Skip to content
10th Level - Practice App Completely Free · 100K+ Users Install

Kerala PSC LGS- Various- Pathanamthitta, Idukki, Malappuram, Kannur 535/2023 Previous Question Paper – 165/2024

Practice Mode

Sit all 89 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameLGS- Various- Pathanamthitta, Idukki, Malappuram, Kannur 535/2023
Question Paper Code165/2024
Category Code535/2023
Date of Test23 November 2024
Medium of QuestionKANNADA
Exam TypeOMR Examination
Total Questions100
1
“ಹತ್ತಿ ನೇಯುವವರ ಮೂಳೆಗಳು ಭಾರತೀಯ ಬಯಲು ಪ್ರದೇಶವನ್ನು ಬಿಳುಪುಗೊಳಿಸುತ್ತವೆ”. ಇದು ಯಾರ ಹೇಳಿಕೆ?
Answer
C. ಲಾರ್ಡ್ ವಿಲಿಯಂ ಬೆಂಟಿಂಕ್
2
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? I. ನಾನಾ ಸಾಹೇಬ್ ಮತ್ತು ತಾಂತ್ಯ ಟೋಪೆ ಅವರು ಕಾನ್ಪುರವನ್ನು ಕೇಂದ್ರವಾಗಿಟ್ಟುಕೊಂಡು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ನಾಯಕರು. II. ಬೇಗಂ ಹಜರತ್ ಮಹಲ್‌ರವರು ಫೈಜಾಬಾದ್‌ನ ಸ್ವಾತಂತ್ರ್ಯ ಹೋರಾಟದ ನಾಯಕಿ. III. ಮೌಲ್ವಿ ಅಹಮದುಲ್ಲಾ ಅವರು ಲಕ್ನೋವನ್ನು ನೆಲೆಯಾಗಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ನಾಯಕರಾಗಿದ್ದರು.
Answer
B. I ಮಾತ್ರ ಸರಿಯಾಗಿದೆ
3
ದಾದಾಭಾಯಿ ನವರೋಜಿ ಅವರು ತಮ್ಮ ‘ಡ್ರೈನ್’ ಸಿದ್ಧಾಂತವನ್ನು ಯಾವ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದಾರೆ?
Answer
D. ಪಾವರ್ಟಿ ಅಂಡ್ ಅನ್-ಬ್ರಿಟಿಷ್ ರೂಲ್ ಇನ್ ಇಂಡಿಯಾ
4
ಭಾರತದಲ್ಲಿ ಮುಸ್ಲಿಮರ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಲಾದ ಸಂಸ್ಥೆ
Answer
C. ಅಲಿಘರ್ ಚಳವಳಿ
5
ರಾಜಾರಾಂ ಮೋಹನ್ ರಾಯ್ ಆರಂಭಿಸಿದ ಪತ್ರಿಕೆಗಳು I. ಅಮೃತ ಬಜಾರ್ ಪತ್ರಿಕಾ II. ಸ್ವದೇಶಿ ಚಿತ್ರ III. ಮಿರಾತ್-ಉಲ್-ಅಖ್ಬರ್ IV. ಸಂವಾದ ಕೌಮುದಿ
Answer
B. III, IV ಸರಿಯಾಗಿವೆ
6
‘ಕೇರಳದ ರಾಜಾರಾಮ್ ಮೋಹನ್‌ರಾಯ್’ ಎಂದು ರವೀಂದ್ರನಾಥ್ ಟಾಗೋರ್ ಯಾರನ್ನು ವರ್ಣಿಸಿದರು?
Answer
A. ಡಾ. ಅಯ್ಯತ್ತನ್ ಗೋಪಾಲನ್
7
1821 ರಲ್ಲಿ ರಾಮನ್ ನಂಬಿ ನೇತೃತ್ವದ ಕುರಿಚ್ಚ ದಂಗೆಗೆ ಕಾರಣ I. ಬ್ರಿಟಿಷರು ವಿಪರೀತ ತೆರಿಗೆಗಳನ್ನು ವಿಧಿಸಿದರು. II. ನಗದು ರೂಪದಲ್ಲಿ ತೆರಿಗೆ ಪಾವತಿಸಲು ಒತ್ತಾಯಿಸಿದರು. III. ತೆರಿಗೆ ಕಟ್ಟಲಾಗದವರ ಕೃಷಿ ಭೂಮಿಯನ್ನು ಬ್ರಿಟಿಷರು ವಶಪಡಿಸಿಕೊಂಡರು.
Answer
Question Cancelled
8
ಗಾಂಧೀಜಿಯವರ ಕೇರಳ ಭೇಟಿಯೊಂದಿಗೆ ನಂಟು ಹೊಂದಿರುವ ‘ಶಬರಿ ಆಶ್ರಮ’ ಇರುವ ಜಿಲ್ಲೆ
Answer
C. ಪಾಲಕ್ಕಾಡ್
9
ಇ.ವಿ. ರಾಮಸ್ವಾಮಿ ನಾಯ್ಕರ್ ಅವರಿಗೆ ಸಂಬಂಧಿಸಿದ ಸತ್ಯಾಗ್ರಹ
Answer
A. ವೈಕೋಮ್ ಸತ್ಯಾಗ್ರಹ
10
ಕೇರಳದ ಮೊದಲ ರಾಜವಂಶದ ‘ಮೂಷಿಕ ಕುಲ’ ಎಲ್ಲಿ ಆಳ್ವಿಕೆ ನಡೆಸಿತು?
Answer
Question Cancelled
11
ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಭಾರತೀಯ ಮಹಿಳೆ
Answer
Question Cancelled
12
ಯಾವ ದೇಶವು 2024 ರಲ್ಲಿ G7 ಶೃಂಗಸಭೆಯನ್ನು ಆಯೋಜಿಸಿತು?
Answer
A. ಇಟಲಿ
13
ಭಾರತದ ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳಿಂದ ಅನಂತರ ತೆಗೆದುಹಾಕಲಾದ ಹಕ್ಕು
Answer
A. ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು
14
ಭಾರತೀಯ ಸಂವಿಧಾನದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸುವ ವಿಧಿ
Answer
D. ವಿಧಿ 24
15
ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳ ನಿರಾಕರಣೆಯ ಸಂದರ್ಭದಲ್ಲಿ ಸಂಪರ್ಕಿಸಬಹುದಾದ ನ್ಯಾಯಾಲಯ I. ಸುಪ್ರೀಂ ಕೋರ್ಟ್ II. ಹೈಕೋರ್ಟ್ III. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಎರಡೂ IV. ಮುನ್ಸಿಫ್ ಕೋರ್ಟ್
Answer
C. III ಸರಿ
16
ಭಾರತದ ಸಂವಿಧಾನದ ಪೀಠಿಕೆಯನ್ನು ಬರೆದವರು ಯಾರು?
Answer
B. ಜವಾಹರಲಾಲ್ ನೆಹರು
17
ಭಾರತದ ಸಂವಿಧಾನದ ಕೊನೆಯ ತಿದ್ದುಪಡಿ
Answer
B. ಶಾಸನಸಭೆಗಳು ಮಹಿಳಾ ಮೀಸಲಾತಿಗೆ ಸಂಬಂಧಿಸಿದೆ
18
4ನೇ ಪಂಚವಾರ್ಷಿಕ ಯೋಜನೆಯ ಉದ್ದೇಶಗಳು ಯಾವುವು? i. ಸ್ಥಿರತೆಯೊಂದಿಗೆ ಬೆಳವಣಿಗೆ ii. ಬಡತನ ನಿವಾರಣೆ iii. ಸ್ವಾವಲಂಬನೆ iv. ಆಹಾರ ಸ್ವಾವಲಂಬನೆ
Answer
A. i ಮತ್ತು iii
19
ಸ್ವಾತಂತ್ರ್ಯದ ಅನಂತರ ರಾಜರ ಅಧೀನದಲ್ಲಿದ್ದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ವಿಲೀನಗೊಳಿಸಲು ಅನುಸರಿಸಿದ ವಿಧಾನಗಳು ಯಾವುವು? i. ಮಿಲಿಟರಿ ಕ್ರಮ ii. ವಿಲೀನ ಒಪ್ಪಂದ iii. ಸಮನ್ವಯ
Answer
C. i, ii ಮತ್ತು iii
20
ರಾಷ್ಟ್ರೀಯ ಶಿಕ್ಷಣ ಮಾದರಿಯ ಕುರಿತು ಡಾ॥ ಸಿ. ಎಸ್. ಕೊಠಾರಿ ಆಯೋಗವು ಈ ಕೆಳಗಿನವುಗಳಲ್ಲಿ ಯಾವುದನ್ನು ಶಿಫಾರಸು ಮಾಡಿದೆ? i. ತ್ರಿಭಾಷಾ ಯೋಜನೆ ಜಾರಿಗೊಳಿಸಬೇಕು. ii. ಶಿಕ್ಷಣವನ್ನು 10+2+3 ಮಾದರಿಯಲ್ಲಿ ಜಾರಿಗೊಳಿಸಬೇಕು. iii. ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು ರಚಿಸಬೇಕು. iv. ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು.
Answer
Question Cancelled
21
ಮಾನವರನ್ನು ಬಾಹ್ಯಾಕಾಶದಲ್ಲಿ ಇರಿಸಲು ಭಾರತದ ಅತ್ಯಂತ ಪ್ರಮುಖ ಬಾಹ್ಯಾಕಾಶ ಯೋಜನೆ
Answer
C. ಗಗನಯಾನ
22
1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆಯ ಹೆಸರೇನು?
Answer
C. ಆಪರೇಷನ್ ಸಫೇದ್ ಸಾಗರ್
23
2024 ಪ್ಯಾರಿಸ್ ಒಲಿಂಪಿಕ್ ಶೂಟಿಂಗ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳೆ ಯಾರು?
Answer
A. ಮನು ಭಾಕರ್
24
ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗವನ್ನು ಎಲ್ಲಿ ಉದ್ಘಾಟಿಸಲಾಯಿತು?
Answer
C. ಕೋಲ್ಕತ್ತಾ
25
ಭಾರತದ ಅತಿ ಎತ್ತರದ ಶಿಖರವಾದ ಮೌಂಟ್ K2 ಎಲ್ಲಿದೆ?
Answer
C. ಕಾರಕೋರಂ
26
ಕೆಂಪು ಮಣ್ಣಿಗೆ ಕೆಂಪು ಬಣ್ಣವನ್ನು ಯಾವುದು ನೀಡುತ್ತದೆ?
Answer
A. ಕಬ್ಬಿಣ
27
ಇಂದ್ರಾವತಿ ಯಾವ ನದಿಯ ಉಪನದಿ?
Answer
C. ಗೋದಾವರಿ
28
ಯಾವ ವರ್ಷದಲ್ಲಿ ಪರಂಬಿಕುಳವನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು?
Answer
A. 2003
29
ಭಾರತವು ವಿಶ್ವದ ಏಳನೇ ದೊಡ್ಡ ದೇಶವಾಗಿದೆ. ಭಾರತದ ವಿಸ್ತೀರ್ಣ ಎಷ್ಟು?
Answer
B. 3.28 ಮಿಲಿಯನ್ ಚದರ ಕಿಲೋಮೀಟರ್
30
ಭಾರತದ ಯಾವ ಪ್ರಧಾನಿಯವರ ಅವಧಿಯಲ್ಲಿ ಇದಮ್ಕಿ ಜಲವಿದ್ಯುತ್ ಯೋಜನೆ ಅಸ್ತಿತ್ವಕ್ಕೆ ಬಂದಿತು?
Answer
D. ಇಂದಿರಾ ಗಾಂಧಿ
31
53ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದಾಗ ಯಾರು ಅತ್ಯುತ್ತಮ ನಟರಾಗಿ ಆಯ್ಕೆಯಾದರು?
Answer
B. ಮಮ್ಮುಟ್ಟಿ
32
2023 ರ ಏಕದಿನ ಪಂದ್ಯಾವಳಿಯ (ODI) ವಿಶ್ವಕಪ್ ವಿಜೇತರು
Answer
B. ಆಸ್ಟ್ರೇಲಿಯಾ
33
ಕಕ್ಕಾಡ್ ನೀರಾವರಿ ಯೋಜನೆ ಯಾವ ಜಿಲ್ಲೆಯಲ್ಲಿದೆ?
Answer
A. ಪತ್ತನಂತಿಟ್ಟ
34
ಹಲಸಿನ ಹಣ್ಣನ್ನು ಕೇರಳದ ಅಧಿಕೃತ ಹಣ್ಣು ಎಂದು ಯಾವ ವರ್ಷದಲ್ಲಿ ಘೋಷಿಸಲಾಯಿತು?
Answer
C. 2018
35
ಅಖಿಲ್ ಪಿ. ಧರ್ಮಜನ್ ಬರೆದ ‘ರಾಮ್ C/o ಆನಂದಿ’ ಕಾದಂಬರಿಯಲ್ಲಿ ಯಾರು ಒಂದು ಪಾತ್ರವಾಗಿಲ್ಲ?
Answer
C. ಸುಮತಿ
36
ಆನ್‌ಲೈನ್ ಗೇಮಿಂಗ್ ಮೂಲಕ ಗಳಿಕೆಯ ಮೇಲೆ ವಿಧಿಸಲಾಗುವ ಶೇಕಡಾವಾರು ತೆರಿಗೆ ಎಷ್ಟು?
Answer
C. 30%
37
ಕೇರಳದಲ್ಲಿ ಅತಿ ಹೆಚ್ಚು ಶೇಕಡಾವಾರು ಅರಣ್ಯ ಭೂಮಿಯನ್ನು ಹೊಂದಿರುವ ಜಿಲ್ಲೆ ಯಾವುದು?
Answer
B. ವಯನಾಡ್
38
ಪತಿರಾಮನಲ್ ದ್ವೀಪ ಇರುವ ಜಿಲ್ಲೆ
Answer
B. ಆಲಪ್ಪುಳ
39
ಕೇರಳದಲ್ಲಿ ಎಷ್ಟು ಆಕಾರದ ಹಿನ್ನೀರು
Answer
B. ಶಾಸ್ತಮಕೋಟೆ
40
ಕೇರಳದಲ್ಲಿರುವ ಈ ಕೆಳಗಿನ ವನ್ಯಜೀವಿ ಅಭಯಾರಣ್ಯಗಳು ಮತ್ತು ಸಂರಕ್ಷಿತ ಜಾತಿಗಳನ್ನು ಹೊಂದಿಸಿ. a. ರೀಡ್ ಕಪ್ಪೆಗಳು b. ಗ್ರೀಜ್ಲ್ಡ್ ದೈತ್ಯ ಅಳಿಲು c. ಸಿಂಹಬಾಲದ ಕೋತಿ d. ನೀಲಗಿರಿ ತಹರ್; i. ಸೈಲೆಂಟ್ ವ್ಯಾಲಿ ii. ಎರವಿಕುಲಂ iii. ಚಿನ್ನಾರ್ iv. ಕಕ್ಕಯಂ
Answer
C. a – iv, b – iii, c – i, d – ii
41
ಕೆಳಗಿನವುಗಳಲ್ಲಿ ಯಾವುದು/ವು ಸರಿಯಾದ ಹೇಳಿಕೆ(ಗಳು)? i. ದಕ್ಷಿಣದಿಂದ ಉತ್ತರಕ್ಕೆ ಭಾರತದ ಉದ್ದ 3214 ಕಿ.ಮೀ. ii. ಭಾರತದ ಪ್ರಮಾಣಿತ ರೇಖಾಂಶವು 82½° ಪೂರ್ವ ರೇಖಾಂಶವಾಗಿದೆ. iii. ಇಂದಿರಾ ಕೊಲ್ ಭಾರತದ ಅತ್ಯಂತ ಉತ್ತರದ ತುದಿಯಾಗಿದೆ. iv. ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.
Answer
D. ಎಲ್ಲವೂ ಸರಿಯಾಗಿವೆ
42
ಭಾರತದಲ್ಲಿನ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ಕೆಳಗೆ ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಆಯ್ಕೆಮಾಡಿ. i. ದಾಮೋದರ್ ನದಿ ಜಲಾನಯನ ಯೋಜನೆಯು ಭಾರತದ ಅತಿ ದೊಡ್ಡ ಬಹುಪಯೋಗಿ ಯೋಜನೆಯಾಗಿದೆ. ii. ಹಿರಾಕುಡ್ ಭಾರತದ ಅತಿ ಉದ್ದದ ಅಣೆಕಟ್ಟು ಆಗಿದೆ. iii. ಭಾಕ್ರಾ-ನಂಗಲ್ ಸ್ವತಂತ್ರ ಭಾರತದಲ್ಲಿ ಮೊದಲ ವಿವಿಧೋದ್ದೇಶ ಯೋಜನೆಯಾಗಿದೆ. iv. ನಾಗಾರ್ಜುನ ಸಾಗರ್ ವಿಶ್ವದ ಅತಿ ದೊಡ್ಡ ಕಲ್ಲಿನ ಅಣೆಕಟ್ಟು ಆಗಿದೆ.
Answer
C. ii, iv ಮಾತ್ರ
43
ಪೆರಿಯಾರ್‌ನ ಉದ್ದ ಎಷ್ಟು ಕಿಲೋಮೀಟರ್?
Answer
Question Cancelled
44
ಭಾರತೀಯ ಸಂಸತ್ತಿನ ಭಾಗವಾಗಿರುವ ಲೋಕಸಭೆಗೆ ಸಂಬಂಧವಿಲ್ಲದ ಹೇಳಿಕೆ i. ಕೌನ್ಸಿಲ್ ಆಫ್ ಸ್ಟೇಟ್ಸ್ ಎಂದು ಕರೆಯಲಾಗುತ್ತದೆ. ii. ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗುತ್ತಾರೆ. iii. ಸದನದ ಅಧ್ಯಕ್ಷತೆಯನ್ನು ಉಪರಾಷ್ಟ್ರಪತಿಯವರು ವಹಿಸುತ್ತಾರೆ. iv. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎಂದು ಕರೆಯಲಾಗುತ್ತದೆ.
Answer
C. i, iii
45
ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ? i. ಜೀವನದ ಗುಣಮಟ್ಟದಲ್ಲಿ ಹೆಚ್ಚಳ. ii. ಗುಣಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ. iii. ಉತ್ಪಾದನೆ ಮತ್ತು ಆದಾಯದಲ್ಲಿ ಹೆಚ್ಚಳ. iv. ಆರ್ಥಿಕ ಮತ್ತು ಸಾಮಾಜಿಕ ಅಂಶಗಳ ಮೇಲೆ ಒತ್ತು.
Answer
Question Cancelled
46
ಕೆಳಗಿನವುಗಳನ್ನು ಹೊಂದಿಸಿ. ಲೇಖಕರು: 1. ವರಾಹಮಿಹಿರ 2. ಕಾಳಿದಾಸ 3. ವಿಶಾಖದತ್ತ 4. ಶೂದ್ರಕ; ಕೃತಿಗಳು: a. ವಿಕ್ರಮೋರ್ವಶೀಯಂ b. ಋತು ಜಾತಕಮ್ c. ಮೃಚ್ಛಕಟಿಕಮ್ d. ಮುದ್ರಾರಾಕ್ಷಸ
Answer
B. 1 – b, 2 – a, 3 – d, 4 – c
47
ಕೃತಕ ಉಪಗ್ರಹ ಆದಿತ್ಯ L1 ಉಡಾವಣಾ ವಾಹನ
Answer
A. PSLV-C57
48
ಸಮಾಜಶಾಸ್ತ್ರದ ಪಿತಾಮಹ ಯಾರು?
Answer
D. ಆಗಸ್ಟ್ ಕಾಮ್ಟ್
49
2022 FIFA ಪುರುಷರ ಫುಟ್ಬಾಲ್ ವಿಶ್ವಕಪ್ ವಿಜೇತ ದೇಶವು ಯಾವ ಖಂಡದಲ್ಲಿದೆ?
Answer
B. ದಕ್ಷಿಣ ಅಮೆರಿಕಾ
50
ವಿಶ್ವ ______ ದಿನ 2023ರ ಸಂದೇಶವು “ಮಣ್ಣು ಮತ್ತು ನೀರು : ಜೀವನದ ಮೂಲ” ಆಗಿದೆ.
Answer
C. ಮಣ್ಣು
51
ವಿಶ್ವ ಸಂಸ್ಥೆಯ ಪ್ರಸ್ತುತ ಪ್ರಧಾನ ಕಾರ್ಯದರ್ಶಿಯವರ ಜನ್ಮಸ್ಥಳ
Answer
D. ಪೋರ್ಚುಗಲ್
52
ಅರ್ಥಶಾಸ್ತ್ರದಲ್ಲಿ 2023 ರ ನೊಬೆಲ್ ಪ್ರಶಸ್ತಿಯನ್ನು ಗೆದ್ದವರು ಯಾರು?
Answer
C. ಕ್ಲಾಡಿಯಾ ಗೋಲ್ಡಿನ್
53
ಸಣ್ಣ ಕರುಳಿನೊಂದಿಗೆ ತಾಳೆಯಾಗುವ ಕೆಳಗೆ ನೀಡಲಾದ ಹೇಳಿಕೆಯನ್ನು/ಹೇಳಿಕೆಗಳನ್ನು ಆಯ್ಕೆಮಾಡಿ. i. ಆಹಾರದಿಂದ ಪೋಷಕಾಂಶಗಳು ರಕ್ತದೊಳಗೆ ಹೀರಿಕೊಳ್ಳುವ ಭಾಗ. ii. ವಿಲ್ಲಸ್ ಕಂಡುಬರುವ ಭಾಗ. iii. ನೀರು ಮತ್ತು ಲವಣಗಳನ್ನು ಹೀರಿಕೊಳ್ಳುವ ಭಾಗ.
Answer
B. i, ii, iii
54
‘ಮಂದ ಬೆಳಕಿನಲ್ಲಿ ನೋಡಲು ಸಾಧ್ಯವಿಲ್ಲ’. ಈ ರೋಗಲಕ್ಷಣವು ಯಾವ ವಿಟಮಿನ್ ಕೊರತೆಯ ಕಾಯಿಲೆಗೆ ಸಂಬಂಧಿಸಿದೆ?
Answer
A. ವಿಟಮಿನ್ ಎ
55
ಈ ಕೆಳಗಿನವುಗಳಲ್ಲಿ ಕೇರಳದ ಆದಾಯದ ಮುಖ್ಯ ಮೂಲ ಯಾವುದು?
Answer
Question Cancelled
56
ರಾಷ್ಟ್ರೀಯ ಅರಣ್ಯ ನೀತಿಯು ಜಾರಿಗೆ ಬಂದ ವರ್ಷ ಯಾವುದು?
Answer
D. 1988
57
ಯಾವ ಅಂತರರಾಷ್ಟ್ರೀಯ ಪರಿಸರ ಸಂಸ್ಥೆಯು ‘ರೆಡ್ ಡಾಟಾ ಬುಕ್’ ಅನ್ನು ಪ್ರಕಟಿಸುತ್ತದೆ?
Answer
A. IUCN
58
ಯಾವ ದೇಶವು 2024 ರ ವಿಶ್ವ ಪರಿಸರ ದಿನವನ್ನು ಆಯೋಜಿಸಿದೆ?
Answer
B. ಸೌದಿ ಅರೇಬಿಯಾ
59
ದೇಶದ ಕರೆನ್ಸಿ ಬಿಕ್ಕಟ್ಟನ್ನು ಪರಿಹರಿಸಲು ಜಿಂಬಾಬ್ವೆ ಪರಿಚಯಿಸಿದ ಕರೆನ್ಸಿಯ ಹೆಸರೇನು?
Answer
C. ZiG
60
ಉಪ್ಪು ದೈನಂದಿನ ಜೀವನದಲ್ಲಿ ಅನಿವಾರ್ಯ ಆಹಾರ ವಸ್ತುವಾಗಿದೆ. ಕೆಳಗಿನವುಗಳಿಂದ ಉಪ್ಪಿನ ರಾಸಾಯನಿಕ ಹೆಸರನ್ನು ಆಯ್ಕೆ ಮಾಡಿ.
Answer
B. ಸೋಡಿಯಂ ಕ್ಲೋರೈಡ್
61
________ ಎಂಬುದು ವಸ್ತುವಿನಲ್ಲಿರುವ ಶಕ್ತಿಯ ರೂಪವಾಗಿದೆ.
Answer
A. ರಾಸಾಯನಿಕ ಶಕ್ತಿ
62
ಮಾನವರು ಕೇಳಬಹುದಾದ ಧ್ವನಿಯ ವ್ಯಾಪ್ತಿ
Answer
C. 20 Hz ಮತ್ತು 20000 Hz ಗಳ ನಡುವೆ
63
1. ಎಲ್ಲಾ ವಸ್ತುಗಳು ಪರಮಾಣುಗಳು ಎಂದು ಕರೆಯಲಾಗುವ ಸಣ್ಣ ಕಣಗಳಿಂದ ರಚನೆಯಾಗಿವೆ. 2. ವಿಭಿನ್ನ ಧಾತುಗಳ ಪರಮಾಣುಗಳು ವಿಭಿನ್ನ ದ್ರವ್ಯರಾಶಿಗಳನ್ನು ಹೊಂದಿರುತ್ತವೆ ಮತ್ತು ವಿಭಿನ್ನ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. 3. ಪರಮಾಣು ರಾಸಾಯನಿಕ ಕ್ರಿಯೆಗೆ ಒಳಗಾಗುವ ಚಿಕ್ಕ ಕಣವಾಗಿದೆ. 4. ರಾಸಾಯನಿಕ ಕ್ರಿಯೆಗಳ ಸಮಯದಲ್ಲಿ ಪರಮಾಣುಗಳನ್ನು ರಚಿಸಲಾಗುವುದಿಲ್ಲ ಅಥವಾ ನಾಶಪಡಿಸಲಾಗುವುದಿಲ್ಲ. ಪರಮಾಣುವಿನ ಬಗೆಗಿನ ಹೇಳಿಕೆಗಳಲ್ಲಿ,
Answer
C. ಎಲ್ಲವೂ ಸರಿಯಾಗಿವೆ
64
1. ಎಲ್ಲಾ ಖನಿಜಗಳು ಅದಿರುಗಳಾಗಿವೆ. 2. ಎಲ್ಲಾ ಅದಿರುಗಳು ಖನಿಜಗಳಾಗಿವೆ. 3. ಅದಿರು ಮತ್ತು ಖನಿಜಗಳ ನಡುವೆ ಯಾವುದೇ ಸಂಬಂಧವಿಲ್ಲ. ಮೇಲಿನ ಹೇಳಿಕೆಗಳಲ್ಲಿ,
Answer
A. 2 ಮಾತ್ರ ಸರಿಯಾಗಿದೆ
65
ವಿಶ್ವ ಪರಿಸರ ದಿನ 2024 ರ ಥೀಮ್ ಯಾವುದು?
Answer
A. ಭೂ ಪುನಃಸ್ಥಾಪನೆ, ಮರುಭೂಮೀಕರಣ, ಬರಗಾಲ ಪ್ರತಿರೋಧ
66
ರಸಾಯನಶಾಸ್ತ್ರದಲ್ಲಿ 2023 ರ ನೊಬೆಲ್ ಪ್ರಶಸ್ತಿಯನ್ನು
Answer
B. 3 ಜನರು ಸ್ವೀಕರಿಸಿದ್ದಾರೆ
67
ಮಾನವ ದೇಹದಲ್ಲಿನ ಅತಿ ದೊಡ್ಡ ಗ್ರಂಥಿ ಯಾವುದು?
Answer
B. ಯಕೃತ್ತು
68
ಈ ಕೆಳಗಿನವುಗಳಲ್ಲಿ ಪ್ರೊಟೋಜೋವನ್ ಕಾಯಿಲೆ ಯಾವುದು?
Answer
B. ಮಲೇರಿಯಾ
69
ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಪ್ಲಾಸ್ಮಾ ಪ್ರೋಟೀನ್
Answer
C. ಫೈಬ್ರಿನೋಜನ್
70
ಮದುಳಿನಲ್ಲಿ ವಿದ್ಯುತ್ ತರಂಗಗಳನ್ನು ದಾಖಲಿಸಲು ಬಳಸುವ ಸಾಧನ
Answer
C. ಇಇಜೆ
71
ರೋಗಕಾರಕ ಸೂಕ್ಷ್ಮ ಜೀವಿಗಳ ಔಷಧ ನಿರೋಧಕತೆಯನ್ನು ಎದುರಿಸುವ ಗುರಿಯನ್ನು ಕೇರಳದಲ್ಲಿ ಜಾರಿಗೆ ತಂದ ಕ್ರಿಯಾ ಯೋಜನೆಯನ್ನು ಹೆಸರಿಸಿ.
Answer
A. KARSAP
72
ಸಸ್ಯಕೋಶಗಳಲ್ಲಿನ ಪಕ್ಕದ ಕೋಶಗಳನ್ನು ಯಾವ ಪೊರೆಯು ಸಂಪರ್ಕಿಸುತ್ತದೆ?
Answer
C. ಪ್ಲಾಸ್ಮೋಡೆಸ್ಮಾಟಾ
73
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಕಾಯಿಲೆಗೆ ಕಾರಣವಾಗುವ ರೋಗಕಾರಕ ಯಾವುದು?
Answer
B. ನೇಗ್ಲೇರಿಯಾ ಫೌಲೆರಿ
74
ಜೀವಸತ್ವಲಿ ರೋಗ ನಿಯಂತ್ರಣ ಯೋಜನೆಯ ಹೆಸರು
Answer
Question Cancelled
75
ಶ್ವಾಸಕೋಶವನ್ನು ಅಲಂಕರಿಸುವ ದ್ವಿಪದರ
Answer
B. ಪ್ಲೂರಾ
76
ಈ ಕೆಳಗಿನ ಯಾವ ಹೇಳಿಕೆಗಳು ಪೋರ್ಟಲ್ ರಕ್ತನಾಳಕ್ಕೆ ಸಂಬಂಧಿಸಿವೆ ? i. ಆಮ್ಲಜನಕಯುಕ್ತ ರಕ್ತವನ್ನು ಹೃದಯಕ್ಕೆ ಒಯ್ಯುತ್ತದೆ. ii. ರಕ್ತವನ್ನು ಅಂಗದಿಂದ ಅಂಗಕ್ಕೆ ಕೊಂಡೊಯ್ಯುತ್ತದೆ. iii. ಕೊಬ್ಬಿನಾಮ್ಲ ಮತ್ತು ಗ್ಲಿಸರಾಲ್‌ನಂತಹ ಪೋಷಕಾಂಶಗಳನ್ನು ಹೃದಯಕ್ಕೆ ತಲುಪಿಸುತ್ತದೆ. iv. ಪೋಷಕಾಂಶಗಳನ್ನು ವಿಲ್ಲಿಯಿಂದ ಯಕೃತ್ತಿಗೆ ಸಾಗಿಸಲಾಗುತ್ತದೆ.
Answer
B. ಹೇಳಿಕೆಗಳು ii, iv ಸರಿಯಾಗಿವೆ
77
ಕೇರಳದ ಮೊದಲ ಜೈವಿಕ ಸಂಪನ್ಮೂಲ ನೈಸರ್ಗಿಕ ಉದ್ಯಾನವನ
Answer
C. ನಿಲಾಂಬೂರ್‌
78
ಯಾವ ಕಾಯಿಲೆಯ ಹರಡುವಿಕೆಯಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ ?
Answer
Question Cancelled
79
ಭಾರತದಲ್ಲಿ ಮೊದಲ ಬಾರಿಗೆ ಹಿಮಾಲಯನ್ ರಣಹದ್ದುಗಳ ಸಂತಾನೋತ್ಪತ್ತಿಯನ್ನು ವರದಿ ಮಾಡಿರುವ ರಾಜ್ಯ
Answer
B. ಅಸ್ಸಾಂ
80
ವಿಪತ್ತು ನಿರ್ವಹಣಾ ವಿಮಾ ತಂಡವನ್ನು ಪ್ರಾರಂಭಿಸಿದ ಮೊದಲ ರಾಜ್ಯ
Answer
C. ನಾಗಾಲ್ಯಾಂಡ್
81
ಯಾವುದು ಪೈಥಾಗೊರಸ್ ತ್ರಿಕೋನವಲ್ಲ ?
Answer
A. 8, 7, 3
82
5 + 2 × 3 − ½ × 6 = ?
Answer
B. 8
83
0.5, 0.25 ಮತ್ತು 0.35 ಸಂಖ್ಯೆಗಳ ಎಲ್‌.ಸಿ.ಎಮ್‌. ಎಷ್ಟು?
Answer
Question Cancelled
84
ಈ ಕೆಳಗಿನವುಗಳಲ್ಲಿ ಯಾವುದು ದೊಡ್ಡ ಸಂಖ್ಯೆ ?
Answer
D. 17/5
85
1.1 × 1.11 ರ ಮೌಲ್ಯವನ್ನು ಕಂಡುಹಿಡಿಯಿರಿ.
Answer
B. 1.221
86
√(x/221) = 2 ಆಗಿದ್ದರೆ, x ಅನ್ನು ಕಂಡುಹಿಡಿಯಿರಿ.
Answer
D. 884
87
10 ಸಂಖ್ಯೆಗಳ ಸರಾಸರಿ 23. ಈ ಪ್ರತಿಯೊಂದು ಸಂಖ್ಯೆಗಳಿಗೆ 4 ಅನ್ನು ಸೇರಿಸುವ ಮೂಲಕ ಪಡೆದ ಸಂಖ್ಯೆಗಳ ಸರಾಸರಿ ಎಷ್ಟು ?
Answer
A. 27
88
ಸ್ಕೂಟರನ್ನು 9,200 ರೂ.ಗಳಿಗೆ ಮಾರಾಟ ಮಾಡಿದರೆ ಮತ್ತು ಲಾಭವು 15% ಆಗಿದ್ದರೆ, ಖರೀದಿ ಬೆಲೆ ಎಷ್ಟು?
Answer
A. 8,000
89
ಒಬ್ಬವ್ಯಕ್ತಿಯು ಎ ಯಿಂದ ಬಿಗೆ ಗಂಟೆಗೆ 60 ಕಿ.ಮೀ. ವೇಗದಲ್ಲಿಮತ್ತು ಹಿಂದಿರುಗುವಾಗ ಗಂಟೆಗೆ 40 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದರೆ, ಪ್ರಯಾಣದ ಸರಾಸರಿ ವೇಗ ಎಷ್ಟು?
Answer
B. 48
90
2, 11, 32, ?
Answer
A. 71
91
ಇವುಗಳಲ್ಲಿ ಗುಂಪಿಗೆ ಸೇರದ ಸಂಖ್ಯೆಯನ್ನು ಕಂಡುಹಿಡಿಯಿರಿ.
Answer
Question Cancelled
92
ಒಂದು ಲಕ್ಷದಲ್ಲಿ ಎಷ್ಟು 100 ಇವೆ ?
Answer
A. 1000
93
ಅಪ್ಪುವಿನ ತಾಯಿಯ ವಯಸ್ಸು ಅಪ್ಪುವಿನ ವಯಸ್ಸಿನ 9 ಪಟ್ಟು ಇದೆ. 9 ವರ್ಷಗಳ ಅನಂತರ ಅದು 3 ಪಟ್ಟು ಆಗುತ್ತದೆ. ಹಾಗಾದರೆ ಅಪ್ಪುವಿನ ವಯಸ್ಸು ಎಷ್ಟು ?
Answer
A. 3
94
ಒಂದು ಸರದಿಯಲ್ಲಿರಾಮನ್‌ ಮುಂಭಾಗದಿಂದ ಒಂಬತ್ತನೇ ಮತ್ತು ಹಿಂಭಾಗದಿಂದ ಹದಿನೈದನೇ ಸ್ಥಾನದಲ್ಲಿದ್ದಾನೆ. ಹಾಗಾದರೆ ಸರದಿಯಲ್ಲಿ ಒಟ್ಟು ಎಷ್ಟು ಜನರಿದ್ದಾರೆ ?
Answer
B. 23
95
2024ನೆಯ ಕ್ಯಾಲೆಂಡರ್‌ನ ಮರುಬಳಕೆ ಸಾಧ್ಯವಾಗುವ ನಿಕಟ ವರ್ಷ ಯಾವುದು ?
Answer
D. 2052
96
ಮೊತ್ತವನ್ನು ಕಂಡುಹಿಡಿಯಿರಿ. 3+6+9+...+90
Answer
A. 1395
97
A ಎಂಬುವವರು B ಯ ತಂದೆ. C ಎಂಬುವವರು D ಯ ಸೋದರ. E ಎಂಬುವವರು C ಯ ತಾಯಿ. B ಮತ್ತು D ಸಹೋದರರು. E ಗೆ A ಯೊಂದಿಗಿನ ಸಂಬಂಧವೇನು ?
Answer
A. ಹೆಂಡತಿ
98
FMPQC ಎಂಬುದು ಒಂದು ಸಂಕೇತ ಭಾಷೆಯಲ್ಲಿ HORSE ಆಗಿದ್ದರೆ, ಅದೇ ಸಂಕೇತ ಭಾಷೆಯಲ್ಲಿ ILGDC ಏನಾಗುತ್ತದೆ ?
Answer
D. KNIFE
99
‘÷’ ಎಂಬುದು ‘×’, ‘−’ ಎಂಬುದು ‘+’, ‘+’ ಎಂಬುದು ‘−’, ‘×’ ಎಂಬುದು ‘÷’ ಆಗಿದ್ದರೆ, 4 ÷ 3 − 2 + 6 × 3 ರ ಮೌಲ್ಯ ಎಷ್ಟು ?
Answer
A. 12
100
X ಮತ್ತು Y ಬೆಸ ಸಂಖ್ಯೆಗಳಾಗಿದ್ದರೆ, ಕೊಟ್ಟಿರುವ ಸಂಖ್ಯೆಗಳಲ್ಲಿ ಸಮ ಸಂಖ್ಯೆ ಯಾವುದು ?
Answer
C. X + Y

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.