದ
Answer
C. ಮನಸ್ಸಿದ್ದರೆ ಮಾರ್ಗ
98
ಸರಿಯಾದ ಪದ ಯಾವುದು ?
Answer
A. ಸಂಬಂಧಿತ
99
ಕೆಳಗಿನವುಗಳಲ್ಲಿ ಕ್ರಿಯಾಪದವೂ ನಾಮಪದವೂ ಆಗಬಲ್ಲ ಪದ ಯಾವುದು ?
Answer
D. ಕಾಡು
100
ಸರಿಯಾದ ವಾಕ್ಯ ಯಾವುದು ?
Answer
C. ಮಗು ಜೋರಾಗಿ ಅಳುತ್ತಿತ್ತು.
Discussion
Ask a doubt or share a tip.
No comments yet — start the discussion.