Skip to content
10th Level - Practice App Completely Free · 100K+ Users Install

Kerala PSC Women Civil Excise Officer (Trainee) 502/2023. Previous Question Paper – 011/2026

Practice Mode

Sit all 99 questions full screen, one at a time. Sign in and your score, your time and where you got to are kept — put it down here and finish it on your phone.

Sign in to practise
Post NameWomen Civil Excise Officer (Trainee) 502/2023.
Question Paper Code011/2026
Category Code502/2023
Date of Test7 February 2026
Medium of QuestionKANNADA
Exam TypeOMR Examination
Total Questions100
1
ಕೆಳಗಿನವುಗಳಲ್ಲಿ ಸರಿಯಾದ ಕಾಲಾನುಕ್ರಮ ಯಾವುದು ? i. ಮಾರ್ತಾಂಡ ವರ್ಮನ ಪದಗ್ರಹಣ ii. ಕುಲಾಚಲ ಕದನ iii. ಅಟ್ಟಿಂಗಲ್ ಗಲಭೆಗಳು iv. ಶ್ರೀರಂಗಪಟ್ಟಣ ಒಪ್ಪಂದ
Answer
C. iii, i, ii, iv
2
ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಕಂಡುಹುಡುಕಿ. i. ಆತ್ಮವಿದ್ಯಾ ಸಂಘಂ - ವೈಕುಂಠ ಸ್ವಾಮಿಕಳ್ ii. ಆರಯ ಸಮಾಜಂ - ಪಂಡಿತ್ ಕೆ.ಪಿ. ಕರುಪ್ಪನ್ iii. ಪ್ರತ್ಯಕ್ಷ ರಕ್ಷಾದೈವಸಭಾ - ಕುಮಾರ ಗುರುದೇವನ್ iv. ಯೋಗಕ್ಷೇಮಸಭಾ - ಅಯ್ಯಂಕಳಿ
Answer
A. i, iv
3
1857 ರ ದಂಗೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ ? i. ನಾನಾಸಾಹೇಬನು ದೆಹಲಿಯಲ್ಲಿ ದಂಗೆಯನ್ನು ಮುನ್ನಡೆಸಿದನು. ii. ಅವಧ್ ಅನ್ನು ‘ಒಂದು ದಿನ ನಮ್ಮ ಬಾಯಿಗೆ ಬೀಳುವ ಚೆರ್ರಿ’ ಎಂದು ಬಣ್ಣಿಸಲಾಗಿದೆ. iii. ‘ಇನ್ ಮೆಮೋರಿಯಂ’ ಎಂಬುವುದು ಥಾಮಸ್ ಜೋನ್ಸ್ ಬಾರ್ಕರ್ 1859ರಲ್ಲಿ ಚಿತ್ರಿಸಿದ ಚಿತ್ರಕಲೆ ಆಗಿದೆ. iv. ಮೀರತ್‌ನಲ್ಲಿ ಮೇ 10, 1857 ರಂದು ದಂಗೆ ಪ್ರಾರಂಭವಾಯಿತು.
Answer
B. ii, iv
4
ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ಸಂಬಂಧವಿಲ್ಲದವುಗಳನ್ನು ಕಂಡುಹುಡುಕಿ. i. 1922 ರ ಚೌರಿ ಚೌರಾ ಘಟನೆಯ ಅನಂತರ ಗಾಂಧೀಜಿ ನಾಗರಿಕ ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು. ii. ಕ್ರಿಪ್ಸ್ ಮಿಷನ್‌ನ ವೈಫಲ್ಯದ ಅನಂತರ ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು. iii. 1929 ರ ಲಾಹೋರ್ ಅಧಿವೇಶನದಲ್ಲಿ ಜವಾಹರ್‌ಲಾಲ್ ನೆಹರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. iv. ಮಾರ್ಚ್ 12, 1930 ರಂದು ಗಾಂಧೀಜಿ ಮತ್ತು ಅವರ ಅನುಯಾಯಿಗಳು ದಂಡಿ ಯಾತ್ರೆಯನ್ನು ಪ್ರಾರಂಭಿಸಿದರು.
Answer
C. i
5
ಕೆಳಗೆ ನೀಡಲಾದ ಜೋಡಿಗಳಿಂದ ಸರಿಯಾದ ಜೋಡಿಯನ್ನು ಕಂಡುಹುಡುಕಿ. i. ಲೈಫ್ ವೀಕ್ಷಿ - ಸಾವೊ ಟಾವೊ ಫೆನ್ ii. ಲಾಂಗ್ ಮಾರ್ಚ್ - ಸನ್ ಯಾತ್-ಸೇನ್ iii. ದಿ ಫ್ಲಡ್ ಆಫ್ಟರ್ ಮಿ - ಲೂಯಿಸ್ XV iv. ಸೋಶಿಯಲ್ ಕಾಂಟ್ರ್ಯಾಕ್ಟ್ - ವೋಲ್ಟೇರ್
Answer
D. i, iii
6
2025 ರಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಕುರಿತಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಇದು 78 ನೇ ಸ್ವಾತಂತ್ರ್ಯ ದಿನಾಚರಣೆ ii. ಇದು 80 ನೇ ಸ್ವಾತಂತ್ರ್ಯ ದಿನಾಚರಣೆ iii. ವಿಶೇಷ ಅತಿಥಿಗಳಾಗಿ ಬೇರೆ ಯಾವುದೇ ರಾಷ್ಟ್ರದ ಮುಖ್ಯಸ್ಥರು ಇರಲಿಲ್ಲ iv. ಇದು 79 ನೇ ಸ್ವಾತಂತ್ರ್ಯ ದಿನಾಚರಣೆ
Answer
B. iii, iv
7
ಗುರುತ್ವಾಕರ್ಷಣೆಯ ಅಸಂಗತತೆಗೆ ಸಂಬಂಧಿಸಿದ ತಪ್ಪು ಹೇಳಿಕೆಯನ್ನು ಕಂಡುಹುಡುಕಿ. i. ವಸ್ತುಗಳ ದ್ರವ್ಯರಾಶಿಯಲ್ಲಿನ ವ್ಯತ್ಯಾಸವು ಗುರುತ್ವಾಕರ್ಷಣೆಯ ಅಸಂಗತತೆಗೆ ಕಾರಣವಾಗಿದೆ. ii. ಶಿಲಾವಸ್ತುಗಳ ಸಂಯೋಜನೆಯಲ್ಲಿನ ವ್ಯತ್ಯಾಸವು ಗುರುತ್ವಾಕರ್ಷಣೆಯ ಅಸಂಗತತೆಗೆ ಕಾರಣವಾಗಿದೆ. iii. ಭೂಮಿಯ ಮಧ್ಯಭಾಗದಿಂದ ಇರುವ ದೂರವು ಗುರುತ್ವಾಕರ್ಷಣೆಯ ಅಸಂಗತತೆಗೆ ಕಾರಣವಾಗಿದೆ.
Answer
B. ii ಮಾತ್ರ
8
ಭಾರತದ ಉತ್ತರಭಾಗದ ಪರ್ವತ ವಲಯದಲ್ಲಿ ಯಾವ ಉಪ್ಪು ನೀರಿನ ಸರೋವರ ಕಂಡುಬರುತ್ತದೆ ?
Answer
C. ಪ್ಯಾಂಗಾಂಗ್ ತ್ಸೋ ಸರೋವರ
9
ಸರ್ವೇ ಆಫ್‌ ಇಂಡಿಯಾದ ಪ್ರಧಾನ ಕಚೇರಿ ಇರುವ ನಗರ
Answer
B. ಸಿಮ್ಲಾ
10
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಬೇರ್ಪಡಿಸುವ ಸಮುದ್ರ ಕಾಲುವೆ ಯಾವುದು ?
Answer
B. 10° ಕಾಲುವೆ
11
ಶಿಲಾ ರಚನೆಗೆ ಸಂಬಂಧಿಸಿದ ಸರಿಯಾದ ಹೇಳಿಕೆಯನ್ನು ಕಂಡುಹುಡುಕಿ. i. ಪ್ರಾದೇಶಿಕ ರೂಪಾಂತರದಲ್ಲಿ, ಶಿಲಾಪಾಕದ ಶಾಖದಿಂದಾಗಿ ಶಿಲೆಗಳು ಮರುಸ್ಫಟಿಕೀಕರಣಕ್ಕೆ ಒಳಗಾಗುತ್ತವೆ. ii. ಅಗ್ನಿ ರೂಪಾಂತರದಲ್ಲಿ, ಶಿಲೆಗಳು ಒಡೆಯಲ್ಪಡುತ್ತವೆ ಮತ್ತು ಮರುಸ್ಫಟಿಕೀಕರಣಗೊಳ್ಳುತ್ತವೆ. iii. ಸಂಪರ್ಕ ರೂಪಾಂತರದಲ್ಲಿ, ಶಿಲೆಗಳು ಟೆಕ್ಟೋನಿಕ್ ಚಲನೆಯಿಂದಾಗಿ ಮರುಸ್ಫಟಿಕೀಕರಣಗೊಳ್ಳುತ್ತವೆ.
Answer
B. ii ಮಾತ್ರ
12
2025 ರಲ್ಲಿ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಅತ್ಯಂತ ಬಡ ದೇಶ ಯಾವುದು ?
Answer
D. ಸೊಮಾಲಿಯಾ
13
ಈ ಕೆಳಗಿನವುಗಳಲ್ಲಿ ಹಸಿರು ಕ್ರಾಂತಿಯ ಬಗ್ಗೆ ಯಾವುವು ಸರಿಯಾಗಿವೆ ? i. ಹೆಚ್ಚಿನ ಇಳುವರಿ ನೀಡುವ ಬೀಜಗಳು ii. ರಸಗೊಬ್ಬರಗಳು ಮತ್ತು ಕೀಟನಾಶಕಗಳು iii. ಬಡ ರೈತರು ಮತ್ತು ಶ್ರೀಮಂತ ರೈತರ ನಡುವಿನ ಅಂತರವು ಕಣ್ಮರೆಯಾಗಿದೆ
Answer
B. i ಮತ್ತು ii
14
ಹೊಸ ಆರ್ಥಿಕ ಸುಧಾರಣೆಯಲ್ಲಿ ಏನನ್ನು ಸೇರಿಸಲಾಗಿಲ್ಲ ? i. ಉದಾರತೆ ii. ಕೈಗಾರೀಕರಣ iii. ಖಾಸಗೀಕರಣ iv. ಜಾಗತೀಕರಣ
Answer
A. ii ಮಾತ್ರ
15
ಭಾರತೀಯ ಯೋಜನೆಗೆ ಸಂಬಂಧಿಸಿದಂತೆ ಯಾವುದು ನಿಜವಲ್ಲ ? i. ಪಿ.ಸಿ. ಮಹಾಲನೋಬಿಸ್ ಭಾರತೀಯ ಯೋಜನೆಯ ಶಿಲ್ಪಿ ii. ಭಾರತ ಸೋವಿಯತ್ ಶೈಲಿಯ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡಿದೆ. iii. ಭಾರತದಲ್ಲಿ ಯೋಜನೆ 1947 ರಲ್ಲಿ ಪ್ರಾರಂಭವಾಯಿತು.
Answer
C. iii ಮಾತ್ರ
16
ಕೆಳಗಿನವುಗಳಲ್ಲಿ ಭಾರತೀಯ ಯೋಜನೆಯ ಉದ್ದೇಶಗಳು ಯಾವುವು ? i. ಆರ್ಥಿಕ ಬೆಳವಣಿಗೆ ii. ಸ್ವಾವಲಂಬನೆ iii. ನ್ಯಾಯ iv. ನವೀಕರಣ
Answer
Question Cancelled
17
ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಬ್ಯಾಂಕಿನ ಕಾರ್ಯಗಳಲ್ಲಿ ಸೇರಿಲ್ಲ ? i. ಕರೆನ್ಸಿ ನೋಟುಗಳನ್ನು ಮುದ್ರಿಸುವುದು ii. ಬ್ಯಾಂಕ್‌ಗಳ ಬ್ಯಾಂಕ್ iii. ತೆರಿಗೆ ದರವನ್ನು ನಿರ್ಧರಿಸುವುದು iv. ಸರ್ಕಾರದ ಬ್ಯಾಂಕ್
Answer
B. iii ಮಾತ್ರ
18
ನೀತಿ ಆಯೋಗಕ್ಕೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ ? i. ಪ್ರಧಾನ ಕಚೇರಿಯು ನವದೆಹಲಿಯಲ್ಲಿರುವ ನೀತಿ ಭವನ ii. ಜನವರಿ 1, 2015ರಂದು ಸ್ಥಾಪಿಸಲಾಯಿತು iii. ಪ್ರಸ್ತುತ ಸಿಇಒ ಪರಮೇಶ್ವರನ್ ಅಯ್ಯರ್
Answer
C. i, ii
19
ಸರಳ ಬಹುಮತ ವ್ಯವಸ್ಥೆಯ ಚುನಾವಣಾ ಪದ್ಧತಿಗೆ ಈ ಕೆಳಗಿನ ಯಾವ ಹೇಳಿಕೆಗಳು ಸೂಕ್ತವಾಗಿಲ್ಲ ? i. ಒಂದು ಪಕ್ಷವು ಪಡೆಯುವ ಸ್ಥಾನಗಳ ಸಂಖ್ಯೆಯು ಅದು ಪಡೆಯುವ ಮತಗಳ ಶೇಕಡಾವಾರು ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ii. ಮತದಾರರು ಪಕ್ಷದ ಪಟ್ಟಿಗಳಿಗೆ ಮತ ಚಲಾಯಿಸುತ್ತಾರೆ. iii. ವಿಧಾನಸಭೆಯಲ್ಲಿ ಪ್ರಾತಿನಿಧ್ಯವು ಮತದಾನದ ಶೇಕಡಾವಾರು ಪ್ರಮಾಣವನ್ನು ಆಧರಿಸಿದೆ.
Answer
C. ii ಮತ್ತು iii ಮಾತ್ರ
20
ಮೂಲಭೂತ ಹಕ್ಕುಗಳಲ್ಲಿ ಯಾವ ಹಕ್ಕುಗಳನ್ನು ಸೇರಿಸಲಾಗಿದೆ ? i. ಕೆಲಸ ಮಾಡುವ ಹಕ್ಕು ii. ಆರ್ಥಿಕ ಶೋಷಣೆಯ ವಿರುದ್ಧದ ಹಕ್ಕು iii. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಹಕ್ಕು
Answer
D. ಇವುಗಳಲ್ಲಿ ಯಾವುದೂ ಅಲ್ಲ
21
ಅವಿಶ್ವಾಸ ಗೊತ್ತುವಳಿಗೆ (No confidence motion) ಸಂಬಂಧಿಸಿದಂತೆ ಯಾವ ಹೇಳಿಕೆ ನಿಜವಲ್ಲ ? i. ಒಂದು ವೇಳೆ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾದರೆ, ಬದಲಿ ಸಚಿವ ಸಂಪುಟ ರಚನೆಯಾಗುವವರೆಗೆ ಪ್ರಸ್ತುತ ಸಚಿವ ಸಂಪುಟ ಮುಂದುವರಿಯುತ್ತದೆ. ii. ಅವಿಶ್ವಾಸ ಗೊತ್ತುವಳಿಗೆ ಸ್ಪೀಕರ್‌ನ ಅನುಮೋದನೆಯ ಅಗತ್ಯವಿದೆ. iii. ಎರಡು ಅವಿಶ್ವಾಸ ಗೊತ್ತುವಳಿಗಳ ನಡುವಿನ ಅವಧಿ ಮೂರು ತಿಂಗಳುಗಳು.
Answer
C. i ಮತ್ತು iii ಮಾತ್ರ
22
ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳ (Fundamental Rights) ಗುಣಲಕ್ಷಣಗಳ ಬಗ್ಗೆ ಯಾವುವು ನಿಜ ? i. ಸರ್ಕಾರದ ಅಧಿಕಾರವನ್ನು ನಿಯಂತ್ರಿಸುವುದು. ii. ಇದನ್ನು ನ್ಯಾಯಾಲಯದ ಮೂಲಕ ಸ್ಥಾಪಿಸಲಾಗಿದೆ. iii. ಕೆಲವು ಮೂಲಭೂತ ಹಕ್ಕುಗಳು ಭಾರತದ ವಿದೇಶಿ ನಾಗರಿಕರಿಗೂ ಲಭ್ಯವಿದೆ.
Answer
D. (i, ii ಮತ್ತು iii) ಮೇಲಿನ ಎಲ್ಲವೂ
23
ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ರಾಜ್ಯ ಸರ್ಕಾರವನ್ನು ವಜಾಗೊಳಿಸುತ್ತಾರೆ ?
Answer
A. 356
24
ಸಂವಿಧಾನದ ಯಾವ ವಿಧಿಯಲ್ಲಿ ಆಸ್ತಿಯ ಕಾನೂನುಬದ್ಧ ಹಕ್ಕನ್ನು ಸೇರಿಸಲಾಗಿದೆ ?
Answer
B. 300 A
25
ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ ?
Answer
C. IV A
26
ಈ ಕೆಳಗಿನ ಯಾವ ವಿಷಯಗಳನ್ನು ಸಮಕಾಲೀನ ಪಟ್ಟಿಯಲ್ಲಿ ಸೇರಿಸಲಾಗಿದೆ ?
Answer
D. ಕಾರ್ಮಿಕ ಸಂಘಟನೆಗಳು
27
ಅಮೆರಿಕದಲ್ಲಿ ರಿಪಬ್ಲಿಕನ್‌ ಪಕ್ಷದ ಚುನಾವಣಾ ಚಿಹ್ನೆ ಯಾವುದು ?
Answer
C. ಆನೆ
28
2018 ರ ಪ್ರವಾಹದಲ್ಲಿ ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ನಾಶವಾದ, ಹಾಸಿಗೆ ಹಿಡಿದ ರೋಗಿಗಳು ಮತ್ತು ವಿಕಲಚೇತನರಿಗೆ ಹೆಚ್ಚುವರಿ ಆರ್ಥಿಕ ನೆರವು ನೀಡಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಯಾವ ಯೋಜನೆಯನ್ನು ಸಿದ್ಧಪಡಿಸಿದೆ ?
Answer
B. ಪ್ರತ್ಯುತ್ಥಾನಂ ಯೋಜನೆ
29
ರಾಜ್ಯ ಸರ್ಕಾರವು ಪ್ರಾರಂಭಿಸಿದ ಸಲ್ಲಾಪಂ ಮತ್ತು ಮಂದಹಾಸಂ ಯೋಜನೆಗಳು ಸಮಾಜದ ಯಾವ ವರ್ಗವನ್ನು ಒಳಗೊಳ್ಳುತ್ತವೆ ?
Answer
C. ವೃದ್ಧರು
30
ಹದಿನೈದರಿಂದ ಮೂವತೈದು ವರ್ಷದೊಳಗಿನ ಯುವಕರು ಸಾಂಸ್ಕೃತಿಕ, ಕಲಾತ್ಮಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡಲು ಕೇರಳ ಸರ್ಕಾರವು ಯಾವ ಯೋಜನೆಯನ್ನು ಜಾರಿಗೆ ತಂದಿದೆ ?
Answer
B. ಕೇರಳೀಯಂ
31
ತ್ಯಾಜ್ಯಮುಕ್ತ ಕೇರಳಕ್ಕಾಗಿ ಕೇರಳ ಸರ್ಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿದೆ ?
Answer
A. ಸ್ನೇಹರಾಮಂ ಯೋಜನೆ
32
ಈ ಕೆಳಗಿನ ಯಾವ ಹಾರ್ಮೋನುಗಳು ಸ್ತ್ರೀ ದೇಹದಲ್ಲಿ ಗರ್ಭಾವಸ್ಥೆಯಲ್ಲಿ ಮಾತ್ರ ಉತ್ಪತ್ತಿಯಾಗುತ್ತವೆ ?
Answer
B. ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಪಿನ್
33
ನೆಗಡಿಯನ್ನು (Common cold) ಉಂಟುಮಾಡುವ ರೋಗಕಾರಕ ಯಾವುದು ?
Answer
A. ರೈನೋ ವೈರಸ್
34
ಈ ಕೆಳಗಿನವುಗಳಲ್ಲಿ ಯಾವುದು ಯೂರಿಕ್ ಆಮ್ಲ ಹರಳುಗಳ ಶೇಖರಣೆಯಿಂದ ಉಂಟಾಗುವ ಕೀಲು ಉರಿಯೂತವನ್ನು ಸೂಚಿಸುತ್ತದೆ ?
Answer
B. ಗೌಟ್ (Gout)
35
ಯಾವ ಜಾತಿಯ ಸೊಳ್ಳೆ ಮಲೇರಿಯಾವನ್ನು ಹರಡುತ್ತದೆ ?
Answer
A. ಹೆಣ್ಣು ಅನಾಫಿಲಿಸ್ ಸೊಳ್ಳೆ
36
ಕೇರಳದಲ್ಲಿ ಮೊದಲ ಸ್ಕಿನ್ ಬ್ಯಾಂಕ್ ಎಲ್ಲಿ ಪ್ರಾರಂಭವಾಯಿತು ?
Answer
B. ಸರ್ಕಾರಿ ವೈದ್ಯಕೀಯ ಕಾಲೇಜು, ತಿರುವನಂತಪುರ
37
__________ ಎಂಬುದು ಶೌಚಾಲಯಗಳಿಂದ ಸೃಷ್ಟಿಯಾಗುವ ಮತ್ತು ಮಾನವ ತ್ಯಾಜ್ಯವನ್ನು ಹೊಂದಿರುವ ತ್ಯಾಜ್ಯ ನೀರಾಗಿದೆ.
Answer
C. ಕಪ್ಪು ನೀರು
38
ಈ ಕೆಳಗಿನವುಗಳಲ್ಲಿ ದೀರ್ಘತಾ (ಉದ್ದದ) ಘಟಕಗಳು ಯಾವುವು ? i. ಜ್ಯೋತಿರ್ವರ್ಷ ii. ರೇಡಿಯನ್ iii. ಪಾರ್ಸೆಕ್ iv. ನ್ಯೂಟನ್ ಮೀಟರ್
Answer
B. i ಮತ್ತು iii
39
ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ನೆಲದಿಂದ 45 ಡಿಗ್ರಿ ಕೋನದಲ್ಲಿ ಚೆಂಡನ್ನು ಹೊಡೆದರೆ ಅವನು ಸಿಕ್ಸ್ ಪಡೆಯುವ ಸಾಧ್ಯತೆ ಹೆಚ್ಚು. ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ಉತ್ತಮವಾಗಿ ವಿವರಿಸಲಾಗಿದೆ
Answer
C. 45 ಡಿಗ್ರಿ ಕೋನದಲ್ಲಿ ಹೊಡೆದಾಗ ಚೆಂಡಿನ ಲಂಬ ಮತ್ತು ಸಮತಲ ವೇಗದ ಅಂಶಗಳು ಸಮಾನವಾಗಿರುತ್ತವೆ
40
ಹನಿ ನೀರಾವರಿ ಒಂದು ನೀರಾವರಿ ವಿಧಾನವಾಗಿದ್ದು, ನೀರಿನ ಲಭ್ಯತೆ ತೀರಾ ಕಡಿಮೆ ಇರುವ ಪ್ರದೇಶಗಳಲ್ಲಿ ಗರಿಷ್ಠ ನೀರಿನ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಾಗ ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಕೆಳಗಿನ ಯಾವ ಭೌತಿಕ ವಿದ್ಯಮಾನವನ್ನು ಹನಿ ನೀರಾವರಿಯಲ್ಲಿ ಬಳಸಲಾಗುತ್ತದೆ ?
Answer
D. ಕ್ಯಾಪಿಲ್ಲರಿಟಿ
41
XPoSat ಭಾರತದ ಮೊದಲ ಕ್ಷ-ಕಿರಣ ಧ್ರುವೀಯತಾ ಉಪಗ್ರಹವಾಗಿದೆ. ಕ್ಷ-ಕಿರಣ ಧ್ರುವೀಯತಾ ತಂತ್ರಜ್ಞಾನವನ್ನು ಬಳಸಿಕೊಂಡು XPoSat ಯಾವ ಆಕಾಶ ಕಾಯಗಳನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ ?
Answer
A. ಬಾಹ್ಯ ಗ್ರಹಗಳು ಮತ್ತು ಧೂಮಕೇತುಗಳು
42
ನೈಜ ಅನಿಲಗಳು ಯಾವ ಪರಿಸ್ಥಿತಿಗಳಲ್ಲಿ ಆದರ್ಶ ನಡವಳಿಕೆಯನ್ನು ಪ್ರದರ್ಶಿಸುತ್ತವೆ ?
Answer
B. ಕಡಿಮೆ ಒತ್ತಡ, ಅಧಿಕ ತಾಪಮಾನ
43
ಒಂದು ದ್ರಾವಣದ pH ಮೌಲ್ಯವು 3 ಆಗಿದ್ದರೆ, ಅದರ ಹೈಡ್ರೋನಿಯಂ ಅಯಾನು ಸಾಂದ್ರತೆ ಎಷ್ಟು ?
Answer
A. 1.0 × 10⁻³ M
44
ಕೆಳಗಿನ ಜೋಡಿಗಳಲ್ಲಿ ಯಾವುವು ಒಂದೇ ರೀತಿಯ ಎಲೆಕ್ಟ್ರಾನಿಕ್ ಗುಂಪುಗಳಾಗಿವೆ ? i. Na⁺, K⁺ ii. Na⁺, F⁻ iii. O²⁻, Mg²⁺ iv. Ca²⁺, Al³⁺
Answer
B. ii ಮತ್ತು iii
45
2025 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಘೋಷಿಸಿದ ಯಾವ ಮಿಷನ್ ಅನ್ನು ಭಾರತದ ‘ಐರನ್ ಡೋಮ್‌ನಂತಹ’ ರಕ್ಷಣಾ ವ್ಯವಸ್ಥೆ ಎಂದು ವಿವರಿಸಲಾಗಿದೆ ?
Answer
C. ಮಿಷನ್ ಸುದರ್ಶನ ಚಕ್ರ
46
ಪ್ರಸಿದ್ಧ ಚಿತ್ರಕಾರ ರಾಜಾ ರವಿವರ್ಮ ಅವರ ಪುತ್ರ ಎಂ. ರಾಮವರ್ಮ ರಾಜ ಯಾವ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದರು ?
Answer
A. ಕೇರಳ ಲಲಿತಕಲಾ ಅಕಾಡೆಮಿ
47
ಭಾರತ ಮೊದಲ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ತಂಡದ ನಾಯಕಿ ಯಾರು ?
Answer
C. ಹರ್ಮನ್‌ಪ್ರೀತ್ ಕೌರ್
48
ಕೇಂದ್ರ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದ ‘ಮನುಷ್ಯನ್ ಒರು ಆಮುಖಂ’ ಕೃತಿಯ ಲೇಖಕರು ಯಾರು ?
Answer
D. ಸುಭಾಷ್ ಚಂದ್ರ
49
ದೇವಾಲಯ ಸಂಸ್ಕೃತಿಯ ಭಾಗವಾಗಿ ಕ್ರಿ. ಶ. 6ನೇ ಶತಮಾನದಿಂದ ಕೇರಳದಲ್ಲಿ ಅಸ್ತಿತ್ವದಲ್ಲಿದ್ದ ದೇವದಾಸಿ ಪದ್ಧತಿಯಿಂದ ಯಾವ ಕಲಾ ಪ್ರಕಾರವು ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ ?
Answer
C. ಮೋಹಿನಿಯಾಟ್ಟಂ
50
ಪ್ರಪಂಚದಾದ್ಯಂತ ಇರುವ ಮಲಯಾಳಿಗಳಿಗೆ ತಮ್ಮ ಮಾತೃಭಾಷೆಯನ್ನು ಕಲಿಯಲು ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕೇರಳ ಸರ್ಕಾರದ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಯಾವ ಉಪಕ್ರಮವನ್ನು ನಡೆಸಲಾಗುತ್ತಿದೆ ?
Answer
B. ಮಲಯಾಳಂ ಮಿಷನ್
51
ಆಮಿ ಒಂದು ವರ್ಷದಲ್ಲಿ ಮೂರು ಪರೀಕ್ಷೆಗಳನ್ನು ಬರೆದಳು. ಆಮಿ ಎರಡನೇ ಮತ್ತು ಮೂರನೇ ಪರೀಕ್ಷೆಗಳಲ್ಲಿ ಕ್ರಮವಾಗಿ ಮೊದಲ ಪರೀಕ್ಷೆಗಿಂತ 10 ಮತ್ತು 11 ಅಂಕಗಳನ್ನು ಹೆಚ್ಚು ಗಳಿಸಿದಳು. ಆಮಿಯ ಸರಾಸರಿ ಅಂಕಗಳು ಕನಿಷ್ಠ 75 ಆಗಿದ್ದರೆ, ಆಮಿ ಮೊದಲ ಪರೀಕ್ಷೆಯಲ್ಲಿ ಪಡೆಯಬೇಕಾದ ಕನಿಷ್ಠ ಅಂಕ ಎಷ್ಟು ?
Answer
B. 68
52
ಒಂದು ಚೌಕದ ವಿಸ್ತೀರ್ಣ 100 cm² ಆಗಿದೆ. ಅದರ ಕರ್ಣದಲ್ಲಿ ಚಿತ್ರಿಸಲಾದ ವೃತ್ತದ ವಿಸ್ತೀರ್ಣ ಎಷ್ಟು ?
Answer
C. 50π cm²
53
15.625ರ ಘನಮೂಲ
Answer
D. 5/2
54
((x^(a - a⁻¹))^(1/(a - 1)))^(a/(a + 1)) = ________
Answer
A. x
55
ಒಂದು ವಾಸ್ತುಶಿಲ್ಪ ರಚನೆಯು A ಮತ್ತು B ನಲ್ಲಿ ಪರ್ಯಾಯವಾಗಿ ಕೇಂದ್ರಗಳನ್ನು ಹೊಂದಿರುವ ಸತತ ಅರ್ಧವೃತ್ತಗಳಿಂದ ರಚನೆಯಾಗಿದೆ. ಚಿತ್ರದಲ್ಲಿ ತೋರಿಸಿರುವಂತೆ A ನಿಂದ ಪ್ರಾರಂಭಿಸಿ 0.5 cm, 1 cm, 1.5 cm, 2 cm, ........ ತ್ರಿಜ್ಯಗಳನ್ನು ಹೊಂದಿದೆ. 13 ಅರ್ಧವೃತ್ತಗಳನ್ನು ಹೊಂದಿರುವ ಅಂತಹ ವಾಸ್ತುಶಿಲ್ಪ ರಚನೆಯ ಒಟ್ಟು ಉದ್ದ ಎಷ್ಟು ? (π = 22/7)
Answer
A. 143 cm
56
R = 18, RAT = 39 ಆಗಿದ್ದರೆ, CAP =
Answer
C. 20
57
A 512, E 216, __________ M 8.
Answer
C. I 64
58
30/9/2017 ರಿಂದ 5 ವರ್ಷ, 5 ತಿಂಗಳು ಮತ್ತು 5 ದಿನಗಳು ಪೂರ್ಣಗೊಳ್ಳುವ ದಿನಾಂಕ
Answer
D. 5/3/2023
59
ಗಡಿಯಾರದ ನಿಮಿಷದ ಮುಳ್ಳು 1.5 cm ಉದ್ದವಿದೆ. ಅದರ ತುದಿ 30 ನಿಮಿಷಗಳಲ್ಲಿ ಚಲಿಸುವ ದೂರ (π = 3.14)
Answer
B. 4.71 cm
60
ತಂದೆಯ ವಯಸ್ಸು ಮಗನ ವಯಸ್ಸಿನ 5 ಪಟ್ಟು ಇದೆ. 4 ವರ್ಷಗಳ ಹಿಂದೆ ತಂದೆಯ ವಯಸ್ಸು ಮಗನ ವಯಸ್ಸಿನ 9 ಪಟ್ಟು ಇತ್ತು. ಅವರ ಪ್ರಸ್ತುತ ವಯಸ್ಸು
Answer
D. 40, 8
61
The treasure was buried ________ an old oak tree.
Answer
C. beneath
62
Few people understood, ______
Answer
D. did they ?
63
He ________ the documents before signing.
Answer
A. looked over
64
He made a _______, talking to his friend loudly during the ceremony.
Answer
B. faux pas
65
“The teacher made them write an essay” can be reframed as
Answer
A. They were made to write an essay.
66
Between you and _____, this plan might fail.
Answer
C. me
67
You ________ understood it better if you had listened carefully.
Answer
A. would have
68
He bought __________ toy for his son.
Answer
C. a UFO
69
The bikers had a moonlit _________ by the riverside.
Answer
D. rendezvous
70
“That designer dress cost her an arm and a leg” means
Answer
B. The dress is extremely costly
71
ಕನ್ನಡ ಭಾಷೆಯಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿ
Answer
D. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
72
ಈ ಕೆಳಗಿನವುಗಳಲ್ಲಿ ಸರಿಯಾದ ಪದ
Answer
A. ವಿದ್ಯಾಭ್ಯಾಸ
73
ಗಿಡವಾಗಿ ಬಗ್ಗದ್ದು ಮರವಾಗಿ ________ ಈ ಗಾದೆ ಮಾತನ್ನು ಪೂರ್ತಿಗೊಳಿಸಿ.
Answer
B. ಬಗ್ಗೀತೇ
74
‘ಧ್ಯಾನ್‌ಚಂದ್ ಅವರು ನಮ್ಮ ದೇಶದ ಪ್ರಮುಖ ಹಾಕಿ ಆಟಗಾರರಾಗಿದ್ದರು’ ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಸ್ತ್ರೀಲಿಂಗ ರೂಪ
Answer
C. ಆಟಗಾರ್ತಿ
75
‘ಕೋಲೋತ್ಸವ’ ಈ ಪದವನ್ನು ವಿಂಗಡಿಸಿ ಬರೆದಾಗ
Answer
C. ಕೋಲ + ಉತ್ಸವ
76
‘A Full pot never shakes’ ಈ ಗಾದೆ ಮಾತನ್ನು ಕನ್ನಡಕ್ಕೆ ಭಾಷಾಂತರಿಸಿದಾಗ
Answer
D. ತುಂಬಿದ ಕೊಡ ತುಳುಕುವುದಿಲ್ಲ
77
ಹಳೆಗನ್ನಡದ ‘ಪೋಗು’ ಎಂಬ ಪದವನ್ನು ‘ಹೋಗು’ ಎಂದು ಬರೆಯಬಹುದಾದರೆ ‘ಪಾವು’ ಎಂಬ ಪದವನ್ನು ಹೇಗೆ ಬರೆಯಬಹುದು ?
Answer
C. ಹಾವು
78
‘ಆಕಾಶದಲ್ಲಿ ಕಾಮನಬಿಲ್ಲು ಸುಂದರವಾಗಿ ಕಾಣುತ್ತದೆ’ ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಪರ್ಯಾಯ ಪದ
Answer
A. ಬಾನು
79
‘ನಾಲ್ಕು ಬಗೆಯ ನಾಯಕ ಪಾತ್ರಗಳನ್ನು ಶೇಣಿಯವರು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲು ಸಮರ್ಥರಾಗಿದ್ದರು’ - ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ವಿರೋಧ ಪದ
Answer
B. ಅಸಮರ್ಥ
80
ಶಿಖರ, ಸಹನೆ, ಷಟ್ಪದಿ, ರಜ - ಈ ಪದಗಳ ಅರ್ಥವನ್ನು ಶಬ್ದಕೋಶದಲ್ಲಿ ಹುಡುಕಬೇಕಾಗಿದೆ. ಇವುಗಳನ್ನು ‘ಅ’ಕಾರಾದಿಯಾಗಿ ಬರೆದಾಗ
Answer
D. ರಜ - ಶಿಖರ - ಷಟ್ಪದಿ - ಸಹನೆ
81
ಕೇರಳ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ‘ಅಬಕಾರಿ’ ಎಂಬುದು ಪರ್ಷಿಯನ್ ಭಾಷೆಯಲ್ಲಿರುವ ಪದ. ii. ಅಬಕಾರಿ ಕಾಯ್ದೆಯ ಪ್ರಕಾರ, ಒಬ್ಬ ವಯಸ್ಕನು 3 ಲೀಟರ್ ವಿದೇಶಿ ಮದ್ಯವನ್ನು ಹೊಂದಿರಬಹುದು. iii. ಕೇರಳದಲ್ಲಿ ಮದ್ಯ ಸೇವನೆಗೆ ಕನಿಷ್ಠ ವಯಸ್ಸಿನ ಮಿತಿ 23 ವರ್ಷಗಳು. iv. ಕೇರಳ ಮತ್ತು ಲಕ್ಷದ್ವೀಪದಲ್ಲಿ ಜಾರಿಯಲ್ಲಿರುವ ಕಾನೂನು ‘ಕೇರಳ ಅಬಕಾರಿ ಕಾಯ್ದೆ’ ಆಗಿದೆ.
Answer
D. i, ii ಮತ್ತು iii ಮಾತ್ರ ಸರಿಯಾಗಿವೆ
82
ವಿಮುಕ್ತಿ ಮಿಷನ್ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ‘ವಿಮುಕ್ತಿ ಮಿಷನ್’ ಎಂಬುದು ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಗುರಿಯೊಂದಿಗೆ ಕೇರಳ ಸರ್ಕಾರವು ಪ್ರಾರಂಭಿಸಿದ ಯೋಜನೆಯಾಗಿದೆ. ii. ಕೇರಳದ ಅಬಕಾರಿ ಸಚಿವರು ವಿಮುಕ್ತಿ ಮಿಷನ್‌ನ ಅಧ್ಯಕ್ಷರಾಗಿದ್ದಾರೆ. iii. ಕೇರಳ ಅಬಕಾರಿ ಇಲಾಖೆಯು ವಿಮುಕ್ತಿ ಮಿಷನ್‌ನ ನೇತೃತ್ವವಹಿಸಿದೆ. iv. ‘ವಿಮುಕ್ತಿ ಮಿಷನ್’ ಎಂಬುದು ಮಾದಕ ವ್ಯಸನಿಗಳನ್ನು ಚಿಕಿತ್ಸೆ ಮತ್ತು ಸಮಾಲೋಚನೆಗಳ ಮೂಲಕ ಮರಳಿ ತರುವ ಮತ್ತು ಹೊಸ ಪೀಳಿಗೆಯನ್ನು ಮಾದಕ ವ್ಯಸನದ ಬಲೆಗೆ ಬೀಳದಂತೆ ರಕ್ಷಿಸುವ ಗುರಿಯೊಂದಿಗೆ ರೂಪುಗೊಂಡ ಒಂದು ಮಿಷನ್ ಆಗಿದೆ.
Answer
C. i, iii, iv ಮಾತ್ರ ಸರಿಯಾಗಿವೆ
83
ಕೇರಳ ಅಬಕಾರಿ ಕಾಯ್ದೆಯಡಿ ಕೇರಳದಲ್ಲಿ ಶುಷ್ಕ ದಿನದ ಅಧಿಸೂಚನೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ ? i. ‘ಶ್ರೀ ನಾರಾಯಣ ಗುರು ಜಯಂತಿ’ ಎಂಬುದು ಕೇರಳದಲ್ಲಿ ಶುಷ್ಕ ದಿನವಾಗಿದೆ. ii. ‘ರಕ್ತ ಹುತಾತ್ಮ ದಿನ’ ಎಂಬುದು ಕೇರಳದಲ್ಲಿ ಶುಷ್ಕ ದಿನವಾಗಿದೆ. iii. ‘ಮನ್ನಂ ಜಯಂತಿ’ ಎಂಬುದು ಕೇರಳದಲ್ಲಿ ಶುಷ್ಕ ದಿನವಾಗಿದೆ. iv. ‘ಶ್ರೀ ನಾರಾಯಣ ಗುರು ಸಮಾಧಿ’ ದಿನ - ಇದು ಕೇರಳದಲ್ಲಿ ಶುಷ್ಕ ದಿನವಾಗಿದೆ.
Answer
C. i, ii, iv ಮಾತ್ರ ಸರಿಯಾಗಿವೆ
84
NDPS ಕಾಯ್ದೆಗೆ ಸಂಬಂಧಿಸಿದಂತೆ ಕೆಳಗೆ ನೀಡಲಾದ ಹೇಳಿಕೆಗಳನ್ನು ಪರಿಶೀಲಿಸಿ. i. 1985 ರಲ್ಲಿ ಕೇರಳ ಸರ್ಕಾರ ಜಾರಿಗೆ ತಂದ ಕಾನೂನು NDPS ಕಾಯ್ದೆ 1985. ii. ಮೇಲಿನ ಕಾನೂನು ಮಾದಕದ್ರವ್ಯ ಕಳ್ಳಸಾಗಣೆ ಮೂಲಕ ಗಳಿಸಿದ ಅಕ್ರಮ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿದೆ. iii. ಮೇಲಿನ ಕಾನೂನಿನ ಅಡಿಯಲ್ಲಿ ಮಾದಕದ್ರವ್ಯ ಸೇವನೆಯು ಅಪರಾಧವಾಗಿದೆ. iv. ಮೇಲಿನ ಕಾನೂನಿನ ಅಡಿಯಲ್ಲಿ ಮರಣದಂಡನೆಯನ್ನು ವಿಧಿಸಬಹುದಾದ ವಿಭಾಗಗಳಿವೆ.
Answer
C. ii, iii ಮತ್ತು iv ಮಾತ್ರ ಸರಿಯಾಗಿವೆ
85
NDPS ಕಾಯ್ದೆಯಡಿಯಲ್ಲಿ ಆರೋಪಿಯನ್ನು ಬಂಧಿಸುವಾಗ ಆತನ ದೈಹಿಕ ತಪಾಸಣೆ ನಡೆಸಲು ಗೆಜೆಟೆಡ್ ಅಧಿಕಾರಿಯ ಉಪಸ್ಥಿತಿಯ ಅಗತ್ಯವಿದೆ. ಕೆಳಗೆ ನೀಡಲಾದ ಹೇಳಿಕೆಗಳನ್ನು ಪರಿಶೀಲಿಸಿ. i. ಪೊಲೀಸ್ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬಹುದು. ii. ಅಬಕಾರಿ ಇಲಾಖೆಯ ಗೆಜೆಟೆಡ್ ಅಧಿಕಾರಿಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬಹುದು. iii. ಪ್ರೌಢಶಾಲೆಗಳ ಪ್ರಾಚಾರ್ಯರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬಹುದು. iv. ಕಂದಾಯ ಇಲಾಖೆಯ ತಹಶೀಲ್ದಾರ್‌ಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬಹುದು.
Answer
A. i, ii ಮತ್ತು iv ಮಾತ್ರ ಸರಿಯಾಗಿವೆ
86
ಡಿಸ್ಟಿಲರಿ ಮತ್ತು ವೇರ್‌ಹೌಸ್ ನಿಯಮದ ಬಗ್ಗೆ ಕೆಳಗೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿವೆ ? i. ಡಿಸ್ಟಿಲರಿಗಳಲ್ಲಿ ಉತ್ಪಾದಿಸುವ ಮದ್ಯವನ್ನು ನೇರವಾಗಿ KSBCಯ FL-1 ಅಂಗಡಿಗೆ ತಲುಪಿಸಬಹುದು. ii. ಡಿಸ್ಟಿಲರಿಗಳಲ್ಲಿ ಉತ್ಪಾದಿಸುವ ಮದ್ಯವನ್ನು ನೇರವಾಗಿ FL-3 ಬಾರ್ ಹೋಟೆಲ್‌ಗಳಿಗೆ ತಲುಪಿಸಬಹುದು. iii. ಡಿಸ್ಟಿಲರಿಗಳಲ್ಲಿ ಉತ್ಪಾದಿಸುವ ಮದ್ಯವನ್ನು ನೇರವಾಗಿ KSBCಯ FL-9 ಅಂಗಡಿಗೆ ತಲುಪಿಸಬಹುದು. iv. ಡಿಸ್ಟಿಲರಿಗಳಲ್ಲಿ ಉತ್ಪಾದಿಸುವ ಮದ್ಯವನ್ನು ಆವರಣದಲ್ಲಿ ಮಧ್ಯಮ ಪ್ರಮಾಣದಲ್ಲಿ ಚಿಲ್ಲರೆ ಮಾರಾಟ ಮಾಡಬಹುದು.
Answer
C. iii ಮಾತ್ರ ಸರಿಯಾಗಿದೆ
87
ಡಿಸ್ಟಿಲರಿ ಮತ್ತು ವೇರ್‌ಹೌಸ್ ಕಾನೂನಿನ ಪ್ರಕಾರ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ? i. ಸ್ಪಿರಿಟ್‌ಗಳನ್ನು ತಯಾರಿಸಲು ಬಳಸುವ ಮೊಲಾಸಿಸ್ ಬಿಳಿ ಬಣ್ಣವನ್ನು ಹೊಂದಿದೆ. ii. ಸ್ಪಿರಿಟ್‌ಗಳನ್ನು ತಯಾರಿಸಲು ಬಳಸುವ ಮೊಲಾಸಿಸ್ ಕಡು ಹಸಿರು ಬಣ್ಣವನ್ನು ಹೊಂದಿದೆ. iii. ಸ್ಪಿರಿಟ್‌ಗಳನ್ನು ತಯಾರಿಸಲು ಬಳಸುವ ಮೊಲಾಸಿಸ್ ಕಡು ಕಂದು ಬಣ್ಣವನ್ನು ಹೊಂದಿದೆ. iv. ಸ್ಪಿರಿಟ್‌ಗಳನ್ನು ತಯಾರಿಸಲು ಬಳಸುವ ಮೊಲಾಸಿಸ್ ಹಸಿರು ಬಣ್ಣವನ್ನು ಹೊಂದಿದೆ.
Answer
B. iii ಸರಿಯಾಗಿದೆ
88
1968 ರ ಡಿಸ್ಟಿಲರಿ ಮತ್ತು ಗೋದಾಮಿನ (Distillery and Warehouse) ಕಾನೂನಿನ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ ? i. ಸ್ಪಿರಿಟ್ ಕುಡಿಯಲು ಯೋಗ್ಯವಲ್ಲದಂತೆ ಮಾಡಲು ಮೆಥನಾಲ್ ಅನ್ನು ಸೇರಿಸಲಾಗುತ್ತದೆ. ii. ಸ್ಪಿರಿಟ್ ಕುಡಿಯಲು ಯೋಗ್ಯವಲ್ಲದಂತೆ ಮಾಡಲು ಬೆಂಜಿನ್ ಅನ್ನು ಸೇರಿಸಲಾಗುತ್ತದೆ. iii. ಸ್ಪಿರಿಟ್ ಕುಡಿಯಲು ಯೋಗ್ಯವಲ್ಲದಂತೆ ಮಾಡಲು ಪಿರಿಡಿನ್ ಅನ್ನು ಸೇರಿಸಲಾಗುತ್ತದೆ. iv. ಸ್ಪಿರಿಟ್ ಕುಡಿಯಲು ಯೋಗ್ಯವಲ್ಲದಂತೆ ಮಾಡಲು ಅಸಿಟೋನ್ ಅನ್ನು ಸೇರಿಸಲಾಗುತ್ತದೆ.
Answer
A. ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ
89
ಕೇರಳ ಅಬಕಾರಿ ಕಾಯ್ದೆಯಡಿಯಲ್ಲಿ ಯಾವ ಹೇಳಿಕೆಗಳನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ? i. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧವಾಗಿದೆ. ii. 21 ವರ್ಷದೊಳಗಿನ ವ್ಯಕ್ತಿಗಳು ಮದ್ಯ ಮಾರಾಟ ಮಾಡುವುದು ಅಪರಾಧವಾಗಿದೆ. iii. 21 ವರ್ಷದೊಳಗಿನ ವ್ಯಕ್ತಿಗಳು ಮದ್ಯ ಸೇವಿಸುವುದು ಅಪರಾಧವಾಗಿದೆ. iv. ಪ್ರಾಪ್ತ ವಯಸ್ಸಿನ ವ್ಯಕ್ತಿಯು ತನ್ನ ಸ್ವಂತ ಬಳಕೆಗಾಗಿ ತೆಂಗಿನ ಮರವನ್ನು ಕತ್ತರಿಸಿ ಸೇಂದಿ ಉಪಯೋಗಿಸುವುದು ಅಪರಾಧವಾಗಿದೆ.
Answer
A. ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ
90
ಕೇರಳದಲ್ಲಿ ಮಾರಾಟವಾಗುವ ಬಿಯರ್ ಮತ್ತು ವೈನ್‌ನ ಕನಿಷ್ಠ ಮತ್ತು ಗರಿಷ್ಠ ಪ್ರಮಾಣವು ಕ್ರಮವಾಗಿ
Answer
A. 0% ರಿಂದ 6% ಮತ್ತು 8% ರಿಂದ 15.5%
91
ಕೇರಳದಲ್ಲಿ 23 ವರ್ಷ ವಯಸ್ಸಿನ ವ್ಯಕ್ತಿಯು ಹೊಂದಬಹುದಾದ ಜಿನ್‌ನ ಪ್ರಮಾಣ ಮತ್ತು ಸ್ವಾಧೀನತೆಯ ಮಿತಿ
Answer
A. 65° P ಮತ್ತು 3 ಲೀಟರ್‌ಗಳು
92
ಗರಿಷ್ಠ 12 ಗಂಟೆಗಳ ಕಾಲಕ್ಕೆ, ಸೇಂದಿ ಅಂಗಡಿಗಳು ಮತ್ತು FL-1 ಅಂಗಡಿಗಳ ಕಾರ್ಯಾಚರಣೆಯ ಸಮಯಮಿತಿಗಳು ಕ್ರಮವಾಗಿ
Answer
A. ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಮತ್ತು ಬೆಳಿಗ್ಗೆ 9 ರಿಂದ ರಾತ್ರಿ 11 ರವರೆಗೆ
93
ತಂಬಾಕು ಉತ್ಪನ್ನಗಳನ್ನು ಹೊಂದಲು ಮತ್ತು ಬಳಸಲು ಕನಿಷ್ಠ ವಯಸ್ಸಿನ ಮಿತಿ
Answer
A. 18
94
ಸಿಗರೇಟ್‌ ಪ್ಯಾಕೆಟ್‌ಗಳ ಮೇಲಿನ ಎಚ್ಚರಿಕೆಯ ಬಗ್ಗೆ ವಿವರಿಸುವ COTP ಕಾಯಿದೆಯಡಿಯಲ್ಲಿರುವ ವಿಭಾಗ
Answer
C. 7
95
ಶಿಕ್ಷಣ ಸಂಸ್ಥೆಗಳಿಂದ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಇದರ ಪ್ರಕಾರ ನಿಷೇಧಿಸಲಾಗಿದೆ
Answer
C. 6(b)
96
ಮಾದಕ ಮದ್ಯ ನಿಷೇಧದ ವಿಷಯವು ಈ ಕೆಳಗಿನ ವಿಷಯವಾಗಿದೆ
Answer
A. ರಾಜ್ಯ ಪಟ್ಟಿ
97
ವಿಮುಕ್ತಿ ಮಿಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ
Answer
B. ಹೆಚ್ಚುವರಿ ಅಬಕಾರಿ ಆಯುಕ್ತ
98
ಭಾರತದಲ್ಲಿ ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಅಭಿಯಾನ
Answer
A. ನಶಾ ಮುಕ್ತ್ ಭಾರತ್
99
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 65 ರ ಅಡಿಯಲ್ಲಿ ಅಪರಾಧಕ್ಕೆ ಯಾವ ಮಾನಸಿಕ ಅಂಶ ಅಗತ್ಯವಾಗಿರುತ್ತದೆ ?
Answer
C. ಜ್ಞಾನ ಮತ್ತು ಉದ್ದೇಶ (Knowledge and Intention)
100
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 72 ರ ಅಡಿಯಲ್ಲಿ ಪ್ರಾಥಮಿಕವಾಗಿ ಯಾವ ವರ್ಗದ ವ್ಯಕ್ತಿಗಳನ್ನು ಗುರಿಯಾಗಿಸಲಾಗಿದೆ ?
Answer
B. ಐಟಿ ಕಾಯ್ದೆ / ನಿಯಮಗಳ ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸುವ ಅಧಿಕಾರಿಗಳು

Related reading

Discussion

Ask a doubt or share a tip.

No comments yet — start the discussion.

Leave a comment

Your email address and number are never published. Required fields are marked

We will email you a code to confirm the address. Posting creates a PSCNET account if you do not have one.

By posting, you agree to our Privacy Policy.