| Post Name | Female Assistant Prison Officer (NCA- Hindu Nadar) - Prisons |
|---|---|
| Question Paper Code | 022/2024 |
| Category Code | 276/2023 |
| Date of Test | 13 February 2024 |
| Medium of Question | KANNADA |
| Exam Type | OMR Examination |
| Total Questions | 100 |
1
ಕೆಳಗೆ ಸೂಚಿಸಿದ ವ್ಯಕ್ತಿಯನ್ನು ಗುರುತಿಸಿ. * 1898 ರಲ್ಲಿಕೊಡುಂಗಲ್ಲೂರಿನಲ್ಲಿ ಜನಿಸಿದರು * ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು * ಅನಂತರ ಅವರು ಸುಭಾಷ್ ಚಂದ್ರ ಬೋಸ್ ಅವರ ಫಾರ್ವರ್ಡ್ ಬ್ಲಾಕ್ನಿಂದ ಪ್ರಭಾವಿತರಾದರು * “ಅಲ್ ಅಮೀನ್” ಎಂಬ ದಿನಪತ್ರಿಕೆಯ ಸಂಸ್ಥಾಪಕ ಮತ್ತು ಸಂಪಾದಕ
Answer
D. ಮುಹಮ್ಮದ್ ಅಬ್ದುರಹಿಮಾನ್ ಸಾಹಿಬ್
2
ಯಾವ ಪ್ರದೇಶವನ್ನು ಡಾಲ್ಹೌಸಿಯವರು “ಒಂದು ದಿನ ನಮ್ಮ ಬಾಯಲ್ಲಿಇಳಿಯುವ ಚೆರ್ರಿ ಹಣ್ಣು” ಎಂದು ವರ್ಣಿಸಿದರು ?
Answer
B. ಅವಧ್
3
ಕೆಳಗಿನವುಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 1929 ರ ಲಾಹೋರ್ ಅಧಿವೇಶನಕ್ಕೆ ಸಂಬಂಧಿಸದ ನಿರ್ಣಯ(ಗಳನ್ನು) ಕಂಡುಹಿಡಿಯಿರಿ. i) ಜವಾಹರಲಾಲ್ ನೆಹರು ಕಾಂಗ್ರೆಸ್ ಅಧ್ಯಕ್ಷರಾದರು ii) ಪೂರ್ಣ ಸ್ವರಾಜ್ ಕಾಂಗ್ರೆಸ್ನ ಗುರಿ iii) ಅಸಹಕಾರ ಚಳುವಳಿಯ ಆರಂಭ iv) ಜನವರಿ 26, 1930 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬೇಕು
Answer
A. iii) ಮಾತ್ರ
4
ಈ ಕೆಳಗಿನವುಗಳಲ್ಲಿ 1921 ಎಂಬುದು ಯಾವ ಘಟನೆಯ ಶತಮಾನೋತ್ಸವ ವರ್ಷವಾಗಿದೆ ?
Answer
A. ವ್ಯಾಗನ್ ದುರಂತ
5
ಕೆಳಗಿನ ಜೋಡಿಗಳನ್ನು ಪರಿಶೀಲಿಸಿ. i) ಕುಡಿ ಅರಸು — ಇ. ವಿ. ರಾಮಸ್ವಾಮಿ ನಾಯ್ಕರ್ ii) ವಿವೇಕವರ್ಧಿನಿ — ವೀರೇಶಲಿಂಗಂ iii) ಗುಲಾಮಗಿರಿ — ಜ್ಯೋತಿರಾವ್ ಫುಲೆ iv) ಸಂಬಾದ್ ಕೌಮುದಿ — ಶ್ರೀ ನಾರಾಯಣ ಗುರು ಇವುಗಳಲ್ಲಿ ಸರಿಯಾದ ಜೋಡಿ(ಗಳನ್ನು) ಕಂಡುಹಿಡಿಯಿರಿ.
Answer
B. i), ii) ಮತ್ತು iii)
6
ಕೆಳಗಿನವುಗಳನ್ನು ಕಾಲಾನುಕ್ರಮದ ಆಧಾರದ ಮೇಲೆ ಜೋಡಿಸಿ. i) ಫ್ರೆಂಚ್ ಕ್ರಾಂತಿ ii) ಇಂಗ್ಲೆಂಡ್ನಲ್ಲಿನ ಮಹಾಕ್ರಾಂತಿ iii) ರಷ್ಯಾದ ಕ್ರಾಂತಿ iv) ಅಮೇರಿಕನ್ ಸ್ವಾತಂತ್ರ್ಯ ಹೋರಾಟ
Answer
C. ii), iv), i), iii)
7
ಅತ್ಯಂತ ಪ್ರಸಿದ್ಧವಾದ ‘ಮೂಗಾ ಸಿಲ್ಕ್’ ಎಂಬುದು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
Answer
B. ಅಸ್ಸಾಂ
8
ಜಿಪಿಎಸ್ ಬಳಸಿ ಒಂದು ಸ್ಥಳವನ್ನು ನಿಖರವಾಗಿ ನಿರ್ಧರಿಸಲು ಕನಿಷ್ಠ ಎಷ್ಟು ಉಪಗ್ರಹಗಳ ಸಂಕೇತದ ಅಗತ್ಯವಿದೆ ?
Answer
D. 4 ಉಪಗ್ರಹಗಳು
9
ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಹುಟ್ಟುವ ‘ಟೆಲ್ ನದಿ’ ಯಾವ ನದಿಯ ಉಪನದಿಯಾಗಿದೆ ?
Answer
A. ಮಹಾನದಿ
10
ಈ ಕೆಳಗಿನವುಗಳಲ್ಲಿ ಯಾವುದನ್ನು ಕೇವಲ ‘ರಾಬಿ ಬೆಳೆ’ ಎಂದು ಬೆಳೆಸಲಾಗುತ್ತದೆ ?
Answer
D. ಬಾರ್ಲಿ ಮತ್ತು ದ್ವಿದಳ ಧಾನ್ಯಗಳು
11
ಭಾರತದಲ್ಲಿ ಮೊದಲು ಮಾನ್ಸೂನ್ ಮಳೆ ಬೀಳುವ ಪ್ರದೇಶ ಯಾವುದು ?
Answer
B. ಪಶ್ಚಿಮ ಘಟ್ಟಗಳು
12
‘ತಿಪೈ ಮುಖ್’ ಅಣೆಕಟ್ಟು ಯಾವ ದೇಶಗಳ ನಡುವಿನ ವಿವಾದಕ್ಕೆ ಕಾರಣವಾಗಿತ್ತು ?
Answer
A. ಭಾರತ – ಬಾಂಗ್ಲಾದೇಶ
13
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸಕ್ತ ಗವರ್ನರ್ ಯಾರು ?
Answer
A. ಶಕ್ತಿಕಾಂತ ದಾಸ್
14
ನಬಾರ್ಡ್ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ ? i) ಬಿ. ಶಿವರಾಮನ್ ಸಮಿತಿಯ ಶಿಫಾರಸಿನ ಮೇರೆಗೆ ನಬಾರ್ಡ್ ಅನ್ನು ರಚಿಸಲಾಗಿದೆ ii) ನಬಾರ್ಡ್ ಎಂಬುದು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಭಾರತದ ರಾಷ್ಟ್ರೀಯ ಬ್ಯಾಂಕ್ ಆಗಿದೆ iii) ನಬಾರ್ಡ್ ಪ್ರಧಾನ ಕಛೇರಿ ಮುಂಬೈನಲ್ಲಿದೆ
Answer
D. i), ii) ಮತ್ತು iii)
15
ಕೇರಳ ರಾಜ್ಯದಲ್ಲಿಕುಟುಂಬಶ್ರೀ ಆದಾಯ ಮತ್ತು ಉದ್ಯೋಗವನ್ನು ಖಾತರಿಪಡಿಸುವ ಮೂಲಕ 100 ದಿನಗಳಲ್ಲಿ6429 ಕುಟುಂಬಗಳನ್ನು ಬಡತನದ ತೀವ್ರತೆಯಿಂದ ಮುಕ್ತಗೊಳಿಸಲು ಯಾವ ಯೋಜನೆಯನ್ನು ಜಾರಿಗೊಳಿಸಿದೆ ?
Answer
D. ಉಜ್ಜೀವನಂ ಯೋಜನೆ
16
ಸುವರ್ಣ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ ?
Answer
D. ತೋಟಗಾರಿಕೆ
17
ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಯಾವುದು ?
Answer
C. ಭಾರತ
18
ಭಾರತೀಯ ಯೋಜನಾ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ ?
Answer
A. ಪಿ. ಸಿ. ಮಹಲನೋಬಿಸ್
19
ಹಣಕಾಸು ಮಸೂದೆಯ ಬಗೆಗಿನ ಭಾರತೀಯ ಸಂವಿಧಾನದ ಪರಿಚ್ಛೇದ
Answer
A. 109
20
ಕೆಳಗಿನವುಗಳಲ್ಲಿ ಯಾವುದನ್ನು ಕಾಂಕರೆಂಟ್ ಪಟ್ಟಿಯಲ್ಲಿ ಸೇರಿಸಲಾಗಿದೆ ? i) ಸಾರ್ವಜನಿಕ ಆರೋಗ್ಯ ii) ಕಲ್ಯಾಣಕ್ಕೆ iii) ಉದ್ಯೋಗ iv) ವ್ಯಾಪಾರ ಮತ್ತು ವಾಣಿಜ್ಯ
Answer
B. ii) ಮತ್ತು iii)
21
ಈ ಕೆಳಗಿನವುಗಳಲ್ಲಿ ಯಾವುದು/ವು ಚುನಾವಣಾ ಆಯೋಗದ ಕರ್ತವ್ಯ ಆಗಿದೆ/ವೆ ? i) ಮೀಸಲು ಕ್ಷೇತ್ರಗಳನ್ನು ಗೊತ್ತುಪಡಿಸುವುದು ii) ಮತದಾರರ ಪಟ್ಟಿಯನ್ನು ತಯಾರಿಸುವುದು iii) ಪಂಚಾಯತ್ ಚುನಾವಣೆಗಳ ಮೇಲ್ವಿಚಾರಣೆ
Answer
B. ii)
22
ಸಂವಿಧಾನ ಸಭೆಯ ಮೊದಲ ಅಧಿವೇಶನ ನಡೆದುದು
Answer
A. 9 ಡಿಸೆಂಬರ್ 1949ರಂದು ದೆಹಲಿಯಲ್ಲಿ
23
1989ರಲ್ಲಿ ______ ಸ್ಥಳೀಯ ಸಂಸ್ಥೆಗಳ ಸಾಂವಿಧಾನಿಕ ಮಾನ್ಯತೆಯನ್ನು ಶಿಫಾರಸು ಮಾಡಿತು.
Answer
C. ಪಿ.ಕೆ. ತುಂಗನ್ ಸಮಿತಿ
24
ಈ ಕೆಳಗಿನವುಗಳಲ್ಲಿ ಉಚ್ಚ ನ್ಯಾಯಾಲಯವು ಹೊರಡಿಸಬಹುದಾದ ಆದೇಶ/ಗಳು i) ಹೇಬಿಯಸ್ ಕಾರ್ಪಸ್ ii) ಕ್ವೋ ವಾರಂಟೋ iii) ಸರ್ಟಿಯೋರರಿ
Answer
C. i), ii) ಮತ್ತು iii)
25
ಈ ಕೆಳಗಿನವುಗಳು ಮಾರ್ಗದರ್ಶಿ ಸೂತ್ರಗಳಲ್ಲಿ ಸೇರಿವೆ i) ದೇಶದ ರಕ್ಷಣೆ ii) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ iii) ಶೋಷಣೆ ವಿರುದ್ಧ ಹಕ್ಕು iv) ಪರಿಸರ ರಕ್ಷಣೆ
Answer
D. ii) ಮತ್ತು iv)
26
ಯಾವ ಸಾಂವಿಧಾನಿಕ ತಿದ್ದುಪಡಿಯು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸ್ವತ್ತಿನ ಹಕ್ಕನ್ನು ತೆಗೆದುಹಾಕಿತು ?
Answer
B. 44
27
ಭಾರತೀಯ ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯನ್ನು ಯಾವಾಗ ಅಂಗೀಕರಿಸಿತು ?
Answer
A. ಆಗಸ್ಟ್ 5, 2019ರಂದು
28
ಕೇರಳದಲ್ಲಿ ಹದಿನಾಲ್ಕನೇ ಪಂಚವಾರ್ಷಿಕ ಯೋಜನೆ ಅವಧಿ
Answer
B. 2022 – 2027
29
ಈ ಕೆಳಗಿನವುಗಳಲ್ಲಿ ಯಾವುದು ಕೇರಳ ಸಾಮಾಜಿಕ ಭದ್ರತಾ ಮಿಷನ್ ಯೋಜನೆಯಾಗಿಲ್ಲ ? i) ತಲೋಲಂ ii) ಸ್ನೇಹಪೂರ್ವಂ iii) ಶ್ರುತಿ ತರಂಗಂ iv) ಕುಟುಂಬಶ್ರೀ
Answer
D. iv)
30
ಕೇರಳ ರಾಜ್ಯ ಹಣಕಾಸು ಆಯೋಗವನ್ನು ರಚಿಸಿದ ಸಂವಿಧಾನದ ಪರಿಚ್ಛೇದ
Answer
A. 243 (I) ಮತ್ತು 243 (Y)
31
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಏಪ್ರಿಲ್ 1, 2023ರಿಂದ ಕೇರಳದಲ್ಲಿ ಕಾರ್ಮಿಕರ ದೈನಂದಿನ ವೇತನದಲ್ಲಿ ಎಷ್ಟು ಹೆಚ್ಚಳವಾಗಿದೆ ?
Answer
A. 22 ರೂಪಾಯಿಗಳು
32
ಕೆಳಗೆ ನೀಡಲಾಗಿರುವ ಸಂಕೇತಗಳಿಂದ ಕೋಷ್ಟಕ (I) (ಆರೋಗ್ಯ ಮತ್ತು ಕಲ್ಯಾಣ ಚಟುವಟಿಕೆಗಳು)ರೊಂದಿಗೆ ಹೊಂದಿಕೆಯಾಗುವ ಕೋಷ್ಟಕ (II) (ಫಲಾನುಭವಿಗಳು)ರ ಸರಿಯಾದ ಉತ್ತರವನ್ನು ಆರಿಸಿ. ಕೋಷ್ಟಕ (I) a) ಮಂದಹಾಸಂ ಯೋಜನೆ b) ಸಮನ್ವಯ ಕಾರ್ಯಕ್ರಮ c) ಅಭಯಕಿರಣಂ ಯೋಜನೆ d) ನಿರಾಮಯ ಆರೋಗ್ಯ ವಿಮಾ ಸ್ಕೀಂ ಕೋಷ್ಟಕ (II) 1) ನಿರ್ಗತಿಕ ವಿಧವೆಯರು 2) ಅಪರಾಧದಿಂದ ಬದುಕುಳಿದವರು (ಬಲಿಪಶುಗಳು) 3) ವಿಶೇಷಚೇತನ ವ್ಯಕ್ತಿಗಳು 4) ಬಿಪಿಎಲ್ ವರ್ಗದ ಹಿರಿಯ ನಾಗರಿಕರು 5) ತೃತೀಯ ಲಿಂಗಿಗಳು
Answer
A. 4513
33
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು R21/Matrix-M ಲಸಿಕೆಯನ್ನು ಯಾವ ರೋಗದ ವಿರುದ್ಧ ಪೂರ್ವ ಅರ್ಹತೆಯೊಂದಿಗೆ ಅನುಮೋದಿಸಿದೆ ?
Answer
D. ಮಲೇರಿಯಾ
34
ಕೆಳಗೆ ನೀಡಿರುವ ಹೇಳಿಕೆ ಮತ್ತು ಕಾರಣವನ್ನು ಎಚ್ಚರಿಕೆಯಿಂದ ಓದಿ ಮತ್ತು ಸರಿಯಾದ ಆಯ್ಕೆಯನ್ನು ಕಂಡುಕೊಳ್ಳಿ. ಹೇಳಿಕೆ : ಹೃದಯ ಬಡಿತವನ್ನು ನಿಲ್ಲಿಸಿದಾಗ, ಅದನ್ನು ಹೃದಯ ಸ್ತಂಭನ ಎಂದು ಕರೆಯಲಾಗುತ್ತದೆ. ಕಾರಣ : ಹೃದಯ ವೈಫಲ್ಯ ಎಂದರೆ ಹೃದಯಾಘಾತ ಸಂಭವಿಸುತ್ತದೆ.
Answer
C. ಹೇಳಿಕೆ ಸರಿಯಾಗಿದೆ ಕಾರಣ ತಪ್ಪು
35
ಕೆಳಗಿನ ಹೇಳಿಕೆಗಳಲ್ಲಿ ಬೆರಿಬೆರಿ ಬಗ್ಗೆ ಸರಿಯಾದ ಆಯ್ಕೆಯನ್ನು ಆರಿಸಿ. 1. ವಿಟಮಿನ್ B₂ ರ ಕೊರತೆಯಿಂದ ಉಂಟಾಗುವ ಒಂದು ರೋಗ 2. ಥಯಾಮಿನ್ ಕೊರತೆಯಿಂದ ಉಂಟಾಗುವ ರೋಗ 3. ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಅಪೌಷ್ಟಿಕತೆಯಿಂದಾಗುವ ವೈಕಲ್ಯ 4. ಈ ರೋಗವು ಪ್ರಚಲಿತದಲ್ಲಿರುವ ದೇಶಗಳಲ್ಲಿ, ಪಾಲಿಶ್ ಮಾಡಿದ ಅಕ್ಕಿಯನ್ನು ಪ್ರಧಾನ ಆಹಾರವಾಗಿ ಸೇವಿಸುವುದರಿಂದ ಕಂಡುಬರುತ್ತದೆ 5. ರೋಗಲಕ್ಷಣಗಳು – ನರಶೂಲೆ, ಪಾರ್ಶ್ವವಾಯು, ಸ್ನಾಯು ನೋವು, ಮಾನಸಿಕ ಅಸ್ವಸ್ಥತೆ ಮತ್ತು ಹೃದಯ ಸ್ತಂಭನ
Answer
A. 2, 4, 5
36
2023ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ (COP – 28) ಎಲ್ಲಿ ನಡೆಯಿತು ?
Answer
C. ಯುಎಇ
37
ಟಿ-ಲಿಂಫೋಸೈಟ್ನ ವ್ಯತ್ಯಾಸದಲ್ಲಿ ಯಾವ ಗ್ರಂಥಿಯು ಪ್ರಮುಖ ಪಾತ್ರ ವಹಿಸುತ್ತದೆ ?
Answer
B. ಥೈಮಸ್ ಗ್ರಂಥಿ
38
ಯಾವ ತಾಪಮಾನದಲ್ಲಿ ಸೆಂಟಿಗ್ರೇಡ್ ಸ್ಕೇಲ್ ಮತ್ತು ಫ್ಯಾರನ್ಹೀಟ್ ಸ್ಕೇಲ್ ಸಮಾನವಾಗಿರುತ್ತದೆ ?
Answer
B. − 40°
39
ಫೋಟೋಎಲೆಕ್ಟ್ರಿಕ್ ಪರಿಣಾಮದಲ್ಲಿ, ಪ್ರತಿ ಸೆಕೆಂಡಿಗೆ ಹೊರಸೂಸುವ ಫೋಟೋಎಲೆಕ್ಟ್ರಾನ್ಗಳ ಸಂಖ್ಯೆ
Answer
C. ಬೆಳಕಿನ ತೀವ್ರತೆಗೆ ಅನುಪಾತದಲ್ಲಿರುತ್ತದೆ
40
ವಿದ್ಯುತ್ಕಾಂತೀಯ ತರಂಗವು ಗಾಳಿಯಿಂದ ಗಾಜಿನ ಚಪ್ಪಡಿಗೆ ಪ್ರವೇಶಿಸಿದಾಗ ಈ ಕೆಳಗಿನವುಗಳಲ್ಲಿ ಯಾವುದು ಬದಲಾಗುವುದಿಲ್ಲ ?
Answer
A. ಆವರ್ತನ
41
ಚಂದ್ರಯಾನ 3ರ ರೋವರ್ ಈ ಕೆಳಗಿನ ಯಾವುದರ ಉಪಸ್ಥಿತಿಯನ್ನು ದೃಢಪಡಿಸಿತು ?
Answer
D. A) ಮತ್ತು C)
42
ಅಕ್ವಾರೇಜಿಯಾ ಯಾವುದರ ಮಿಶ್ರಣವಾಗಿದೆ ?
Answer
C. HCl, HNO₃
43
ವಾಶಿಂಗ್ ಸೋಡಾದ ರಾಸಾಯನಿಕ ಸೂತ್ರವು ______
Answer
B. Na₂CO₃·10H₂O
44
ಈ ಲೋಹವನ್ನು ಅದರ ಕಡಿಮೆ ಸಾಂದ್ರತೆಯಿಂದಾಗಿ ವಿಮಾನದ ಕವಚವನ್ನು ಮಾಡಲು ಬಳಸಲಾಗುತ್ತದೆ.
Answer
B. ಅಲ್ಯೂಮಿನಿಯಂ
45
ವಸ್ತುವಿನ ಪರಮಾಣು ಸಿದ್ಧಾಂತವನ್ನು ಮೊದಲು ಪ್ರಸ್ತಾಪಿಸಿದವರು ಯಾರು ?
Answer
D. ಜಾನ್ ಡಾಲ್ಟನ್
46
ನೋಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ಮೊದಲ ಆಫ್ರಿಕನ್ ಮಹಿಳೆ ಯಾರು ?
Answer
C. ವಾಂಗೆರಿ ಮಾತೆಯಿ
47
‘ದಿ ಸಿಟಾಡೆಲ್’ ಕಾದಂಬರಿಯ ಕರ್ತೃ ಒಬ್ಬ ವೈದ್ಯರು. ಅವರು ಯಾರು ?
Answer
D. ಎ. ಜೆ. ಕ್ರೋನಿನ್
48
‘ಅಲಮಿಕ್ಕೆ’ ಎಂಬುದು ಕೇರಳದ ಯಾವ ಜಿಲ್ಲೆಯಲ್ಲಿ ಕಂಡುಬರುವ ಜಾನಪದ ಕಲಾ ಪ್ರಕಾರವಾಗಿದೆ ?
Answer
D. ಕಾಸರಗೋಡು
49
“ಸೂರ್ಯಚು ನೋಕ್ಕು ಕವಿತಾಯಿಲ್ಲದಿಂತೊಂದು ಭೂಮಿಯಿಲ್” ಎಲ್ಲದರಲ್ಲೂ ಕಾವ್ಯವನ್ನು ಕಾಣುವ ಈ ಮಹಾಕವಿ ಯಾರು ?
Answer
B. ಪಿ. ಕುಂಜಿರಾಮನ್ ನಾಯರ್
50
2023 ರ ಕಾದಂಬರಿ “ದಿ ಕವನಂಟ್ ಆಫ್ ವಾಟರ್” ಅನ್ನು ಬರೆದವರು ಯಾರು ?
Answer
A. ಅಬ್ರಹಾಂ ವರ್ಗೀಸ್
51
0.01 ರ ಎಷ್ಟು ಶೇಕಡಾವಾರು 0.001 ಆಗಿದೆ ?
Answer
B. 10
52
15 __ 3 __ 4 __ 5 = 25 ಇದಕ್ಕೆ ಸೇರಿಸಲು ಸರಿಯಾದ ಚಿಹ್ನೆಗಳು ಯಾವುವು ?
Answer
A. ÷, +, ×
53
ಶಾಲೆಯ ಒಟ್ಟು ಮಕ್ಕಳಲ್ಲಿ 55% ಹುಡುಗಿಯರು ಮತ್ತು ಉಳಿದವರು ಹುಡುಗರು. ಶೇ. 90 ರಷ್ಟು ಬಾಲಕಿಯರು ಹಾಗೂ ಶೇ. 80 ರಷ್ಟು ಬಾಲಕರು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಶಾಲೆಯಲ್ಲಿ 1600 ವಿದ್ಯಾರ್ಥಿಗಳಿದ್ದರೆ ಎಷ್ಟು ಶೇಕಡಾ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ?
Answer
A. 14.5
54
156 : ? :: 182 : 342
Answer
D. 306
55
ಅರುಣ್ ಮತ್ತು ಕಣ್ಣನ್ ಬೈಕ್ನಲ್ಲಿ ನಿರ್ದಿಷ್ಟ ಸ್ಥಳಕ್ಕೆ ತೆರಳುತ್ತಾರೆ. ಅರುಣ್ ಗಂಟೆಗೆ 60 ಕಿ. ಮೀ. ವೇಗದಲ್ಲಿ ಸಂಚರಿಸುತ್ತಿದ್ದಾರೆ ಮತ್ತು ಕಣ್ಣನ್ ಗಂಟೆಗೆ 40 ಕಿ. ಮೀ. ವೇಗದಲ್ಲಿ ಸಂಚರಿಸುತ್ತಿದ್ದಾರೆ. ಅರುಣ್ ಕಣ್ಣನ್ಗಿಂತ ಮೂರು ಗಂಟೆಗಳ ಮೊದಲು ತಮ್ಮ ಗಮ್ಯಸ್ಥಾನವನ್ನು ತಲುಪಿದರೆ, ಅವರು ಎಷ್ಟು ದೂರ ಪ್ರಯಾಣಿಸಿದರು ?
Answer
C. 360 ಕಿ. ಮೀ.
56
ನಿರ್ದಿಷ್ಟ ಸಂಕೇತ ಭಾಷೆಯಲ್ಲಿ ‘TEACHER’ ಎಂಬುದು WCDAKCU ಆಗಿದ್ದರೆ, ‘STUDENT’ ಪದದ ಸಂಕೇತ ಯಾವುದು ?
Answer
B. VRXBHLW
57
(3)^0.25 × (7)^0.25 × (16)^0.49 / ((21)^0.25 × (16)^0.24) = ?
Answer
A. 2
58
45 ಸೆಂ. ಮೀ. ಬದಿಯನ್ನು ಹೊಂದಿರುವ ಚೌಕಾಕಾರದ ಲೋಹದ ತಟ್ಟೆಯಿಂದ 9 ಸೆಂ. ಮೀ. ಬದಿಯ ಎಷ್ಟು ಚಿಕ್ಕ ಚೌಕಾಕಾರದ ಫಲಕಗಳನ್ನು ಮಾಡಬಹುದು ?
Answer
D. 25
59
ಸಮಯ 12.20 ಆಗಿರುವಾಗ ಗಡಿಯಾರದ ಮುಳ್ಳುಗಳ ನಡುವಿನ ಕೋನ ಎಷ್ಟು ?
Answer
D. 110°
60
ಒಬ್ಬ ಮನುಷ್ಯನು ಮನೆಯಿಂದ ಪೂರ್ವದ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದನು. ಅವನು ಬಲಕ್ಕೆ ತಿರುಗಿ ಮತ್ತು ನಂತರ ಮತ್ತೆ ಬಲಕ್ಕೆ ತಿರುಗಿ ಮತ್ತು ತನ್ನ ಪ್ರಯಾಣವನ್ನು ಮುಂದುವರೆಸುತ್ತಾನೆ, ಅವನು ಈಗ ಯಾವ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾನೆ ?
Answer
C. ಪಶ್ಚಿಮಕ್ಕೆ
61
Let’s go for a movie, ____________
Answer
B. shall we ?
62
I went to __________ National Park yesterday.
Answer
C. the
63
Choose the correct idiom for the word underlined. Siddharth is a straight arrow.
Answer
A. an honest and trustworthy person
64
If you work hard, __________
Answer
B. you will succeed
65
‘Faux pas’ means __________
Answer
A. an embarrassing or tactless act or remark in a social situation.
66
Choose the correct spelling.
Answer
B. bourgeois
67
You __________ obey the rules and regulations.
Answer
D. must
68
Neither Sam nor Ram __________ present.
Answer
A. is
69
Rahul said, “I live in Chennai”. Change into indirect speech.
Answer
A. Rahul said that he lived in Chennai.
70
Synonym for the word preposterous.
Answer
A. Contrary to reason or commonsense, utterly absurd
71
ಕೆಳಗಿನವುಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
Answer
B. ಪ್ರಬೇದ
72
‘ಸನ್ಮಾನ’ ಈ ಪದದ ವಿಗ್ರಹಣೆ
Answer
B. ಸತ್ + ಮಾನ
73
‘ಧರಿತ್ರಿ’ ಈ ಪದದ ಪರ್ಯಾಯ ಪದ
Answer
C. ಕ್ಷಿತಿ
74
Unity is strength – ಇದಕ್ಕೆ ಸಮಾನವಾದ ಕನ್ನಡ ಗಾದೆ
Answer
B. ಒಗ್ಗಟ್ಟಿನಲ್ಲಿ ಬಲವಿದೆ
75
‘ವಿಯೋಗ’ ಈ ಪದದ ವಿರೋಧಾರ್ಥ ಪದ
Answer
C. ಸಂಯೋಗ
76
ಒಂಟಿ ಕಾಲಲ್ಲಿ ನಿಲ್ಲು – ಈ ಭಾಷಾ ಪ್ರಯೋಗದ ಅರ್ಥ
Answer
B. ಕುತೂಹಲ
77
‘ಸದೃಶ’ ಈ ಪದದ ಭಾವನಾಮ
Answer
C. ಸಾದೃಶ್ಯ
78
ಕೆಳಗಿನವುಗಳಲ್ಲಿ ಬಹುವಚನ ಪದ
Answer
B. ಮಕ್ಕಳು
79
ಹಿಂದೆ ರಾಜಕುಮಾರಿಯರು ತಮ್ಮ ಮುಖ ಮುಚ್ಚಿಕೊಳ್ಳಲು ಬಳಸುತ್ತಿದ್ದ ಬಟ್ಟೆ
Answer
B. ಅವಗುಂಟನ
80
ಇಮ್ಮಡಿ ಈ ಪದದ ವಿಗ್ರಹ ವಾಕ್ಯ
Answer
C. ಎರಡು ಮಾಡಿ
81
ಜೀವಾವಧಿ ಖೈದಿಗಳನ್ನು ಹೊಂದಿರುವ ಜೈಲು
Answer
D. ಕೇಂದ್ರ ಕಾರಾಗೃಹ
82
ಕೇರಳ ರಾಜ್ಯ ರಚನೆಯ ಅನಂತರ ನಿರ್ಮಿಸಲಾದ ಮೊದಲ ಕೇಂದ್ರ ಕಾರಾಗೃಹ
Answer
C. ತವನೂರ್
83
ಯಾವ ಹುದ್ದೆಯು ಕೇಂದ್ರ ಕಾರಾಗೃಹದ ಜಂಟಿ ಸೂಪರಿಂಟೆಂಡೆಂಟ್ಗೆ ಸಮಾನವಾಗಿದೆ ?
Answer
B. ಮಹಿಳಾ ಜೈಲು ಸೂಪರಿಂಟೆಂಡೆಂಟ್
84
ನೆಟ್ಟುಕಾಲ್ತೇರಿ ಮುಕ್ತ ಜೈಲು ಸ್ಥಾಪನೆಯಾದ ವರ್ಷ
Answer
B. 1962
85
ಕೇರಳ ರಾಜ್ಯದಲ್ಲಿ ಮಹಿಳೆಯರಿಗಾಗಿ ಇರುವ ಏಕೈಕ ಮುಕ್ತ ಜೈಲು ಯಾವ ಜಿಲ್ಲೆಯಲ್ಲಿದೆ ?
Answer
D. ತಿರುವನಂತಪುರಂ
86
ಕೇರಳ ಜೈಲು ಇಲಾಖೆಯಲ್ಲಿ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ಉಸ್ತುವಾರಿ ಅಧಿಕಾರಿ ಯಾರು ?
Answer
B. ಡಿ.ಜಿ.ಪಿ. ಅಥವಾ ಐ.ಜಿ.
87
ಈ ಕೆಳಗಿನವುಗಳಲ್ಲಿ ಯಾವುದನ್ನು ಮಾಹಿತಿ ಹಕ್ಕು ಕಾಯಿದೆ, 2005 ರ ಶೆಡ್ಯೂಲ್ II ರಲ್ಲಿ ಸೇರಿಸಲಾಗಿಲ್ಲ ?
Answer
D. ವಿಜಿಲೆನ್ಸ್
88
ಆರ್ಟಿಐ ಕಾಯಿದೆಯ ಅಡಿಯಲ್ಲಿ ಸಾಮಾನ್ಯ ಮಾಹಿತಿ ಆರ್ಟಿಐ ಅರ್ಜಿಗೆ ಪ್ರತ್ಯುತ್ತರಿಸಲು ಗರಿಷ್ಠ ಸಮಯ ಎಷ್ಟು ?
Answer
C. 30 ದಿನಗಳು
89
ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ನೀಡಲಾಗಿರುವ
Answer
A. ಮಾಹಿತಿಯನ್ನು ಸಾರ್ವಜನಿಕಗೊಳಿಸಬಾರದು ಎಂದು ನ್ಯಾಯಾಲಯದ ಆದೇಶ
90
ಯಾರು ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಆಯ್ಕೆಯ ಶಿಫಾರಸುಗಳನ್ನು ಸಿದ್ಧಪಡಿಸುವ ಸಮಿತಿಯ ಭಾಗವಾಗಿಲ್ಲ ?
Answer
A. ಉಪ ರಾಷ್ಟ್ರಪತಿ
91
ರಾಷ್ಟ್ರೀಯ ಮಾನವ ಹಕ್ಕುಗಳ ಕಾಯಿದೆ, 1993 ರ ಪ್ರಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಹುದ್ದೆಯನ್ನು ಯಾರು ಹೊಂದಿದ್ದಾರೆ ?
Answer
A. ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶರು
92
ರಾಷ್ಟ್ರೀಯ ಮಾನವ ಹಕ್ಕುಗಳ ಕಾಯಿದೆ, 1993 ರ ಯಾವ ಸೆಕ್ಷನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ವ್ಯಾಖ್ಯಾನಿಸುತ್ತದೆ ?
Answer
B. ಸೆಕ್ಷನ್ 2(1) c
93
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ವಾರ್ಷಿಕ ವಿಶೇಷ ವರದಿಗಳನ್ನು ಯಾರಿಗೆ ಸಲ್ಲಿಸುತ್ತದೆ ?
Answer
C. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ
94
ಯಾವ ಅಧಿಕೃತ ದಾಖಲೆಯನ್ನು ವಿಶ್ವದ ಹಕ್ಕಿನ ಭಾಷೆಗಳಿಗೆ ಅನುವಾದಿಸಲಾಗಿದೆ ?
Answer
B. ಇಂಟರ್ನ್ಯಾಷನಲ್ ಜನರಲ್ ಆಫ್ ಹ್ಯೂಮನ್ ರೈಟ್ಸ್
95
ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸದಸ್ಯರಾಗಿ ನೇಮಕಗೊಂಡ ವ್ಯಕ್ತಿಯ ಅಧಿಕಾರದ ಅವಧಿ
Answer
A. ಮೂರು ವರ್ಷಗಳ ಅಧಿಕಾರಾವಧಿ, ಮರು ನೇಮಕಕ್ಕೆ ಅರ್ಹರಾಗಿದ್ದರೆ
96
ಮನೋವಿಶ್ಲೇಷಣಾತ್ಮಕ ಸಿದ್ಧಾಂತದ ಸ್ಥಾಪಕರು ಯಾರು ? i) ಸಿಗ್ಮಂಡ್ ಫ್ರಾಯ್ಡ್ ii) ವಿಲಿಯಂ ವುಂಡ್ iii) ಕಾರ್ಲ್ ಯೂಂಗ್ iv) ಕಾರ್ಲ್ ರೋಜರ್ಸ್
Answer
B. i)
97
ಕೆಳಗಿನವುಗಳಲ್ಲಿ ಮಾನಸಿಕ ಒತ್ತಡದ ಆಂತರಿಕ ಲಕ್ಷಣ ಯಾವುದು ? i) ಮಾನಸಿಕ ಪರಿಹಾರ ii) ಶ್ರದ್ಧೆ ಕೇಂದ್ರೀಕರಿಸುವಲ್ಲಿ ತೊಂದರೆ iii) ಉತ್ತಮತಮ ಏಕಾಗ್ರತೆ iv) ಇವುಗಳಲ್ಲಿ ಯಾವುದೂ ಅಲ್ಲ
Answer
D. ii)
98
ಕೆಳಗಿನವುಗಳಲ್ಲಿ ಆತಂಕದ ದೈಹಿಕ ಲಕ್ಷಣ ಯಾವುದು ? i) ಕಡಿಮೆ ರಕ್ತದೊತ್ತಡ ii) ಅಸ್ಪಷ್ಟ ಮಾತು iii) ನಿಧಾನ ಉಸಿರಾಟ iv) ಹೆಚ್ಚಿದ ಹೃದಯ ಬಡಿತ
Answer
A. iv)
99
ಬಹುಮುಖಿ ಬುದ್ಧಿವಂತಿಕೆಗಳ ಸಿದ್ಧಾಂತವನ್ನು ಆವಿಷ್ಕಾರ ಮಾಡಿದವರು ಯಾರು ? i) ಆಲ್ಫ್ರೆಡ್ ಬಿನೆಟ್ ii) ಲೆವಿಸ್ ಟರ್ಮನ್ iii) ಹೊವಾರ್ಡ್ ಗಾರ್ಡನರ್ iv) ಡೇನಿಯಲ್ ಗೋಲ್ಮನ್
Answer
C. iii)
100
ಮಾಸ್ಲೋರವರ ಅಗತ್ಯತೆಗಳ ಸಿದ್ಧಾಂತದ ಶ್ರೇಣಿಯ ಪ್ರಕಾರ, ಅತ್ಯುನ್ನತ ಮಟ್ಟದ ಅಗತ್ಯವೆಂದರೆ i) ದೈಹಿಕ ಅಗತ್ಯ ii) ಭದ್ರತೆ ಅಗತ್ಯ iii) ಸ್ವಯಂ-ಸಾಕ್ಷಾತ್ಕಾರ ಅಗತ್ಯ iv) ಸ್ನೇಹಕ್ಕೆ ಸಂಬಂಧಿಸಿದ ಅಗತ್ಯತೆಗಳು
Answer
D. iii)
Discussion
Ask a doubt or share a tip.
No comments yet — start the discussion.