Skip to content
10th Level - Practice App Completely Free · 100K+ Users Install

Kerala PSC Fire and Rescue Officer (Trainee) – Fire and Rescue Services Previous Question Paper – 244/2023

Practice Mode

Sit all 98 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameFire and Rescue Officer (Trainee) - Fire and Rescue Services
Question Paper Code244/2023
Category Code188/2023
Date of Test23 December 2023
Medium of QuestionKANNADA
Exam TypeOMR Examination
Total Questions100
1
1857 ರ ಕ್ರಾಂತಿಗೆ ಸಂಬಂಧಿಸಿದಂತೆ ನಾಯಕರು ಮತ್ತು ಅವರು ಕ್ರಾಂತಿಯನ್ನು ಮುನ್ನಡೆಸಿದ ಸ್ಥಳಗಳನ್ನು ನೀಡಲಾಗಿದೆ. ಇವುಗಳನ್ನು ಸರಿಯಾಗಿ ಹೊಂದಿಸಿ. 1. ನಾನಾ ಸಾಹೇಬ್ – A. ಲಕ್ನೋ 2. ಮೌಲವಿ ಅಹ್ಮದುಲ್ಲ – B. ಆರಾ 3. ಕನ್ವರ್ ಸಿಂಗ್ – C. ಕಾನ್ಪುರ 4. ಬೇಗಂ ಹಜರತ್ ಮಹಲ್ – D. ಫೈಜಾಬಾದ್
Answer
C. 1 – C, 2 – D, 3 – B, 4 – A
2
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ದಿಟವಾಗಿಲ್ಲ ? 1. ‘ಖೇಡ’ ಗಾಂಧೀಜಿಯವರು ಭಾರತದಲ್ಲಿ ಪ್ರಾರಂಭಿಸಿದ ಮೊದಲ ಸತ್ಯಾಗ್ರಹವಾಗಿತ್ತು. 2. 1922ರ ಚೌರಿ ಚೌರ ಘಟನೆಯ ಬೆನ್ನಲ್ಲಿ ಗಾಂಧೀಜಿಯವರು ತಮ್ಮ ಅಸಹಕಾರ ಚಳುವಳಿಯನ್ನು ಅಮಾನತ್ತಿನಲ್ಲಿರಿಸಿದರು. 3. ಎಲ್ಲಾ ಮೂರು ದುಂಡುಮೇಜಿನ ಪರಿಷತ್ತುಗಳಲ್ಲಿ ಗಾಂಧೀಜಿಯವರು ಭಾರತವನ್ನು ಪ್ರತಿನಿಧಿಸಿದರು. 4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 1920 ರ ಅಧಿವೇಶನವು ನಾಗಪುರದಲ್ಲಿ ನಡೆಯಿತು.
Answer
B. 1 ಮತ್ತು 3
3
ಕೇರಳದ ಪ್ರಥಮ ರೈಲು ಮಾರ್ಗ ಯಾವುದು ?
Answer
D. ಬೇಪೋರ್ – ತಿರೂರ್
4
‘ಅಂಧ ಕೇಸರಿ’ ಎಂದು ಪ್ರಸಿದ್ಧರಾದವರು ಯಾರು ?
Answer
B. ಟಿ. ಪ್ರಕಾಶಂ
5
“ಆಲಿವ್‌ ಬ್ರಾಂಚ್‌ ಪಿಟಿಶನ್‌' ಎಂದು ಕರೆಯಲಾಗುವ ಪಿಟಿಶನ್‌ ಯಾವುದಕ್ಕೆ ಸಂಬಂಧಿಸಿದೆ ?
Answer
D. ಅಮೇರಿಕನ್‌ ಸ್ವಾತಂತ್ರ್ಯ ಹೋರಾಟ
6
ಸಂಯುಕ್ತ ರಾಷ್ಟ್ರಗಳ ಸೆಕ್ರೆಟರಿ-ಜನರಲ್ ಆಗಿರುವ ಆಂಟೊನಿಯೊ ಗುಟೆರಸ್ ಯಾವ ದೇಶಕ್ಕೆ ಸೇರಿದವರು ?
Answer
C. ಪೋರ್ಚುಗೀಸ್
7
ವಾತಾವರಣದ ಪದರದಲ್ಲಿ ಹವಾಗೋಲಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳಲ್ಲಿ ಯಾವುದು ದಿಟವಾಗಿದೆ ? i. ಈ ಪದರದಲ್ಲಿ ತಾಪಮಾನವು ಪ್ರತಿ 165 ಮೀಟರ್ ಮೇಲ್ಮಟ್ಟದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ದರದಲ್ಲಿ ಕಡಿಮೆಯಾಗುತ್ತದೆ. ii. ವಾತಾವರಣದ ಅತ್ಯಂತ ಕೆಳಗಿನ ಪದರವಾಗಿರುತ್ತದೆ. iii. 15 ರಿಂದ 50 ಕಿ.ಮೀ. ಎತ್ತರ. iv. ಓಝೋನ್ ಪದರವು ಈ ಪ್ರದೇಶದಲ್ಲಿ ಕಂಡುಬರುತ್ತದೆ.
Answer
B. i ಮತ್ತು ii
8
ಕೆಳಗಿನವುಗಳಿಂದ ಅಸಾಂಪ್ರದಾಯಿಕ ಶಕ್ತಿಮೂಲಗಳನ್ನು ಆಯ್ಕೆ ಮಾಡಿರಿ. i. ಅಣುಶಕ್ತಿ ii. ನೈಸರ್ಗಿಕ ಅನಿಲ iii. ಸೌರಶಕ್ತಿ iv. ಜೈವಿಕೋಷ್ಟ್ಣ ಶಕ್ತಿ
Answer
Question Cancelled
9
ಯಾವುದು ಕೊಲ್ಲಂನಿಂದ ಕೊಟ್ಟಪುರಂನವರೆಗೆ ವ್ಯಾಪಿಸಿರುವ ಕೇರಳದ ಪ್ರಮುಖ ಜಲಮಾರ್ಗವಾಗಿರುತ್ತದೆ ?
Answer
C. NW 3
10
ಮುಂಗಾರು ಅರಣ್ಯಗಳೆಂದು ಪರಿಚಿತವಾದ ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಹರಡಿಕೊಂಡಿರುವ ಅರಣ್ಯಗಳು
Answer
A. ಉಷ್ಣವಲಯದ ಪತನಶೀಲ ಅರಣ್ಯಗಳು
11
ಇದು ಸಂಜೆ ಹೊತ್ತಲ್ಲಿ ಬಂಗಾಳ ಮತ್ತು ಅಸ್ಸಾಂ ಮೇಲೆ ರೂಪುಗೊಳ್ಳುವ ತೀವ್ರ ಚಂಡಮಾರುತ ಮಳೆಯೊಂದಿಗಿನ ಒಂದು ಬಿರುಗಾಳಿ ಆಗಿದೆ.
Answer
D. ನಾರ್‌ವೆಸ್ಟರ್
12
ಭಾರತದಲ್ಲಿ ಮೆಟ್ರೋ ಸೇವೆ ಪ್ರಾರಂಭಿಸಿದ ಪ್ರಥಮ ನಗರ
Answer
B. ಕಲ್ಕತ್ತಾ
13
_____ ಗ್ರಾಹಕನನ್ನು ಸರಿದೂಗಿಸುತ್ತದೆ.
Answer
C. ಬಜೆಟ್ ರೇಖೆ ಮತ್ತು ಔದಾಸೀನ್ಯ ವಕ್ರರೇಖೆ ಛೇದಿಸುವ ಬಿಂದುವಿನಲ್ಲಿ
14
ಸೊತ್ತುಗಳ ಅತ್ಯಂತ ದ್ರವರೂಪ
Answer
C. ಹಣ
15
ವ್ಯಕ್ತಿಯೋರ್ವನ ಆದಾಯ ಇವುಗಳಲ್ಲಿ ಯಾವುದು ?
Answer
D. ಇವುಗಳಲ್ಲಿ ಎಲ್ಲವೂ
16
ಉತ್ಪಾದನಾಂಶಗಳಿಗೆ ಬೇಡಿಕೆ ಎಂದರೆ ಏನು ?
Answer
B. ಪಡೆಯಲಾದ ಬೇಡಿಕೆ
17
_____ ಎಂಬುವುದು ಸೆಂಟ್ರಲ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲಗಳನ್ನು ನೀಡುವ ಸಮಯದಲ್ಲಿ ವಿಧಿಸಲಾಗುವ ಬಡ್ಡಿಯಾಗಿದೆ.
Answer
A. ಬ್ಯಾಂಕ್ ದರ
18
__________ ಅನ್ನು ಹೊರತುಪಡಿಸಿ ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಹಾಕಲಾಗುತ್ತದೆ.
Answer
C. ಗೃಹಿಣಿಯರ ಸೇವೆ
19
ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆ ಆಗಿರುತ್ತದೆ ? i. 73ನೆಯ ತಿದ್ದುಪಡಿಯು ಪಂಚಾಯತ್ ರಾಜ್ ಪದ್ಧತಿಯೊಂದಿಗೆ ವ್ಯವಹರಿಸುತ್ತದೆ. ii. 74ನೆಯ ತಿದ್ದುಪಡಿಯು ನಗರಸಭೆ ಆಡಳಿತದೊಂದಿಗೆ ವ್ಯವಹರಿಸುತ್ತದೆ. iii. ನೆಹರೂ, ಅಂಬೇಡ್ಕರ್ ಹಾಗೂ ಇತರರು ಸ್ಥಳೀಯ ಸಂಸ್ಥೆಗಳಿಗೆ ಒಲವು ತೋರಿದರು.
Answer
D. (i ಮತ್ತು ii) ಮಾತ್ರ
20
73ನೆಯ ಸಾಂವಿಧಾನಿಕ ತಿದ್ದುಪಡಿಯ ಬಗ್ಗೆ ಯಾವುದು ಸರಿಯಾದ ಹೇಳಿಕೆ ಆಗಿರುತ್ತದೆ ? i. ಪ್ರಾದೇಶಿಕ ಮಟ್ಟದಲ್ಲಿ ಒಂದು ಆಡಳಿತಾತ್ಮಕ 3-ಹಂತ ಪದ್ಧತಿಯನ್ನು ಒದಗಿಸಲಾಗಿದೆ. ii. ಜಿಲ್ಲಾ ಪಂಚಾಯತ್ ಅತ್ಯುನ್ನತ ಸಂಸ್ಥೆಯಾಗಿದೆ. iii. ಒಂದು ಆಡಳಿತಾತ್ಮಕ 3-ಹಂತ ಪದ್ಧತಿಯು ಎಲ್ಲಾ ರಾಜ್ಯಗಳಲ್ಲಿ ಅತ್ಯಗತ್ಯವಾಗಿರುತ್ತದೆ.
Answer
A. (i ಮತ್ತು ii) ಮಾತ್ರ
21
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ? i. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ 50% ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ii. ಅನುಸೂಚಿತ ಜಾತಿ/ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲಾಗಿದೆ. iii. ಅಗತ್ಯಬಿದ್ದಲ್ಲಿ, ರಾಜ್ಯಗಳಲ್ಲಿ ಇನ್ನಿತರ ಹಿಂದುಳಿದ ಜಾತಿಗಳ (OBC) ವರ್ಗಕ್ಕೂ ಮೀಸಲಾತಿ ಅವಕಾಶ ನೀಡಬಹುದು.
Answer
C. (ii ಮತ್ತು iii) ಮಾತ್ರ
22
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ? i. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ರಾಜ್ಯ ಚುನಾವಣಾ ಆಯೋಗದಿಂದ ನಡೆಸಲ್ಪಡುತ್ತವೆ. ii. ರಾಜ್ಯ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಜವಾಬ್ದಾರಿ ಆಗಿರುತ್ತದೆ. iii. ರಾಜ್ಯ ಚುನಾವಣಾ ಕಮೀಷನರ್‌ಗೆ ಸ್ವತಂತ್ರ ಅಧಿಕಾರಗಳಿರುತ್ತವೆ.
Answer
C. (i ಮತ್ತು iii) ಮಾತ್ರ
23
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿರುತ್ತದೆ ? i. ರಾಜ್ಯ ಹಣಕಾಸು ಆಯೋಗವು ರಾಜ್ಯ ಸರಕಾರದಿಂದ ನೇಮಿಸಲ್ಪಡುತ್ತದೆ. ii. ರಾಜ್ಯ ಹಣಕಾಸು ಆಯೋಗದ ಆಡಳಿತಾವಧಿಯು ನಾಲ್ಕು ವರ್ಷಗಳಾಗಿರುತ್ತದೆ. iii. ಸ್ಥಳೀಯ ಸಂಸ್ಥೆಗಳ ಹಣಕಾಸು ಸ್ಥಿತಿಗತಿಯು ರಾಜ್ಯ ಹಣಕಾಸು ಆಯೋಗದಿಂದ ಪರೀಕ್ಷಿಸಲ್ಪಡುತ್ತದೆ.
Answer
D. (i ಮತ್ತು iii) ಮಾತ್ರ
24
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ? i. ಸರ್ವೋನ್ನತ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಭಾರತದ ರಾಷ್ಟ್ರಪತಿಯವರಿಂದ ನೇಮಿಸಲ್ಪಡುತ್ತಾರೆ. ii. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ರಾಷ್ಟ್ರಾಧ್ಯಕ್ಷರು ಇತರ ನ್ಯಾಯಾಧೀಶರನ್ನು ನೇಮಿಸುತ್ತಾರೆ. iii. ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪವಿರುವುದಿಲ್ಲ.
Answer
B. (i ಮತ್ತು ii) ಮಾತ್ರ
25
ನ್ಯಾಯಾಧೀಶರನ್ನು ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ ? i. ಸಾಬೀತಾದ ಕೆಟ್ಟನಡತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರನ್ನು ವಜಾಗೊಳಿಸಲಾಗುತ್ತದೆ. ii. ಉಚ್ಚಾಟಿಸಲು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಪೂರ್ಣ ಬಹುಮತದ ಅಗತ್ಯವಿದೆ. iii. ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ವಿಶೇಷ ಬಹುಮತದ ಆಧಾರದ ಮೇಲೆ ಉಚ್ಚಾಟನೆಯನ್ನು ಮಾಡಲಾಗುತ್ತದೆ.
Answer
D. (i ಮತ್ತು iii) ಮಾತ್ರ
26
ರಿಟ್‌ಗೆ ಯಾವ ಹೇಳಿಕೆಯು ಸಂಬಂಧಿಸಿರುತ್ತದೆ ? i. ರಿಟ್ ನೀಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಮಾತ್ರ ಇದೆ. ii. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ರಿಟ್‌ಗಳನ್ನು ನೀಡಬಹುದು. iii. ಮುಖ್ಯವಾಗಿ 5 ರಿಟ್‌ಗಳಿರುತ್ತವೆ.
Answer
C. (ii ಮತ್ತು iii) ಮಾತ್ರ
27
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ? i. ರಾಜ್ಯದೊಳಗಿನ ಪ್ರಕರಣಗಳನ್ನು ಆಲಿಸುವ ಕೋರ್ಟ್ ಹೈಕೋರ್ಟ್ ಆಗಿರುತ್ತದೆ. ii. ಎಲ್ಲಾ ನ್ಯಾಯಾಲಯಗಳು ಸುಪ್ರೀಂ ಕೋರ್ಟಿನ ನಿರ್ಧಾರವನ್ನು ಸ್ವೀಕರಿಸುತ್ತವೆ. iii. ಸುಪ್ರೀಂ ಕೋರ್ಟ್ ಹೈಕೋರ್ಟಿನ ನ್ಯಾಯಾಧೀಶರನ್ನು ವರ್ಗಾಯಿಸಬಹುದು.
Answer
D. ಮೇಲಿನ ಎಲ್ಲವೂ (i, ii ಮತ್ತು iii)
28
ಸಾಂವಿಧಾನಿಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಯಾವ ಹೇಳಿಕೆಯು ಸರಿ ಆಗಿರುತ್ತದೆ ? i. 42 ನೆಯ ತಿದ್ದುಪಡಿಯು ಕಿರು ಸಂವಿಧಾನವೆಂದು ಪರಿಚಿತವಾಗಿದೆ. ii. 44 ನೆಯ ತಿದ್ದುಪಡಿಯು ಶಿಕ್ಷಣವನ್ನು ಒಂದು ಮೂಲಭೂತ ಹಕ್ಕಾಗಿ ಮಾಡಿತು. iii. 45 ನೆಯ ತಿದ್ದುಪಡಿಯು ಮೀಸಲಾತಿಯನ್ನು 10 ವರ್ಷಗಳವರೆಗೆ ವಿಸ್ತರಿಸಿತು.
Answer
A. (i ಮತ್ತು iii) ಮಾತ್ರ
29
ಕೇರಳದ ಮಂತ್ರಿಗಳು ಮತ್ತು ಅವರ ವಿಭಾಗಗಳ ಬಗ್ಗೆ ಯಾವ ಹೇಳಿಕೆಯು ಸರಿಯಾಗಿದೆ ? i. ವಿ. ಶಿವನ್ ಕುಟ್ಟಿಯವರು ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾರೆ. ii. ಆಂತೋನಿ ರಾಜು ಇವರು ಸಾರಿಗೆ ಸಚಿವರಾಗಿರುತ್ತಾರೆ. iii. ಎ. ಕೆ. ಶಶೀಂದ್ರನ್ ಅರಣ್ಯ ಸಚಿವರಾಗಿದ್ದಾರೆ.
Answer
B. (ii ಮತ್ತು iii) ಮಾತ್ರ
30
ಕೇರಳ ಆಡಳಿತಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು ? i. ಚಿತ್ತಾಯಂ ಗೋಪಕುಮಾರ್ ಇವರು ಪ್ರಸ್ತುತ ಉಪ-ಸಭಾಧ್ಯಕ್ಷರಾಗಿರುತ್ತಾರೆ. ii. ಪ್ರಸ್ತುತ 21 ಸದಸ್ಯ ಮಂತ್ರಿಮಂಡಲವಿದೆ. iii. ಸಭಾಧ್ಯಕ್ಷ ಎ. ಎನ್. ಶಂಸೀರ್ ಇವರ ಮತಕ್ಷೇತ್ರವು ತಲಶೇರಿ ಆಗಿರುತ್ತದೆ.
Answer
A. ಮೇಲಿನ ಎಲ್ಲವೂ (i, ii ಮತ್ತು iii)
31
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ? i. ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಉತ್ತರ ಪ್ರದೇಶದವರಾಗಿದ್ದಾರೆ. ii. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. iii. ಎಂ. ಎನ್‌ಸೆಂಟ್ ಕೊವಲಂ ಮತಕ್ಷೇತ್ರದಿಂದ ಚುನಾಯಿಸಲ್ಪಟ್ಟರು.
Answer
D. ಮೇಲಿನ ಎಲ್ಲವೂ (i, ii ಮತ್ತು iii)
32
ಮಾನವ ಹೃದಯಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಯು ದಿಟವಾಗಿದೆ ?
Answer
A. ಮೇಲಿನ ಎರಡು ಗೋಡುಗಳಲ್ಲಿ ಒಂದನ್ನು ಎಡ ಹೃತ್ಕರ್ಣವೆಂದೂ, ಮತ್ತೊಂದನ್ನು ಬಲ ಹೃತ್ಕರ್ಣವೆಂದೂ ಕರೆಯಲಾಗುತ್ತದೆ ಮತ್ತು ಕೆಳಗಿನ ಎರಡು ಗೋಡುಗಳನ್ನು ಎಡ ಕುಹರ ಮತ್ತು ಬಲ ಕುಹರವೆಂದೂ ಕರೆಯಲಾಗುತ್ತದೆ
33
‘ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಬೇಡಿ’ ಎಂಬ ಸಂದೇಶವು ಇದಕ್ಕೆ ಸಂಬಂಧಿಸಿದ್ದಾಗಿರುತ್ತದೆ
Answer
B. ವಿಶ್ವ ಲಕ್ವ (ಸ್ಟ್ರೋಕ್) ದಿನ 2021 ರ ಸಂದೇಶ
34
ಕೆಳಗಿನವುಗಳಲ್ಲಿ ವೈರಲ್ ರೋಗ ಯಾವುದು ?
Answer
D. ಶೀತ
35
2021 ರಲ್ಲಿ ಔಷಧದಲ್ಲಿ ನೋಬೆಲ್ ಬಹುಮಾನವನ್ನು ಯಾವುದಕ್ಕೆ ನೀಡುತ್ತಾರೆ ?
Answer
B. ಶಾಖ, ಸ್ಪರ್ಶ ಮತ್ತು ನೋವಿನ ಗ್ರಹಿಕೆಗೆ ಸಂಬಂಧಿಸಿದಂತೆ ನರಮಂಡಲದ ಗ್ರಾಹಕಗಳ ಅಧ್ಯಯನಕ್ಕಾಗಿ
36
ಯಾವ ವಿಟಮಿನ್ ಥೈಯಮೀನ್ ಎಂದು ಪರಿಚಿತವಾಗಿದೆ ?
Answer
D. ವಿಟಮಿನ್ B₁
37
ಯುಟ್ರೋಫಿಕೇಶನ್ ಎಂದರೇನು ?
Answer
A. ಜಲಮೂಲಗಳಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ
38
ಸ್ಥಿರ ಘರ್ಷಣೆಯು ವಸ್ತುವೊಂದನ್ನು ನಿಶ್ಚಲವಾಗಿ ಹಿಡಿದುಕೊಳ್ಳುವ ಶಕ್ತಿಯಾಗಿರುತ್ತದೆ. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ ? i. ಚಲನಶೀಲ ಘರ್ಷಣೆಯು ಸಂಪರ್ಕದಲ್ಲಿರುವ ಮೇಲ್ಮೈಗಳ ಸಮತಲತೆಯನ್ನು ಅವಲಂಬಿಸಿರುತ್ತದೆ. ಆದರೆ ಸ್ಥಿರ ಘರ್ಷಣೆಯು ಅವಲಂಬಿಸುವುದಿಲ್ಲ. ii. ಚಲನಶೀಲ ಘರ್ಷಣೆಯು ಸಂಪರ್ಕದಲ್ಲಿರುವ ಮೇಲ್ಮೈಗಳ ಮೇಲ್ಮೈ ವಿಸ್ತೀರ್ಣವನ್ನು ಅವಲಂಬಿಸಿರುವುದಿಲ್ಲ. ಆದರೆ ಸ್ಥಿರ ಘರ್ಷಣೆಯು ಇದನ್ನು ಅವಲಂಬಿಸುತ್ತದೆ. iii. ಚಲನಶೀಲ ಮತ್ತು ಸ್ಥಿರ ಎರಡೂ ಘರ್ಷಣೆಗಳು ಸಂಪರ್ಕದಲ್ಲಿರುವ ಮೇಲ್ಮೈಗಳ ಮೇಲ್ಮೈ ಪ್ರದೇಶವನ್ನು ಅವಲಂಬಿಸುತ್ತವೆ. iv. ಚಲನಶೀಲ ಮತ್ತು ಸ್ಥಿರ ಎರಡೂ ಘರ್ಷಣೆಗಳು ಸಂಪರ್ಕದಲ್ಲಿರುವ ಮೇಲ್ಮೈಗಳ ಮೇಲ್ಮೈ ಪ್ರದೇಶವನ್ನು ಅವಲಂಬಿಸುವುದಿಲ್ಲ.
Answer
A. (iv)
39
ಗುರುತ್ವಾಕರ್ಷಣೆಯ ಬಗೆಗಿನ ಸರಿಯಾದ ಹೇಳಿಕೆಯನ್ನು ಆರಿಸಿ. i. ಗುರುತ್ವಾಕರ್ಷಣೆಯು ಎತ್ತರದೊಂದಿಗೆ ಹೆಚ್ಚಾಗುತ್ತದೆ. ii. ಗುರುತ್ವಾಕರ್ಷಣೆಯು ಎತ್ತರದೊಂದಿಗೆ ಕಡಿಮೆಯಾಗುತ್ತದೆ. iii. ಗುರುತ್ವಾಕರ್ಷಣೆಯು ಆಳದೊಂದಿಗೆ ಹೆಚ್ಚಾಗುತ್ತದೆ. iv. ಗುರುತ್ವಾಕರ್ಷಣೆಯು ಆಳದೊಂದಿಗೆ ಕಡಿಮೆಯಾಗುತ್ತದೆ.
Answer
C. (ii, iv)
40
ಯಾವ ಹೇಳಿಕೆಯು ಬೆಳಕಿನ ಪ್ರಭಾವದೊಂದಿಗೆ ಹೊಂದಿಕೆಯಾಗುವುದಿಲ್ಲ ? i. ಲೋಹವೊಂದರ ಮೇಲ್ಮೈಗೆ ತಾಕುವ ಫೋಟೋನ್‌ಗಳ ಶಕ್ತಿಯು ತರಂಗಾಂತರದ ತೀವ್ರತೆಗೆ ಅನುಗುಣವಾಗಿದೆ. ii. ಲೋಹವೊಂದರ ಮೇಲ್ಮೈಯ ಬೆಳಕಿನ ಸಂಗತಿಯ ತೀವ್ರತೆಯು ಫೋಟೋನ್‌ಗಳ ಸಂಖ್ಯೆಯನ್ನು ಅವಲಂಬಿಸುತ್ತದೆ. iii. ಪ್ರಕಾಶಮಾನತೆ ಹರಿವು ಬೆಳಕಿನ ತೀವ್ರತೆಯ ನೇರ ಅನುಪಾತದಲ್ಲಿರುತ್ತದೆ. iv. ಫೋಟೋಇಲೆಕ್ಟ್ರಾನ್‌ಗಳ ಚಲನಶೀಲ ಶಕ್ತಿಯು ಬೆಳಕಿನ ತೀವ್ರತೆಯ ವಿಲೋಮ ಅನುಪಾತದಲ್ಲಿದೆ.
Answer
C. (iv)
41
2022 ರಲ್ಲಿ ಭೌತಶಾಸ್ತ್ರದ ಯಾವ ವಿಭಾಗವು ನೋಬೆಲ್‌ ಬಹುಮಾನವನ್ನು ಜಯಿಸಿತು ?
Answer
A. ಕ್ವಾಂಟಂ ಮೆಕ್ಯಾನಿಕ್ಸ್‌
42
ಸ್ಥಾಣುವು ಯಾವ ಅಂಶದ ಗಾಢ ರೂಪಾಂತರದ ಹೊಳಪಿನಿಂದಾಗಿ ಪ್ರೇತಭಾವ ಎಂದು ತಪ್ಪಾಗಿ ಪರಿಭಾವಿಸಲ್ಪಡಬಹುದು ?
Answer
B. ಫಾಸ್ಫೊರಸ್‌ (ರಂಜಕ)
43
ಲೂಯಿಸ್‌ ನಿಯಮದ ಪ್ರಕಾರ, ಆಮ್ಲವು
Answer
D. BF₃
44
ಪಳೆಯುಳಿಕೆ ಇಂಧನಗಳಿಗೆ ಬದಲಿಯಾಗಿ ಇತ್ತೀಚಿಗೆ ಬಳಸಲ್ಪಡುತ್ತಿರುವ ಜೈವಿಕ ಇಂಧನಗಳು ಇವನ್ನು ಅಧಿಕವಾಗಿ ಹೊಂದಿವೆ
Answer
B. ಎಥೆನಾಲ್‌
45
ಆಧುನಿಕ ಸಿದ್ಧಾಂತದ ಪ್ರಕಾರ ಇಲೆಕ್ಟ್ರಾನ್‌ಗಳು ಹೆಚ್ಚು ಸಂಭವನೀಯವಾಗಿ ಕಂಡುಬರುವ ನ್ಯೂಕ್ಲಿಯಸ್‌ ಸುತ್ತಲ ಪ್ರದೇಶಗಳು ಹೀಗೆಂದು ಪರಿಚಿತವಾಗಿವೆ
Answer
B. ಆರ್ಬಿಟಲ್‌
46
ಕೆಳಗಿನ ಕವಿಗಳಲ್ಲಿ ಯಾರೆಲ್ಲ ಜ್ಞಾನಪೀಠ ಪ್ರಶಸ್ತಿಯನ್ನು ಜಯಿಸಿರುತ್ತಾರೆ ? 1. ಜಿ. ಶಂಕರಕುರುಪ್‌ 2. ವೈಲೊಪಿಲ್ಲಿ ಶ್ರೀಧರ ಮೆನನ್‌ 3. ಒ. ಎನ್‌. ವಿ. ಕುರುಪ್‌ 4. ಅಕ್ಕಿತ್ತಂ ಅಚ್ಯುತನ್‌ ನಂಬೂದಿರಿ
Answer
C. 1, 3, 4 ಸರಿ
47
‘ಜಾತಿ ಚೋದಿಕುನ್ನಿಲ್ಲಂ ನಾನ್‌ ಸೋದರಿ– ಚೋದಿಕುನ್ನು ನೀರ್‌ ನಾವು ವರಂಡಹೋ ಭೀತಿ ವೇಂಡ ತರಿಗದೆನಿಕ್ಕುನಿ’ ಈ ರೀತಿ ಯಾರು ಕುಡಿಯುವ ನೀರನ್ನು ಕೇಳಿದ್ದಾರೆ ?
Answer
B. ಆನಂದನ್‌ – ಮಾತಂಗಿಗೆ
48
ಕೆಳಗಿನವುಗಳು ಮಲಯಾಳ ಸಣ್ಣಕತೆಗಳು ಮತ್ತು ಅವುಗಳ ಚಲನಚಿತ್ರ ರೂಪಾಂತರಗಳು. ಸರಿಯಾದುದನ್ನು ಕಂಡುಹಿಡಿಯಿರಿ. 1. ಪಲ್ಲಿವಾಲುಂ ಕಾಲ್ಚಿಲಂಬಂ – ನಿರ್ಮಾಲ್ಯಂ 2. ಭಾಸ್ಕರ ಪಟ್ಟೇಲರುಂ ಎಂಟೆ ಜೀವಿತವುಂ – ವಿಧೇಯನ್‌ 3. ನೀಲವೆಲಿಚ್ಚಂ – ಭಾರ್ಗವಿ ನಿಲಯಂ 4. ವಿವಾಹಂ – ಪರಿಣಯಂ
Answer
A. 1, 2, 3 ದಿಟವಾಗಿದೆ
49
ಸೈಬರ್‌ ಜಗತ್ತಿನ ವಿಷಯದ ಮೇಲೆ ‘ನೃತ್ಯಂ’ ಕಾದಂಬರಿಯನ್ನು ಬರೆದವರು ಯಾರು ?
Answer
C. ಎಂ. ಮುಕುಂದನ್‌
50
ಮಲಯಾಳಂ ಲೇಖಕ ಮತ್ತು ಸಂಶೋಧಕನೂ ಆದ ವೆಲ್ಲಾಯಣಿ ಅರ್ಜುನನ್‌ ಇವರ ಬಗ್ಗೆ ಸರಿಯಾದ ಹೇಳಿಕೆಗಳು ಯಾವುವು ? 1. ಸರ್ವವಿಜ್ಞಾನ ಕೋಶಂ ನಿರ್ದೇಶಕ. 2. ಇವರು 2008ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. 3. ಮೂರು ಡಿ-ಲಿಟ್‌ ಪದವಿಗಳನ್ನು ಹೊಂದಿರುವ ಪ್ರಥಮ ದಕ್ಷಿಣ ಭಾರತೀಯ. 4. ಸಾಕ್ಷರತಾ ಮಿಶನ್‌ ನಿರ್ದೇಶಕ.
Answer
C. 1, 3, 4 ಸರಿಯಾಗಿದೆ
51
1 ನ್ನು ಪಡೆಯಲು 3/12ಕ್ಕೆ ಎಷ್ಟನ್ನು ಕೂಡಿಸಬೇಕು ?
Answer
B. 3/4
52
630 ಮೀ. ಉದ್ದದ ಉಗಿಬಂಡಿಯೊಂದು 9 ಗಂಟೆಗಳಲ್ಲಿ 810 ಕಿ.ಮೀ. ಕ್ರಮಿಸಿದಲ್ಲಿ ಉಗಿಬಂಡಿಯ ಸರಾಸರಿ ವೇಗವೆಷ್ಟು ?
Answer
A. 90 ಕಿ. ಮೀ. ಪ್ರತಿ ಗಂಟೆಗೆ
53
ವ್ಯಕ್ತಿಯೋರ್ವನು ಪೂರ್ವಮುಖವಾಗಿ 13 ಮೀ. ನಡೆದು, ಎಡಕ್ಕೆ ತಿರುಗಿ 11 ಮೀ. ನಡೆಯುತ್ತಾನೆ. ಆತ ಮತ್ತೆ ಎಡಕ್ಕೆ ತಿರುಗಿ 5 ಮೀ. ನಡೆಯುತ್ತಾನೆ. ಆತ ಮತ್ತೊಮ್ಮೆ ಎಡಕ್ಕೆ ತಿರುಗಿ 5 ಮೀ. ನಡೆಯುತ್ತಾನೆಯಾದರೆ, ಅವನು ಪ್ರಾರಂಭಿಸಿದ ಬಿಂದುವಿನಿಂದ ಈಗಿರುವ ಸ್ಥಳಕ್ಕೆ ದೂರ ಎಷ್ಟಾಗುತ್ತದೆ ?
Answer
A. 10
54
ಭಿನ್ನರಾಶಿ ಸಂಖ್ಯೆಯೊಂದರ 1/8 ರ ಭಾಗ 4 ಆದರೆ, ಭಿನ್ನ ರಾಶಿ ಸಂಖ್ಯೆ ಎಷ್ಟು ?
Answer
Question Cancelled
55
ತೋಟವೊಂದರಲ್ಲಿ3249 ತೆಂಗಿನ ಮರಗಳು ಸಮಾನ ದೂರಗಳಲ್ಲಿ ನೇರ ಮತ್ತು ಅಡ್ಡಕ್ಕೆ ಸಾಲುಗಳಲ್ಲಿ ನಿಂತಿರುತ್ತವೆ. ಹೀಗಿದ್ದಲ್ಲಿ ಸಾಲೊಂದರಲ್ಲಿ ಇರುವ ತೆಂಗಿನ ಮರಗಳ ಸಂಖ್ಯೆ ಎಷ್ಟು?
Answer
C. 57
56
ಸಂಖ್ಯೆಯೊಂದರ 4 ಮತ್ತು 6 ಬಾರಿಗಳ ಮೊತ್ತ 100 ಆಗಿರುತ್ತದೆ. ಹಾಗಾದರೆ ಈ ಸಂಖ್ಯೆಯ 3 ಗುಣ ಎಂದರೆ ಎಷ್ಟಾಗುತ್ತದೆ ?
Answer
C. 30
57
ಆಗಸ್ಟ್‌ 1 ಮಂಗಳವಾರವಾದಲ್ಲಿ, ನವೆಂಬರ್‌ 30 ಯಾವ ದಿನವಾಗುತ್ತದೆ ?
Answer
D. ಗುರುವಾರ
58
ಸರಳ ಬಡ್ಡಿಯಲ್ಲಿ 587/- ರೂ. ಮೊತ್ತವನ್ನು ಬ್ಯಾಂಕಿಗೆ ಠೇವಣಿಸಲಾಯಿತು. 5 ವರ್ಷಗಳ ಅನಂತರ ಮೂಲ ಹೂಡಿಕೆ ಮತ್ತು ಬಡ್ಡಿ ಸಮಾನವಾಗುತ್ತದೆ. ಹಾಗಾದರೆ, ರೂ. 100/- ಹೂಡಿಕೆಗೆ ಒಂದು ವರ್ಷಕ್ಕೆ ಎಷ್ಟು ಬಡ್ಡಿಯಾಗುತ್ತದೆ ?
Answer
C. 20
59
126 ವಿದ್ಯಾರ್ಥಿನಿಯರು ಅಭ್ಯಸಿಸುತ್ತಿರುವ ಶಾಲೆಯೊಂದರಲ್ಲಿ ಹುಡುಗಿಯರ ಮತ್ತು ಹುಡುಗರ ನಡುವಿನ ಅನುಪಾತವು 3 : 5 ಆಗಿದೆ. ಹುಡುಗರ ಸಂಖ್ಯೆಯು ಹುಡುಗಿಯರ ಸಂಖ್ಯೆಗಿಂತ ಎಷ್ಟು ಹೆಚ್ಚಿರುತ್ತದೆ ?
Answer
B. 84
60
(75³ − 25³)/(75² + 75 × 25 + 25²) =
Answer
D. 50
61
“Where did you go yesterday ?” the policeman told the boy. (Choose the correct sentence in reported speech)
Answer
C. The policeman asked the boy where he had gone the previous day
62
The athlete _ on the ground and cried for help.
Answer
A. lay
63
Find the wrongly spelt word.
Answer
D. onomatopoea
64
The idiom “On the trot” means
Answer
B. consecutively
65
The word Catoptrophobia means
Answer
A. the fear of mirrors
66
Balu’s written the book,
Answer
B. hasn’t he ?
67
The meaning of the phrase “CARTE BLANCHE” is
Answer
D. the complete freedom to act as one thinks best
68
The antonym of the word “REDUNDANT” is
Answer
C. necessary
69
Choose the correct sentence.
Answer
A. I had left home before he came
70
The officer went __________ the report many times and approved it.
Answer
B. over
71
ಚಿತ್ರಕಲೆ ಅಥವಾ ನಾಟ್ಯದಲ್ಲಿ ಬಣ್ಣ ಬಳಿಯುವಿಕೆ - ಎನ್ನುವ ಅರ್ಥವನ್ನು ಕೊಡುವ ಪದ ಯಾವುದು ?
Answer
B. ವರ್ಣಿಕೆ
72
ಬಣ್ಣ ಬಯಲಿಗೆ ಬರು - ಈ ನುಡಿಗಟ್ಟಿನ ಅರ್ಥವೇನು ?
Answer
A. ರಹಸ್ಯ ಬಯಲಾಗು
73
ಊರಿನ ಜಾತ್ರಾಸಂಭ್ರಮದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲ ಹತ್ತೂರಿನ ಜನ ಬಂದು ನೆರೆದಿದ್ದರು - ಈ ವಾಕ್ಯದಲ್ಲಿರುವ ಸಂಖ್ಯಾವಾಚಕ ಪದ ಯಾವುದು ?
Answer
D. ಹತ್ತೂರಿನ
74
ಕೆಳಗೆ ಕೊಟ್ಟಿರುವ ಪದಗಳಿಂದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ.
Answer
A. ವಾಚಾಮಗೋಚರ
75
ಗಣಿತದ ಪ್ರಶ್ನೆಯನ್ನು ಅಧ್ಯಾಪಕರು ನೀಡಿದ ಕೂಡಲೇ ಆ ಜಾಣೆ ಅದರ ಉತ್ತರ ಬರೆದಳು – ಈ ವಾಕ್ಯದಲ್ಲಿ ಸ್ತ್ರೀಲಿಂಗವನ್ನು ಸೂಚಿಸುವ ಗುಣವಾಚಕ ಪದ ಯಾವುದು ?
Answer
C. ಜಾಣೆ
76
ಸಫಲ – ಈ ಪದದ ವಿರೋಧಾರ್ಥ ಪದ ಯಾವುದು ?
Answer
D. ವಿಫಲ
77
ವಿದ್ಯ + ಅಭ್ಯಾಸ – ಈ ಎರಡು ಪದಗಳು ಸೇರಿದಾಗ ಸಿಗುವ ಸಮಸ್ತ ಪದದ ಸರಿಯಾದ ರೂಪ ಯಾವುದು ?
Answer
B. ವಿದ್ಯಾಭ್ಯಾಸ
78
‘ದಿವಾಕರ’ – ಈ ಪದದ ಪರ್ಯಾಯ ಪದ ಯಾವುದು ?
Answer
B. ಸೂರ್ಯ
79
‘burning question’ – ಇಂಗ್ಲಿಷ್‌ನ ಈ ನುಡಿಗಟ್ಟಿನ ಅರ್ಥವೇನು ?
Answer
C. ತೀವ್ರವಾಗಿ ಚರ್ಚೆ ನಡೆಯುತ್ತಿರುವ ವಿಷಯ
80
ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಸರಿಯಾದ ಪ್ರಯೋಗವನ್ನು ಆರಿಸಿ ಬರೆಯಿರಿ.
Answer
A. ನಾಯಿಯು ಬೆಕ್ಕಿನ ಮರಿಗಳೊಂದಿಗೆ ಆಟವಾಡುತ್ತಿತ್ತು
81
ಕೆಳಗಿನವುಗಳಲ್ಲಿ ಯಾವ ವಸ್ತುವು ಉತ್ಪತನದ ಉದಾಹರಣೆಯಾಗಬಹುದು ? i. ಲವಂಗ ii. ಕರ್ಪೂರ iii. ಶ್ರೀಗಂಧ iv. ಮೇಣ
Answer
B. ii ಮಾತ್ರ
82
LPG ಯ ಕೆಳ ಸ್ಟೋಟಕ ಮಿತಿ ಎಷ್ಟು?
Answer
B. 2%
83
LPG ಸೋರಿಕೆಯನ್ನು ಪತ್ತೆಹಚ್ಚಲು ವಾಸನೆಯ ಗ್ರಹಿಕೆಗೆ LPG ಗೆ ಯಾವ ರಾಸಾಯನಿಕವನ್ನು ಸೇರಿಸಲಾಗುತ್ತದೆ ?
Answer
A. ಈಥೈಲ್‌ ಮೆರ್ಕಾಪ್ಟಾನ್‌
84
BLEVE ನ ಪೂರ್ಣ ರೂಪ ಏನು ?
Answer
C. ಬಾಯ್ಲಿಂಗ್‌ ಲಿಕ್ವಿಡ್‌ ಎಕ್ಸ್‌ಪಾಂಡಿಂಗ್‌ ವೇಪರ್‌ ಎಕ್ಸ್‌ಪ್ಲೋಶನ್‌
85
ಕೆಳಗಿನವುಗಳಲ್ಲಿ ಯಾವುದು ಜಲಚಾಲಿತ ಉಪಕರಣದ ಕಾರ್ಯದ ಹಿಂದಿನ ತಾಂತ್ರಿಕತೆಗೆ ಸಂಬಂಧಿಸಿರುತ್ತದೆ ?
Answer
D. ಪಾಸ್ಕಲ್‌ನ ನಿಯಮ
86
__ ಎಂಬುದು ಅಪಾಯಕಾರಿ ಸರಕುಗಳ ಸಾಗಾಣಿಕೆಗೆ ಬಳಸಲಾಗುವ ವಾಹನಗಳಲ್ಲಿ ಅಪಘಾತದ ಸಂದರ್ಭದಲ್ಲಿಸಾಗಿಸಲಾದ ಸರಕುಗಳ ವಿವರಗಳನ್ನು ದಾಖಲಿಸುವ ದಾಖಲೆಯಾಗಿದೆ.
Answer
A. ಟ್ರೆಮ್‌ ಕಾರ್ಡ್‌
87
ನೀರಿನ ಆವಿಯಾಗುವಿಕೆಯ ಸುಪ್ತ ಶಾಖ ಯಾವುದು ?
Answer
C. 540 Kcal/Kg
88
ವಿಸರ್ಜಕ ಹಾರ್ನ್‌ ಯಾವ ವಿಧದ ಅಗ್ನಿಶಾಮಕ ಉಪಕರಣದ ಒಂದು ಭಾಗವಾಗಿದೆ ? i. DCP ಎಕ್ಸ್‌ಟಿಂಗಿಶರ್‌ ii. ಕಾರ್ಬನ್‌ ಡೈ ಆಕ್ಸೈಡ್‌ ಎಕ್ಸ್‌ಟಿಂಗಿಶರ್‌ iii. ಫೋಮ್‌ ಎಕ್ಸ್‌ಟಿಂಗಿಶರ್‌ iv. ವಾಟರ್‌ ಟೈಪ್‌ ಎಕ್ಸ್‌ಟಿಂಗಿಶರ್‌
Answer
A. ii ಮಾತ್ರ
89
ಸೀಮೆಎಣ್ಣೆಯ ಉರಿಬಿಂದು ಯಾವುದು ?
Answer
D. 38 ಡಿಗ್ರಿ ಸೆಲ್ಸಿಯಸ್‌
90
ರಕ್ತ ಹೆಪ್ಪುಗಟ್ಟುವಿಕೆಗೆ ನೆರವಾಗುವ (ಕಾರಣವಾಗುವ) ವಿಟಮಿನ್‌ ಯಾವುದು ?
Answer
C. ವಿಟಮಿನ್‌ K
91
ಪ್ರಥಮ ಚಿಕಿತ್ಸೆಯಲ್ಲಿ CPR ಎಂಬುದು ಯಾವುದನ್ನು ಸೂಚಿಸುತ್ತದೆ ?
Answer
B. ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್‌
92
ಈ ಕೆಳಗಿನವುಗಳಲ್ಲಿ ತುರ್ತು ಹಾರ್ಮೋನ್‌ ಯಾವುದು ?
Answer
A. ಅಡ್ರಿನಾಲಿನ್‌
93
ಕೆಳಗಿನವುಗಳಲ್ಲಿ ಯಾವುದು ರಕ್ತದಲ್ಲಿ ಆಮ್ಲಜನಕದ ವಾಹಕಗಳಾಗಿವೆ ?
Answer
C. ಹಿಮೋಗ್ಲೋಬಿನ್‌
94
ಪ್ರಥಮ ಚಿಕಿತ್ಸೆಯಲ್ಲಿ ಭಾರಿ ರಕ್ತಸ್ರಾವವನ್ನು ನಿಯಂತ್ರಿಸಲು ಯಾವ ವಿಧಾನವನ್ನು ಅಳವಡಿಸಿಕೊಳ್ಳಬಹುದು ?
Answer
B. ಸಂಬಂಧಿಸಿದ ಒತ್ತಡ ಬಿಂದುಗಳಿಗೆ (ಭಾಗಗಳಿಗೆ) ಸತತ ಒತ್ತಡವನ್ನು ಹಾಕುವುದು
95
ಕೆಳಗಿನವುಗಳಲ್ಲಿ ಯಾವುದು ಉಸಿರಾಟಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ ?
Answer
D. ಕಾರ್ಬನ್‌ ಮೊನಾಕ್ಸೈಡ್‌
96
ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜವಲ್ಲ ? i. ಸುಟ್ಟ ಜಾಗದ ಮೇಲಿನ ಗುಳ್ಳೆಗಳನ್ನು ಚುಚ್ಚಬೇಡಿ. ii. ಸುಟ್ಟ ಜಾಗದ ಮೇಲೆ ಅಂಟಿಕೊಂಡಿರುವ ಬಟ್ಟೆ ತುಂಡನ್ನು ತೆಗೆಯಬೇಡಿ. iii. ಲಭ್ಯವಿರುವ ಬಟ್ಟೆಯಿಂದ ಸುಟ್ಟ ಭಾಗವನ್ನು ಬ್ಯಾಂಡೇಜ್‌ ಮಾಡಬೇಕು.
Answer
B. iii
97
ಒಬ್ಬ ಪ್ರಥಮ ಚಿಕಿತ್ಸಕ ಈ ಕೆಳಗಿನವುಗಳಲ್ಲಿ ಯಾವುದನ್ನು ಮಾಡಬಾರದು ? i. ಪ್ರಥಮ ಚಿಕಿತ್ಸೆಗೆ ಆದ್ಯತೆಯನ್ನು ನೀಡಬೇಕು. ii. ನಿಮ್ಮ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು. iii. ಕೂಡಲೇ ವೈದ್ಯಕೀಯ ಜಾಗರೂಕತೆಯನ್ನು ಅನುಸರಿಸಬೇಕು. iv. ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕು.
Answer
A. iv
98
ಅಸ್ಥಿಭಂಗಗಳೊಂದಿಗೆ ಅಸ್ಥಿ ಮಾಂಸಪೇಶಿಗಳು ಚರ್ಮ ಭೇದಿಸಿ ಹೊರಗೆ ಬರುವುದು
Answer
D. ವಿಷಮ ಮುರಿತ
99
ಮಾಹಿತಿ ತಂತ್ರಜ್ಞಾನ ಕಾಯಿದೆಯ ಯಾವ ವಿಭಾಗವು ಸೈಬರ್‌ ಭಯೋತ್ಪಾದನೆಗೆ ಸಂಬಂಧಿಸಿದೆ ?
Answer
C. ಸೆಕ್ಷನ್‌ 66ಎಫ್‌
100
ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಯಾವ ಸೆಕ್ಷನ್‌ ಕಂಪ್ಯೂಟರ್‌ ಸಂಪನ್ಮೂಲಗಳನ್ನು ಬಳಸಿ ಕಪಟವೇಷಧಾರಣೆ ಮೂಲಕ ವಂಚಿಸುವುದಕ್ಕೆ ನೀಡಲಾಗುವ ಶಿಕ್ಷೆಯೊಂದಿಗೆ ವ್ಯವಹರಿಸುತ್ತದೆ ?
Answer
A. ಸೆಕ್ಷನ್‌ 66ಡಿ

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.